ಪರಿಸರ ಉಳಿಸಲು ಎಲ್ಲರೂ ಗಿಡ ನೆಡಬೇಕು:ಸಮಾಜಸೇವಕ ಲೋಹಿತ್ ಸಿ.ವಿ.

KannadaprabhaNewsNetwork |  
Published : Jun 23, 2024, 02:03 AM IST
22ಎಚ್ಎಸ್ಎನ್17 : ರಾಚೇನಹಳ್ಳಿಯ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. | Kannada Prabha

ಸಾರಾಂಶ

ಸರ್ಕಾರಿ ಶಾಲಾ ಆವರಣವನ್ನು ಸ್ವಚ್ಛವಾಗಿ ಇರಿಸಲು ಮತ್ತು ಪರಿಸರವನ್ನು ಕಾಪಾಡಲು ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು ಎಂದು ಸಮಾಜಸೇವಕ ಲೋಹಿತ್ ಸಿ.ವಿ. ತಿಳಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ ಶಾಲೆಗಳಿಗೆ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಲಹೆ । ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸರ್ಕಾರಿ ಶಾಲಾ ಆವರಣವನ್ನು ಸ್ವಚ್ಛವಾಗಿ ಇರಿಸಲು ಮತ್ತು ಪರಿಸರವನ್ನು ಕಾಪಾಡಲು ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು ಎಂದು ಸಮಾಜಸೇವಕ ಲೋಹಿತ್ ಸಿ.ವಿ. ತಿಳಿಸಿದ್ದಾರೆ.

ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ರಾಚೆನಹಳ್ಳಿ. ಕಾಂತರಾಜಪುರ. ಹಿರೇಬಿಳತಿ ಗ್ರಾಮಗಳಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಭೂಮಿ ಉಳಿಸಿ ಆಂದೋಲನ ಸಂಘ ಜಂಟಿಯಾಗಿ ಹಮ್ಮಿಕೊಂಡ ಶಾಲೆಗಳಿಗೆ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳು ವಾತಾವರಣವನ್ನು ಸ್ವಚ್ಛವಾಗಿ ಇಡಲು ಇಂತಹ ಸರ್ಕಾರಿ ಶಾಲೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವು ಉತ್ತಮವಾಗಿದೆ. ಏಕೆಂದರೆ ಈಗಾಗಲೇ ಸಾರ್ವಜನಿಕರಿಗೆ ಉತ್ತಮವಾದ ಪರಿಸರ ಮತ್ತು ಗಾಳಿ ಬೆಳಕು ಹಾಗೂ ಸಮರ್ಪಕವಾಗಿ ನೀರು ದೊರಕುತ್ತಿಲ್ಲ. ಇದರ ಹಿನ್ನೆಲೆ ಪರಿಸರವನ್ನು ಮತ್ತು ಮರ ಗಿಡಗಳನ್ನು ನಾಶ ಮಾಡುತ್ತಿರುವ ಪ್ರಕೃತಿಯು ಮನುಷ್ಯನಿಗೆ ತಕ್ಕ ಪಾಠವನ್ನು ಸಹ ಕಲಿಸುತ್ತಿದೆ. ಇದರಿಂದ ಎಚ್ಚೆತ್ತುಕೊಂಡು ಪ್ರತಿಯೊಬ್ಬರೂ ಕೂಡ ಮರಗಿಡಗಳನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಅಶೋಕ್ ಮಾತನಾಡಿ, ಮನುಷ್ಯ ಪರಿಸರಕ್ಕೆ ಏನನ್ನು ನೀಡಿದ್ದಾನೆ ಎಂದು ಒಮ್ಮೆ ಅವಲೋಕನ ಮಾಡಿಕೊಂಡರೆ ಅದರಂತಹ ಮಹಾನ್ ಕಾರ್ಯ ಬೇರೆ ಯಾವುದೂ ಇಲ್ಲ. ಏಕೆಂದರೆ ಪರಿಸರ ಮನುಷ್ಯನಿಗೆ ಅನೇಕ ಬಗೆಯ ಅನುಕೂಲಕರ ಕಾರ್ಯಗಳು ಇವೆ. ಅವುಗಳಲ್ಲಿ ಉತ್ತಮ ಗಾಳಿ, ಬೆಳಕು, ಕಾಲಕಾಲಕ್ಕೆ ಮಳೆ, ಬೆಳೆ ಇವುಗಳನ್ನು ಒಳಗೊಂಡಂತೆ ಪರಿಸರವು ಮನುಷ್ಯನಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಆದರೆ ಮನುಷ್ಯ ಪರಿಸರವನ್ನೇ ಹಾಳು ಮಾಡುತ್ತ ಪ್ರಕೃತಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾನೆ. ಇವುಗಳ ಕಡಿವಾಣಕ್ಕೆ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಪರಿಸರವನ್ನು ಉಳಿಸುವ ಮಹಾನ್ ಕಾರ್ಯದಲ್ಲಿ ತೊಡಗಿದೆ. ತಾಲೂಕಿನಲ್ಲಿ ೧೦೦ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಗಿಡ ಮರಗಳನ್ನು ಬೆಳೆಸಬೇಕು. ಈ ಪರಿಸರ ವಾತಾವರಣದಲ್ಲಿ ಮಕ್ಕಳಿಗೆ ಉತ್ತಮವಾದ ಪಾಠ ಪ್ರವಚನಗಳು ನಡೆಯಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಸಂಚಾಲಕ ಜಯರಾಮ್. ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಮಾದೇವ್ ಬೆಕ್ಕ, ಪಂಚಾಯಿತಿಯ ಅಧ್ಯಕ್ಷ ಕೇಶವ. ಸಿ.ಆರ್.ಪಿ ಜ್ಞಾನೇಶ್, ಮುಂತಾದವರು ಹಾಜರಿದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’