ಹಿರಿಯೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಅವಕಾಶವನ್ನು ಕಲ್ಪಿಸಿದ್ದಾರೆ. ಅವರ ವಿಚಾರಧಾರೆಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಮಚಂದ್ರ ಕರೆ ನೀಡಿದರು.
ಅಂಬೇಡ್ಕರ್ ಅವರು ಅಸಮಾನತೆ ಅಳಿಸಲು ಸಂವಿಧಾನ ಎಂಬ ಬೆಳಕನ್ನು ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳು ಮೂಲ ಪ್ರೇರಣೆಯಾಗಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಯಶಸ್ಸು ಕಾಣಬೇಕು. ಸಮ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರದೂ ಆಗಿದೆ ಎಂದರು.ಈ ಸಂದರ್ಭದಲ್ಲಿ ಸಂಜೀವಪ್ಪ, ದುರ್ಗೇಶ್, ಡಾ.ಶಿವ ಸೋಮಣ್ಣ, ಕೆ.ತಿಮ್ಮರಾಜು, ಕೆ.ಪಿ.ಶ್ರೀನಿವಾಸ್, ರಾಘವೇಂದ್ರ, ನಾಗರಾಜ್, ಘಾಟ್ ರವಿ, ಚಂದ್ರಪ್ಪ, ಶಿವರಾಜ್‌ಕುಮಾರ್, ಓಂಕಾರ ಮೂರ್ತಿ, ಸಿದ್ದೇಶ್, ಲಕ್ಷ್ಮಣ್, ಕೆಂಚಪ್ಪ, ಜಗದೀಶ್, ಮಲ್ಲಿಕಾರ್ಜುನ್, ಪರುಶುರಾಮ, ಪಕೀರಪ್ಪ, ಪೂಜಾರ್ ಗೋಣೆಪ್ಪ ಮುಂತಾದವರು ಉಪಸ್ಥಿತರಿದ್ದರು.