- ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಪ್ರತಿಯೊಂದು ಸಮಾಜ ಮತ್ತು ವರ್ಗಕ್ಕೂ ಸರ್ಕಾರದ ಸವಲತ್ತು ಹಾಗೂ ಗೌರವ ಸಿಗಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದಡಿ ಎಲ್ಲರಿಗೂ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬ ಆಶಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದಿವಾಸಿಗಳು ಈ ದೇಶದ ಮೂಲ ನಿವಾಸಿಗರು, ಅವರನ್ನು ದೇಶದ ಮುಖ್ಯವಾಹಿನಿಗೆ ತರುವುದು ಮತ್ತು ಬದುಕುವ ಶಕ್ತಿ ತುಂಬುವುದು ಅತ್ಯಗತ್ಯ ಎಂದರು.ಪ್ರಸ್ತುತ 4 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಗುರಿ ಸರ್ಕಾರ ಹೊಂದಿದೆ. ಇದು ಕೇವಲ ಕ್ರೀಡಾಕೂಟದದದದದವಲ್ಲ, ಬದಲಾಗಿ ಬುಡಕಟ್ಟು ಸಮುದಾಯಗಳನ್ನು ಒಗ್ಗೂಡಿಸಿ ಅವರಲ್ಲಿ ವಿಶ್ವಾಸ ಮೂಡಿಸಿ ಸಂಘಟನೆ ಬಲಪಡಿಸುವ ವೇದಿಕೆ ಎಂದು ಹೇಳಿದರು.
ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಅತಿ ಹಿಂದುಳಿದ ಬುಡಕಟ್ಟು ಸಮಾಜದ ಮಕ್ಕಳು ಶಿಕ್ಷಣ ಮತ್ತು ಕ್ರೀಡೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಡಾ. ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಇಂದು ಪ್ರತಿ ವ್ಯಕ್ತಿಗೂ ಗೌರವ ಮತ್ತು ಸಮಾನ ಕಾನೂನು ಅವಕಾಶ ಲಭ್ಯವಾಗುತ್ತಿವೆ. ಬುಡಕಟ್ಟು ಸಮಾಜಕ್ಕೆ ಸಿಗುತ್ತಿರುವ ಇಂತಹ ವೇದಿಕೆಗಳು ಸಂವಿಧಾನದ ಫಲ ಎಂದರು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಆದರ್ಶ ಸ್ಮರಿಸಿದ ಅವರು, ಹಿಂದುಳಿದ ವರ್ಗದ ಮಕ್ಕಳು ಸಮಾಜದ ಇತರರಂತೆ ಉತ್ತಮ ಬುದ್ಧಿಮತ್ತೆ ಮತ್ತು ಸ್ಥಾನಮಾನ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿ ಇಂತಹ ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿದರು.
ಫೋಟೊ