ಪ್ರತಿಯೊಬ್ಬರೂ ಗುರಿ ತಲುಪಲು ಕ್ರಿಯಾ ಯೋಜನೆ ಹೊಂದಿರಬೇಕು: ಡಾ.ರವಿಕುಮಾರ್

KannadaprabhaNewsNetwork |  
Published : May 22, 2026, 01:15 AM IST
37 | Kannada Prabha

ಸಾರಾಂಶ

ಯಾವುದೇ ಕ್ಲಬ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಬೆಂಬಲದಿಂದ ಮಾತ್ರ ಯಶಸ್ವಿಯಾಗುತ್ತದೆ. ಕಾಲೇಜಿನೊಳಗೆ ಓಪನ್ ಸೋರ್ಸ್ ಲ್ಯಾಬ್ ಅನ್ನು ಹೊಂದಬೇಕು. ಇದು ವಿದ್ಯಾರ್ಥಿಗಳ ತಾಂತ್ರಿಕ ಅನ್ವೇಷಣೆಗಳಲ್ಲಿ ಬೆಂಬಲ ನೀಡಲು 24x7 ಪ್ರವೇಶಿಸಬಹುದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಂಗ್ಲಿಷ್‌ ನಲ್ಲಿ ತಮ್ಮ ಸಂವಹನ ಕೌಶಲ್ಯವನ್ನು ಸುಧಾರಿಸಲು ಟೋಸ್ಟ್ ಮಾಸ್ಟರ್ ಕ್ಲಬ್‌ ಗೆ ಸೇರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬರೂ ಕ್ರಿಯಾ ಯೋಜನೆ ಹೊಂದಿರಬೇಕು, ಅದು ಇಲ್ಲದೆ ತಮ್ಮ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ತರಬೇತಿ ಮತ್ತು ಉದ್ಯೋಗ ಡೀನ್ ಡಾ.ರವಿಕುಮಾರ್ ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದಲ್ಲಿ ಐಟಿ ಕ್ಲಬ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಐಟಿ ಕ್ಲಬ್‌ ನ ಪ್ರಾಥಮಿಕ ಗುರಿ ಹೊಸ ತಂತ್ರಜ್ಞಾನಗಳು ಮತ್ತು ಸಂಶೋಧನೆಯಲ್ಲಿ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಹೆಚ್ಚಿಸುವುದಾಗಿದೆ. ಅದು ಅವರನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದರು.

ಯಾವುದೇ ಕ್ಲಬ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಬೆಂಬಲದಿಂದ ಮಾತ್ರ ಯಶಸ್ವಿಯಾಗುತ್ತದೆ. ಕಾಲೇಜಿನೊಳಗೆ ಓಪನ್ ಸೋರ್ಸ್ ಲ್ಯಾಬ್ ಅನ್ನು ಹೊಂದಬೇಕು. ಇದು ವಿದ್ಯಾರ್ಥಿಗಳ ತಾಂತ್ರಿಕ ಅನ್ವೇಷಣೆಗಳಲ್ಲಿ ಬೆಂಬಲ ನೀಡಲು 24x7

ಪ್ರವೇಶಿಸಬಹುದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಂಗ್ಲಿಷ್‌ ನಲ್ಲಿ ತಮ್ಮ ಸಂವಹನ ಕೌಶಲ್ಯವನ್ನು ಸುಧಾರಿಸಲು ಟೋಸ್ಟ್ ಮಾಸ್ಟರ್ ಕ್ಲಬ್‌ ಗೆ ಸೇರಬೇಕು ಎಂದರು.

ಕಾಲೇಜಿನಲ್ಲಿ ಎಂಸಿಎ ಕೋರ್ಸ್ ಆರಂಭವಾದ ಮೊದಲ ವರ್ಷದಲ್ಲೇ ಐಟಿ ಕ್ಲಬ್ ಆರಂಭಿಸಿರುವುದು ಶ್ಲಾಘನಿಯ. ಅದೇ ರೀತಿ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಲಬ್‌ ಗಳು ಸ್ಥಾಪನೆಯಾಗಲಿ ಎಂದರು.

ವಿಭಾಗದ ಮುಖ್ಯಸ್ಥೆ ಡಾ.ಡಿ. ಶೋಭಾ ಮಾತನಾಡಿ, ಶೈಕ್ಷಣಿಕ ಗಳಿಕೆ ಮತ್ತು ಉದ್ಯಮದ ವಾಸ್ತವತೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಕ್ಲಬ್‌ ನ ಮುಖ್ಯ ಉದ್ದೇಶವಾಗಿದೆ. ಇದು ಸಿದ್ಧಾಂತ, ಅಭ್ಯಾಸ ಮತ್ತು ಕುತೂಹಲ ಸೃಷ್ಟಿಯನ್ನು ಪೂರೈಸುವ ಡಿಜಿಟಲ್ ಆಟದ ಮೈದಾನವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನವೂ ಶಬ್ದಕೋಶವನ್ನು ಸುಧಾರಿಸುವ ಮೂಲಕ ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸಬೇಕು. ಇದು ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದರು.

ಮಾನಸ ತಂಡದವರು ಪ್ರಾರ್ಥಿಸಿದರು. ಡಾ.ಎಸ್. ಪೂರ್ಣಿಮಾ ಸ್ವಾಗತಿಸಿದರು. ಸಿಂಧೂ ನಿರೂಪಿಸಿದರು. ಎಂ. ಗೀತಾಂಜಲಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರಸಭೆ ಅಧ್ಯಕ್ಷರಾಗಿ ಭವ್ಯಾ ಮಂಜುನಾಥ್ ಅವಿರೋಧ ಆಯ್ಕೆ
ಬಿಜೆಪಿ-ಕಾಂಗ್ರೆಸ್‌ ಹೈಡ್ರಾಮ: ಕೈ ಕೈ ಮಿಲಾಯಿಸಿದ ಕಾರ್ಯಕರ್ತರು