ಪ್ರತಿಯೊಬ್ಬರೂ ಮರಗಳನ್ನು ಬೆಳೆಸಿ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Jun 07, 2025, 12:40 AM IST
5ಕಕೆಡಿಯು1. | Kannada Prabha

ಸಾರಾಂಶ

ಕಡೂರು, ಮನೆಗೊಂದು ಮರ ಎಂಬಂತೆ ಪ್ರತಿಯೊಬ್ಬರೂ ಮರಗಳನ್ನು ಬೆಳೆಸುವ ಜೊತೆಗೆ ಮನೆ ಮುಂದೆ ಸಸಿ ಬೆಳೆಸಿ ಆದರ ಸದುಪಯೋಗ ಪಡೆಯಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕರೆ ನೀಡಿದರು.

ಪುರಸಭೆ ಸಹಯೋಗದಲ್ಲಿ ಶ್ರೀ ಮಾತಾ ಲೇಔಟ್ ನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ

ಕನ್ನಡ ಪ್ರಭ ವಾರ್ತೆ, ಕಡೂರು

ಮನೆಗೊಂದು ಮರ ಎಂಬಂತೆ ಪ್ರತಿಯೊಬ್ಬರೂ ಮರಗಳನ್ನು ಬೆಳೆಸುವ ಜೊತೆಗೆ ಮನೆ ಮುಂದೆ ಸಸಿ ಬೆಳೆಸಿ ಆದರ ಸದುಪಯೋಗ ಪಡೆಯಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕರೆ ನೀಡಿದರು.

ಗುರುವಾರ ಪುರಸಭೆ ಮತ್ತು ವಿವಿಧ ಇಲಾಖೆ ಮತ್ತು ಸಂಘಟನೆಗಳ ಸಹಯೋಗದಲ್ಲಿ ಶ್ರೀ ಮಾತ ಲೇಔಟ್ ನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಮೂಲಕ ಮಾತನಾಡಿದರು. ಇಂದು ಪುರಸಭೆಯಿಂದ ವಿಶ್ವ ಪರಿಸರ ದಿನಾಚರಣೆ ನಡೆಯುತ್ತಿದ್ದು ಸಸಿಗಳನ್ನು ನೆಡುವ ಮೂಲಕ ಪಟ್ಟಣದಾದ್ಯಂತ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮರಗಳಿಂದ ನಮಗೆ ಏನು ಉಪಯೋಗ ಹಾಗೂ ಏತಕ್ಕೆ ಬೆಳೆಸಬೇಕೆಂಬ ಅರಿವು ಹೊಂದಬೇಕು ಎಂದರು.

ಕೋವಿಡ್ ನಂತಹ ಹೆಮ್ಮಾರಿ ಬಂದ ಸಂದರ್ಭದಲ್ಲಿ ಮರಗಳು ನಮಗೆ ಆಕ್ಸಿಜನ್ ನೀಡಿದವು. ಮರಗಳಿಂದ ಮನುಷ್ಯನಿಗೆ ಉತ್ತಮ ಹವಾಮಾನದ ಸಿಗುತ್ತದೆ ಮತ್ತು ಪರಿಸರ ನಿರ್ಮಾಣದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಕಾರ್ಯಕ್ರಮವನ್ನು ಪುರಸಭೆ ಮತ್ತು ವಿವಿಧ ಇಲಾಖೆಗಳಿಂದ ಪರಿಸರ ಜಾಗೃತಿ ಮೂಡಿಸಲು ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗಿಡಗಳನ್ನು ಬೆಳೆಸುವ ಅಗತ್ಯ ಇರುವ ಕಡೆ ಪುರಸಭೆಯಿಂದ ಮಾಡಲಾಗುವುದು ಸಾರ್ವಜನಿಕರು ಇಂತಹ ಉತ್ತಮ ಕಾರ್ಯ ಕ್ರಮಕ್ಕೆ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮರ ಇದ್ದರೆ ಮಳೆ ಬೆಳೆ ಕಾಡಿನ ಬೆಟ್ಟ ಗುಡ್ಡಗಳಲ್ಲಿ ಇರುವ ಕಾಡಿನಿಂದಾಗಿ ಮೋಡ ಕರಗಿಸಿ ಮಳೆ ಬರಲು ಸಹಕಾರ ಮಾಡುವುದು ಮರಗಳು. ಅದರ ಪ್ರಾಮುಖ್ಯತೆ ಅರಿತು ಪರಿಸರ ಉಳಿಸಲು ಕೈಜೋಡಿಸಬೇಕು ಎಂದು ಹೇಳಿ ಶುಭ ಹಾರೈಸಿದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಮಕ್ಕಳಿಲ್ಲ ಎಂಬ ಕೊರಗನ್ನು ಸಾಲು ಮರದ ತಿಮ್ಮಕ್ಕನವರು ಸಾಲು ಮರಗಳನ್ನು ನೆಡುವ ಮೂಲಕ ನೀಗುವ ಜೊತೆಗೆ ಪರಿಸರ ಪ್ರಜ್ಞೆ ಮೂಡಿಸಿದ್ದಾರೆ. ಅವರು ನಮಗೆ ಮಾದರಿಯಾಗಿದ್ದು, ನಮ್ಮ ಸುತ್ತಮುತ್ತಲಿನ ಜನರು ಸಸಿಗಳನ್ನು ಬೆಳೆಸಿ ಪರಿಸರ ಉಳಿಸಬೇಕು. ಈ ನಿಟ್ಟಿನಲ್ಲಿ ಪುರಸಭೆಯಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶ್ರೇಯಸ್ ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದ ಅಮೃತ್ ಯೋಜನೆಯಲ್ಲಿ ಮಹಿಳೆಯರು ಭಾಗಿಯಾಗಿ ಪರಿಸರ ದಿನ ಆಚರಿಸಲಾಗುತ್ತಿದೆ. ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಸಿರು ಪ್ರತಿಜ್ಞೆ ಮಾಡುವ ಮೂಲಕ ಪರಿಸರ ಉಳಿಸಲು ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಲ್ಲಿ ಈ ಕಾರ್ಯಕ್ರಮವನ್ನು ಪುರಸಭೆಯಿಂದ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಕೆ.ಎಸ್ ಮಂಜುನಾಥ್, ಪುರಸಭಾ ಸದಸ್ಯರಾದ ಗೋವಿಂದರಾಜು, ಸುಧಾ ಉಮೇಶ್, ಮನು ಮರುಗುದ್ದಿ, ಸಂದೇಶ್ ಕುಮಾರ್‌,ಮೋಹನ್, ನಾಮಕರಣ ಸದಸ್ಯರಾದ ವಿನಯ್ ದಂಡಾವತಿ, ಕೃಷ್ಣಪ್ಪ, ಕಡೂರು ದೇವೇಂದ್ರ, ಮುಖಂಡರಾದ ಚಿನ್ನರಾಜು, ಅಧಿಕಾರಿಗಳಾದ ಜಗದೀಶ್, ಕುಮಾರಸ್ವಾಮಿ, ಲಕ್ಷ್ಮೀಶ್ , ನಲ್ಮ್ ಯೋಜನೆಯ ಮಹಿಳಾ ಪದಾಧಿಕಾರಿಗಳು ಸೇರಿದಂತೆ ನಾಗರಿಕರು ಹಾಜರಿದ್ದರು.

5ಕೆಕೆಡಿಯು1..

ಕಡೂರು ಪಟ್ಟಣದ ಮಾತಾ ಲೇಔಟ್ ನಲ್ಲಿ ಪುರಸಭೆಯಿಂದ ಮತ್ತು ವಿವಿಧ ಇಲಾಖೆ ಮತ್ತು ಸಂಘಟನೆಗಳ ಸಹಯೋಗದಿಂದ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಉಪಾಧ್ಯಕ್ಷೆ ಮಂಜುಳಾ ಚಂದ್ರು ಮತ್ತಿತರರು ಇದ್ದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''