ಪ್ರತಿಯೊಬ್ಬರೂ ರಸ್ತೆ ಸುರಕ್ಷಾ ನಿಯಮ ಪಾಲಿಸಲಿ: ಶಾಂತಾರಾಮ ಸಿದ್ದಿ

KannadaprabhaNewsNetwork |  
Published : Feb 17, 2025, 12:32 AM IST
ವಿಶ್ವದರ್ಶನದಲ್ಲಿ ರಸ್ತೆ ಸುರಕ್ಷತೆ ಜೀವನ ರಕ್ಷೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಯಾವ ವ್ಯಕ್ತಿ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳುವರೋ ಅವರು ಯಶಸ್ಸಿನ ದಾರಿಗೆ ತಲುಪುತ್ತಾರೆ.

ಯಲ್ಲಾಪುರ: ಪ್ರತಿಯೊಬ್ಬರೂ ಜೀವನ ರಕ್ಷಣೆಗೆ ರಸ್ತೆ ಸುರಕ್ಷತೆಯ ಪ್ರಾಥಮಿಕ ನಿಯಮಗಳನ್ನು ಪಾಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ವಿಶ್ವದರ್ಶನ ಸೇವಾ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಫೆ. ೧೧ರಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಿತ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಅನ್ಯ ವ್ಯಕ್ತಿಯೊಂದಿಗೆ ಹೋಗುವಾಗ ಮನೆಯ ಹಿರಿಯರ ಅನುಮತಿ ಪಡೆದುಕೊಳ್ಳಿ. ಯಾವ ವ್ಯಕ್ತಿ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳುವರೋ ಅವರು ಯಶಸ್ಸಿನ ದಾರಿಗೆ ತಲುಪುತ್ತಾರೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತು ನಾಯಕತ್ವ, ರಾಷ್ಟ್ರೀಯ ಮನೋಭಾವನೆ ಮತ್ತು ಆದರ್ಶ ಬೆಳೆಸಿಕೊಳ್ಳಲು ಸಾಧ್ಯ ಎಂದರು. ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಶಿಸ್ತು ಜೀವನದಲ್ಲಿ ಅಮೂಲ್ಯ ಆಸ್ತಿ. ಜೀವನದ ಸುರಕ್ಷತೆಗೆ ಶಿಸ್ತು, ನಿಯಮ ಪಾಲನೆ ಹೆಚ್ಚು ಅಗತ್ಯ. ಶಿಕ್ಷಣ ಕ್ಷೇತ್ರದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಪಾತ್ರ ಹಿರಿಯದಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ಜ್ಞಾನ ಶಿಕ್ಷಣಕ್ಕೆ ಅವಿನಾಭಾವ ಸಂಬಂಧವಿದೆ. ಇಂದಿನ ಮಕ್ಕಳೇ ನಾಳಿನ ನಾಗರಿಕರು. ಪ್ರತಿಯೊಬ್ಬರೂ ಜೀವನದಲ್ಲಿ ನಿಯಮಗಳು ಅನುಸರಿಸಿ ಪಾಲಿಸಿದಾಗ ವ್ಯಕ್ತಿತ್ವ ವಿಕಾಸವಾಗಿ ಆದರ್ಶರಾಗುತ್ತಾರೆ ಎಂದರು. ಕಾರ್ಯಕ್ರಮವು ಪೊಲೀಸ್ ಠಾಣೆಯ ಆವರಣದಲ್ಲಿರುವ ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ ಕೇಂದ್ರಗಳು ಭೇಟಿ ನೀಡಿ, ರಸ್ತೆ ಸುರಕ್ಷಿತ ನಿಯಮಗಳ ಬ್ಯಾನರ್ ಫಲಕ ಕರಪತ್ರ ಹಂಚಿ ಜಾಗೃತಿ ಅರಿವು ನೀಡಲಾಯಿತು.ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಉಪಾಧ್ಯಕ್ಷರಾದ ಭವ್ಯ ಶೆಟ್ಟಿ, ಶಿರಸಿಯ ಆರ್‌ಟಿಒ ಮಲ್ಲಿಕಾರ್ಜುನ್ ಶ್ರೀಧರ್ ಶೆಟ್ಟಿ, ಡಿಒಸಿ ಲಯನ್ ವೀರೇಶ ಮಾದಿರ ಇತರರು ಉಪಸ್ಥಿತರಿದ್ದರು. ಭಾರತ್ ಸ್ಕೌಟ್ಸ್ ಗೈಡ್ಸ್‌ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯಕ್ ಸ್ವಾಗತಿಸಿ, ನಿರ್ವಹಿಸಿದರು. ಸತೀಶ್ ಶೆಟ್ಟಿ ವಂದಿಸಿದರು.ಗೋಕರ್ಣ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯ

ಗೋಕರ್ಣ: ಇಲ್ಲಿನ ಮುಖ್ಯ ಕಡಲತೀರದಲ್ಲಿ ಫೆ. ೨೬ರಿಂದ ನಡೆಯಲಿರುವ ಶಿವರಾತ್ರಿ ಉತ್ಸವದ(ಸಾಂಸ್ಕೃತಿಕ ಕಾಯಕ್ರಮ) ಪ್ರಯುಕ್ತ ಪೂರ್ವಭಾವಿಯಾಗಿ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.ಕಾರವಾರ ಪಹರೆ ವೇದಿಕೆಯ ಗೋಕರ್ಣ ಘಟಕ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಸಂಘಟನೆಯವರು, ಸಾರ್ವಜನಿಕರು ಒಟ್ಟಾಗಿ ಎರಡು ಕಿಮೀಗೂ ಹೆಚ್ಚು ವಿಸ್ತಾರದ ಕಡಲ ತಟದಲ್ಲಿ ಬಿದ್ದ ಕಸ, ಕಡ್ಡಿಯನ್ನ ತೆಗೆದು ಸಂಗ್ರಹಿಸಿ ವಿಲೇವಾರಿಗೆ ಗ್ರಾಮ ಪಂಚಾಯಿತಿಗೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಪಹರೆ ವೇದಿಕೆಯ ಹರೀಶ ಗೌಡ, ಮಹೇಶ ಶೆಟ್ಟಿ,ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಬೀಚ್ ಹೋಟೆಲ್ ಮಾಲೀಕರ ಸಂಘದ ನಿತ್ಯಾನಂದ ಶೆಟ್ಟಿ, ನಾಗರಾಜ ಗೌಡ, ಶಂಕರ ಗೌಡ ಹೆಗ್ರೆ, ರಮೇಶ ಗೌಡ, ರಾಮೇಶ್ವರ ಕುರ್ಲೆ, ಗ್ರಾಪಂ ಸದಸ್ಯರಾದ ಪ್ರಭಾಕರ ಪ್ರಸಾದ, ಲಕ್ಷ್ಮೀಶ ಗೌಡ, ಮಂಜು ಶೆಟ್ಟಿ, ಶೇಖರ ನಾಯ್ಕ ಇತರರು ಇದ್ದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ