ಕೆರೆ-ಕಟ್ಟೆಗಳು ಜನರ ಹಾಗೂ ಜಾನುವಾರುಗಳ ಜೀವನಾಡಿಯಾಗಿದ್ದು, ಅವುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕಿದೆ ಎಂದು ಕಳಸಾಪೂರ-ಮಲ್ಲಸಮುದ್ರ-ಸೊರಟೂರಿನ ಓಂಕಾರೇಶ್ವರ ಹಿರೇಮಠದ ಫಕ್ಕೀರೇಶ್ವರ ಪಟ್ಟಾಧ್ಯಕ್ಷರು ಹೇಳಿದರು.
ಗದಗ: ಕೆರೆ-ಕಟ್ಟೆಗಳು ಜನರ ಹಾಗೂ ಜಾನುವಾರುಗಳ ಜೀವನಾಡಿಯಾಗಿದ್ದು, ಅವುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕಿದೆ ಎಂದು ಕಳಸಾಪೂರ-ಮಲ್ಲಸಮುದ್ರ-ಸೊರಟೂರಿನ ಓಂಕಾರೇಶ್ವರ ಹಿರೇಮಠದ ಫಕ್ಕೀರೇಶ್ವರ ಪಟ್ಟಾಧ್ಯಕ್ಷರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಗದಗ ತಾಲೂಕು ಹಾಗೂ ಹುಯಿಲಗೋಳ ಗ್ರಾಮ ಪಂಚಾಯಿತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಿಂದ ’ನಮ್ಮೂರು-ನಮ್ಮ ಕೆರೆ’ ಯೋಜನೆ ಅಡಿ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಗ್ರಾಮಗಳಲ್ಲಿನ ಕೆರೆ ಸಂರಕ್ಷಣೆ ನಮ್ಮೆಲ್ಲರ ಅತ್ಯವಶ್ಯಕ ಜವಾಬ್ದಾರಿ. ಕೆರೆ ಸಂರಕ್ಷಣೆಯಿಂದ ಭೂಮಿಯ ಮೇಲಿನ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಮನುಷ್ಯರಿಗೂ ಅನುಕೂಲಕರವಾಗಿದ್ದು, ಮುಂದಿನ ಜನಾಂಗದ ಪೀಳಿಗೆಗೆ ಅದನ್ನು ಸಂರಕ್ಷಣೆ ಮಾಡುವುದು ಮತ್ತು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೋಶ್ರೀ ಹೇಮಾವತಿ ಅಮ್ಮನವರು ಕೆರೆ ಸಂರಕ್ಷಣೆಯ ಮೂಲಕ ರಾಜ್ಯದಲ್ಲಿ ಈಗಾಗಲೇ 803 ಕೆರೆಗಳ ಕಾಮಗಾರಿ ನೆರವೇರಿಸಿದ್ದಾರೆ ಎಂದರು. ಭೂಮಿಪೂಜೆ ನೆರವೇರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲಾ ನಿರ್ದೇಶಕ ಯೋಗೇಶ ಎ. ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿ ಗಾಗಿಯೇ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಆರಂಭಿಸಿದ್ದಾರೆ.ಈ ಕೆರೆ ಕಾರ್ಯಕ್ರಮ ಮಾತೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸು ಎಂದ ಅವರು ಅನೇಕ ಮಾಹಿತಿಯನ್ನು ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಚಂದ್ರಶೇಖರ್ ಹುಣಸಿಕಟ್ಟಿ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಯಿಲಗೋಳ ಗ್ರಾ ಪಂ ಅಧ್ಯಕ್ಷ ಟಿಪ್ಪು ಸುಲ್ತಾನ್ ನದಾಫ್, ಪಿಡಿಒ ವಾಸುದೇವ್ ಪೂಜಾರ್, ಕ್ಷೇತ್ರ ಯೋಜನಾಧಿಕಾರಿಗಳು ಸುರೇಂದ್ರ ನಾಯಕ್ , ಕೆರೆ ಅಭಿಯಂತರ ಸತೀಶ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು. ಕೆರೆ ಸಮಿತಿ ಅಧ್ಯಕ್ಷ ತಿಪ್ಪಣ್ಣ ಗಂಗಪ್ಪನ ವರ ಅಧ್ಯಕ್ಷತೆ ವಹಿಸಿದ್ದರು. ಕೆರೆ ಸಮಿತಿಯ ಸರ್ವ ಸದಸ್ಯರು, ಹುಯಿಲಗೋಳ ಗ್ರಾಮದ ನವಜೀವನ ಸಮಿತಿಯ ಸದಸ್ಯರು, ಸ್ವ ಸಹಾಯ ಸಂಘ ಹಾಗೂ ಪ್ರಗತಿ ಬಂಧು-ಸಂಘಗಳ ಸದಸ್ಯರು ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳಿದ್ದರು. ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ್‌ಗೌಡ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ಕಿರಣ ಮಹೇಂದ್ರಕರ ಸ್ವಾಗತಿಸಿದರು.ಕೆರೆ ಹೂಳೆತ್ತಿ, ನೀರು ಸಂಗ್ರಹಣೆ ಮಾಡುವುದರಿಂದ ಕೇವಲ ಜನ ಮತ್ತು ಜಾನುವಾರುಗಳಿಗೆ ಅನುಕೂಲ ಅಷ್ಟೇ ಅಲ್ಲ, ಆಯಾ ಪ್ರದೇಶದ ಅಂತರ್ಜಲ ಹೆಚ್ಚಳವಾಗಿ, ಬಿಸಿಲಿನ ತಾಪಮಾನ ಕಡಿಮೆಯಾಗಿಸಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲಾ ನಿರ್ದೇಶಕ ಯೋಗೇಶ ಎ. ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.