ಪ್ರತಿಯೊಬ್ಬರೂ ಹಿರಿಯರನ್ನು ಗೌರವದಿಂದ ಕಾಣಿ: ಸಂಸ್ಕಾರ ದೀಕ್ಷೆ ಕಾರ್ಯಕ್ರಮದಲ್ಲಿ ವೀರೇಶಾನಂದ ಸ್ವಾಮೀಜಿ ಮನವಿ

KannadaprabhaNewsNetwork |  
Published : Jan 08, 2025, 12:16 AM IST
ಫೋಟೋ ಜ.೭ ವೈ.ಎಲ್.ಪಿ. ೦೧  | Kannada Prabha

ಸಾರಾಂಶ

ತಂದೆಯ ಮಾತಿಗಾಗಿ ಬದ್ಧತೆಯಿಂದ ಕಾಡಿಗೆ ಹೊರಟ ಶ್ರೀರಾಮ ನಮ್ಮ ಆದರ್ಶ. ಆದರ್ಶ ಸಹೋದರ ಭರತ ನಮಗೆ ಮಾದರಿ. ಸಾಂಸಾರಿಕ ಮತ್ತು ಕೌಟುಂಬಿಕ ಮೌಲ್ಯಗಳಿಂದ ನಮ್ಮ ಪರಂಪರೆ ಒಳಗೊಂಡಿದೆ.

ಯಲ್ಲಾಪುರ: ಹಿರಿಯರನ್ನು ಗೌರವಿಸುವುದು ನಮ್ಮ ಪರಂಪರೆಯ ಶ್ರೇಷ್ಠತೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತೀ ಸ್ವಾಮೀಜಿ ನುಡಿದರು.ಜ. ೬ರಂದು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಆಯೋಜಿಸಿದ್ದ ೨೦೨೪- ೨೫ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಮಾತಾ ಪಿತೃಗಳ ಪಾದಪೂಜೆ ಸಹಿತ ಸಂಸ್ಕಾರ ದೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ತಂದೆಯ ಮಾತಿಗಾಗಿ ಬದ್ಧತೆಯಿಂದ ಕಾಡಿಗೆ ಹೊರಟ ಶ್ರೀರಾಮ ನಮ್ಮ ಆದರ್ಶ. ಆದರ್ಶ ಸಹೋದರ ಭರತ ನಮಗೆ ಮಾದರಿ. ಸಾಂಸಾರಿಕ ಮತ್ತು ಕೌಟುಂಬಿಕ ಮೌಲ್ಯಗಳಿಂದ ನಮ್ಮ ಪರಂಪರೆ ಒಳಗೊಂಡಿದೆ. ಅದು ನಮ್ಮ ಶ್ರೀಮಂತಿಕೆ. ಮಹಾಗಣಪತಿ ವಿವೇಕಿ, ಆತ ತಂದೆ- ತಾಯಿಗಳಿಗೆ ಪ್ರದಕ್ಷಿಣೆ ಮಾಡಿದ ತಾತ್ವಿಕ ಕಥೆ ನಮ್ಮೆದುರಿಗಿದೆ ಎಂದರು. ಪಾಲಕ ಶ್ರೀಕೃಷ್ಣ ಭಟ್ಟ ಮಾತನಾಡಿ, ಸಂಸ್ಥೆಯು ಅಭ್ಯಾಸದೊಂದಿಗೆ ಸಂಸ್ಕಾರ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಸಂಸ್ಕಾರದಿಂದ ವಿದ್ಯಾಭ್ಯಾಸ ಮತ್ತು ಎಲ್ಲ ಕೆಲಗಳನ್ನು ಮಾಡಲು ಶಕ್ತಿ ನೀಡುತ್ತದೆ. ಇದು ಒಳ್ಳೆಯ ಸಂಗತಿ ಎಂದರು. ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಸ್ವಾಗತಿಸಿ, ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಮೂಹದ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಿದ್ದು, ಜೀವನದ ಮೌಲ್ಯವನ್ನು ಹೆಚ್ಚಿಸಿಕೊಂಡು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಗುರು ಹಿರಿಯರ, ಮಾತಾ- ಪಿತರ ಹಾಗೂ ಸಮಾಜದ ಕುರಿತು ಉತ್ತಮ ಬಾಂಧವ್ಯವನ್ನು ಹಾಗೂ ಗೌರವದ ಭಾವನೆಯನ್ನು ಅಳವಡಿಸಿಕೊಳ್ಳಲು ಇಂತಹ ಸಂಸ್ಕಾರಯುತ ಶಿಕ್ಷಣ ಸಹಕಾರಿಯಾಗುತ್ತದೆ ಎಂದರು.ಗಣೇಶ ಭಟ್ಟ ಸವಣಗೆರೆಯವರ ಪೌರೋಹಿತ್ಯ ಹಾಗೂ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದಪೂಜೆ ನೆರವೇರಿಸಿದರು. ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಕಾರ್ಯದರ್ಶಿ ಪರಮಾನಂದಜೀ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಭಾರತೀಯ, ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ವಿಘ್ನೇಶ್ವರ ಗಾಂವ್ಕರ್, ಸಿಬಿಎಸ್‌ಸಿ ವಿಭಾಗದ ಮುಖ್ಯಾಧ್ಯಾಪಕಿ ಮಹಾದೇವಿ ಭಟ್ಟ, ಉಪಪ್ರಾಂಶುಪಾಲೆ ಆಸ್ಮಾ ಶೇಖ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು, ಉಪಸ್ಥಿತರಿದ್ದರು.ಫೆ. 8ರಿಂದ ಸಿದ್ದಾಪುರ ಉತ್ಸವ

ಸಿದ್ದಾಪುರ: ಪ್ರತಿ ವರ್ಷದಂತೆ ಸಿದ್ದಾಪುರ ಉತ್ಸವ ಫೆ. ೮ ಹಾಗೂ ೯ರಂದು ೨ ದಿನಗಳ ಕಾಲ ಜರುಗಲಿದೆ ಎಂದು ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಕೂಡ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ೨ ದಿನಗಳ ಕಾಲ ಈ ವರ್ಷದ ಸಿದ್ದಾಪುರ ಉತ್ಸವ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಜಾತ್ರೆ, ಉತ್ಸವಗಳು ಬರುತ್ತಿರುವ ಹಿನ್ನೆಲೆ ೩ ದಿನಗಳ ಉತ್ಸವವನ್ನು ೨ ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪಟ್ಟಣದ ನೆಹರೂ ಮೈದಾನದಲ್ಲಿ ಉತ್ಸವ ಜರುಗಲಿದೆ ಎಂದರು.ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಸ್ವಾಮಿಗಳು, ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಹೆಗಡೆ ಬೈಲಳ್ಳಿ, ಉಪಾಧ್ಯಕ್ಷ ಅನಿಲ್ ದೇವನಳ್ಳಿ, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡರ್, ಸುರೇಶ್ ಮೇಸ್ತ, ರವಿಕುಮಾರ್ ನಾಯ್ಕ, ವಿನಯ್ ಹೊನ್ನೆಗುಂಡಿ ಮತ್ತು ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ನೀಡಿ
ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ