ಪ್ರತಿಯೊಬ್ಬರೂ ಬಸವಣ್ಣನ ತತ್ವ, ಸಿದ್ಧಾಂತ ಪಾಲಿಸಿ

KannadaprabhaNewsNetwork |  
Published : May 11, 2024, 01:45 AM IST
ಬಿದರಿ | Kannada Prabha

ಸಾರಾಂಶ

ಇತರೆ ಜಾತಿ, ಧರ್ಮಗಳಲ್ಲಿರುವಂತೆ ಲಿಂಗಾಯತ ಸಮಾಜದಲ್ಲೂ ಇರುವ ಚಿಕ್ಕಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಬೇಕು. ನಾವೆಲ್ಲರೂ ಲಿಂಗಾಯತರೆಂಬ ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವ ಬಿದರಿ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಇತರೆ ಜಾತಿ, ಧರ್ಮಗಳಲ್ಲಿರುವಂತೆ ಲಿಂಗಾಯತ ಸಮಾಜದಲ್ಲೂ ಇರುವ ಚಿಕ್ಕಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಬೇಕು. ನಾವೆಲ್ಲರೂ ಲಿಂಗಾಯತರೆಂಬ ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವ ಬಿದರಿ ಹೇಳಿದರು.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ನಗರದ ಇತರೆ ವೀರಶೈವ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ ಜಂಟಿ ಉತ್ಸವದ ಅಂಗವಾಗಿ ವೀರಶೈವ ಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ವೀರಶೈವರು ಹಾಗೂ ಲಿಂಗಾಯತರು ಎಂಬುದು ಬೇರೆ ಬೇರೆಯಲ್ಲ, ಎರಡೂ ಒಂದೇ ಎಂದು ಸಿದ್ಧಗಂಗಾ ಮಠದ ಲಿಂ.ಡಾ.ಶಿವಕುಮಾರ ಸ್ವಾಮೀಜಿ, ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಹೇಳಿದ್ದರು. ಎಲ್ಲರೂ ಪೂಜ್ಯರ ಈ ಮಾತನ್ನು ಚಾಚೂ ತಪ್ಪದೆ ಪಾಲಿಸಿ ಒಗ್ಗಟ್ಟಿನಿಂದ ಬಾಳಬೇಕು ಎಂದರು.ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಕಾಲದಲ್ಲಿ ವಿವಿಧ ವೃತ್ತಿ ಮಾಡುತ್ತಿದ್ದವರು ಸೇರಿ ಲಿಂಗಾಯತ ಸಮಾಜವಾಗಿದೆ. ಎಲ್ಲ ವೃತ್ತಿಗಳನ್ನು ನಾವು ಗೌರವಿಸಬೇಕು. ಲಿಂಗಾಯತರಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ಸರಿಸಮಾನರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ತುಮಕೂರು ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ, 1963ರಲ್ಲಿ ಆರಂಭವಾದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಂದಿನಿಂದ ಇಂದಿನವರೆಗೂ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಜೊತೆಗೆ ವೀರಶೈವ ಸಮಾಜದ ಅಂಗಸಂಸ್ಥೆಗಳು ಆರಂಭವಾಗಿ ಸೇವಾ ಕಾರ್ಯಗಳನ್ನು ವಿಸ್ತರಿಸಿಕೊಂಡು ಮಾಡಲಾಗುತ್ತಿದೆ ಎಂದರು.ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ ಜಂಟಿ ಉತ್ಸವ ಆಚರಿಸಲಾಗುತ್ತಿದೆ. ಮುಂದೆ ಸಿದ್ಧಗಂಗಾ ಮಠದ ಲಿಂ.ಡಾ.ಶಿವಕುಮಾರ ಸ್ವಾಮೀಜಿಗಳ ಉತ್ಸವವನ್ನೂ ಆಚರಿಸಲಾಗುವುದು ಎಂದು ಹೇಳಿದರು.ಶಿವಗಂಗೆಯ ಮೇಲಣಗವಿ ಮಠಾಧ್ಯಕ್ಷ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜದ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಮಾಜಿ ಅಧ್ಯಕ್ಷ ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಕೆ.ನಂಜುಂಡಪ್ಪ, ಸಿ.ವಿ.ಮಹದೇವಯ್ಯ, ಮಾಜಿ ಕಾರ್ಯದರ್ಶಿ ಟಿ.ಎಸ್.ಜಗನ್ನಾಥ್, ವಿವಿಧ ವೀರಶೈವ ಸಂಘ ಸಂಸ್ಥೆಗಳ ಮುಖಂಡರಾದ ಪಾರ್ವತಮ್ಮ ಜಗದೀಶ್, ಎನ್.ಬಿ.ಪ್ರದೀಪ್‌ಕುಮಾರ್, ಎಚ್.ಎನ್.ಚಂದ್ರಶೇಖರ್, ಸಾವಿತ್ರಮ್ಮ ಮುದ್ದಪ್ಪ, ಕೆ.ಎಲ್.ಗೀತಾ, ಕೆ,ಜೆ.ರುದ್ರಪ್ಪ, ಟಿ.ಸಿ.ಓಹಿಲೇಶ್ವರ್, ಕೋರಿ ಮಂಜುನಾಥ್, ಟಿ.ಆರ್.ಸದಾಶಿವಯ್ಯ, ಮೋಹನ್‌ಕುಮಾರ್ ಪಟೇಲ್, ನಾ.ಚಂ.ಗಂಗಾಧರ ಶಾಸ್ತ್ರಿ, ಟಿ.ಆರ್.ನಟರಾಜು, ನಳಿನಾ ಶಿವಾನಂದ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಟಿ.ಜೆ.ಗಿರೀಶ್, ಜಿ.ಮಲ್ಲಿಕಾರ್ಜುನಯ್ಯ, ಜ್ಯೋತಿಪ್ರಕಾಶ್, ಎಂ.ಜಿ.ಸಿದ್ಧರಾಮಯ್ಯ, ನಿಶ್ಚಲ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಕ್ಕೆ ಬರುವ ಕೇಂದ್ರ ಸಚಿವರಿಗೆ ಕಪ್ಪು ಬಾವುಟ: ಐವನ್‌
ಸಾಹಿತಿ, ರಂಗನಟ, ನಿರ್ದೇಶಕ, ಆಕಾಶವಾಣಿ ನಾಟಕ ಕಲಾವಿದ ಪ್ರೊ.ರಾಮದಾಸ್‌ ನಿಧನ