ಪ್ರತಿಯೊಬ್ಬರು ಕಾನೂನು ಜ್ಞಾನ ಅರಿಯಬೇಕು

KannadaprabhaNewsNetwork |  
Published : Dec 29, 2023, 01:32 AM IST
ಸಸಸಸ | Kannada Prabha

ಸಾರಾಂಶ

ಪ್ರತಿಯೊಬ್ಬರು ಕಾನೂನು ಜ್ಞಾನ ಅರಿಯಬೇಕು. ರಸ್ತೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಜೀವ ಹಾನಿ ಉಂಟಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪ್ರತಿಯೊಬ್ಬರು ಕಾನೂನು ಜ್ಞಾನ ಅರಿಯಬೇಕು. ರಸ್ತೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಜೀವ ಹಾನಿ ಉಂಟಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸ್, ಜಮಖಂಡಿ ಉಪವಿಭಾಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಜಮಖಂಡಿ, ಮುಧೋಳ ಸಹಯೋಗದಲ್ಲಿ ಗುರುವಾರ ನಡೆದ ಅಪರಾಧ ತಡೆ ಮಾಸಾಚರಣೆ, ಉಪವಿಭಾಗಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳು ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನು ಸುವ್ಯಸ್ಥೆ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಪಕ್ಷ ಪಂಗಡ ಎನ್ನದೇ ಕಾರ್ಯ ಮಾಡುತ್ತಾರೆ. ಸಿನಿಮಾದಲ್ಲಿ ನೋಡಿದಂತೆ ಪೊಲೀಸರು ಇರುವುದಿಲ್ಲ. ಆದರೆ ಪೊಲೀಸರು ಮಾಡುವ ಕಾರ್ಯ ನೋಡಿದರೆ ಅವರ ಮೇಲೆ ಅಭಿಮಾನ ಹೆಚ್ಚುತ್ತೆ ಎಂದರು.

ಸೈನಿಕರು ದೇಶದ ಗಡಿ ಕಾಯುತ್ತಾರೆ. ಪೊಲೀಸರು ದೇಶದೊಳಗೆ ಜನರ ಮಧ್ಯೆ ಇದ್ದುಕೊಂಡು ಸಂದೇಹ ಬರುವ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಾ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಮಾಡುತ್ತಾರೆ ಎಂದರು.

ಪ್ರತಿಯೊಬ್ಬರು ಸಮಾಜದಲ್ಲಿ ಏನೇ ಅಹಿತಕರ ಘಟನೆಗಳು ನಡೆದರೆ ಅಂತಹವುಗಳ ಬಗ್ಗೆ ಸಹಾಯವಾಣಿ 112 ಕೂಡಲೇ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಪೊಲೀಸರ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.

ದೇಶದಲ್ಲಿ ನಡೆಯುವ ಅಪಘಾತದಲ್ಲಿ ಹೆಲ್ಮೇಟ್ ಧರಿಸದ ಬೈಕ್ ಸವಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾವನಪ್ಪಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಬೈಕ್ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಕಾರಿನಲ್ಲಿ ಸಂಚರಿಸುವಾಗ ಸಿಟ್ ಬೇಲ್ಟ್ ಧರಿಸಬೇಕು ಎಂದರು.

ಡಿವೈಎಸ್‌ಪಿ ಶಾಂತವೀರ ಈ ಮಾತನಾಡಿ, ಪ್ರತಿಯೊಬ್ಬರು ಕಾನೂನು ಪರಿಪಾಲನೆ ಮಾಡಬೇಕು. ಕಾನೂನು ಜ್ಞಾನ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಜೆ.ಪಿ.ದೊಡಮನಿ, ಬಿಇಒ ಎ.ಕೆ.ಬಸಣ್ಣವರ ಮಾತನಾಡಿದರು. ಮುಧೋಳ ಸಂಗಮನಾಥ ಶಾಲೆಯ ವಿದ್ಯಾರ್ಥಿನಿ ಪ್ರತಿಭಾ ಚವ್ಹಾನ ಮೊಬೈಲ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಬನಹಟ್ಟಿ ಸಿಪಿಐ ಸಂಜು ಬಳಿಗಾರ, ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ ಇತರರು ಇದ್ದರು. ಕಸ್ತೂರಬಾ ಶಾಲಾ ವಿದ್ಯಾರ್ಥಿನಿಯರು ಪಾರ್ಥಿಸಿದರು. ಬಿಆರ್‌ಸಿಓ ರಮೇಶ ಅವಟಿ ಸ್ವಾಗತಿಸಿದರು. ಬಿಆರ್‌ಪಿ ಶಿವು ಯಾದವಾಡ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ