ಅಭಿವೃದ್ಧಿಗಾಗಿ ಎಲ್ಲರೂ ಒಂದುಗೂಡಿ ಕೆಲಸ ಮಾಡಿ: ಶಾಸಕ ತುನ್ನೂರು

KannadaprabhaNewsNetwork |  
Published : Feb 02, 2025, 11:45 PM IST
ಯಾದಗಿರಿ ನಗರಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಮಾತನಾಡಿದರು. | Kannada Prabha

ಸಾರಾಂಶ

Everyone should work together for development: MLA Thunnuru

-ಯಾದಗಿರಿ ನಗರಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಿಗೆ ಸನ್ಮಾನ ಸಮಾರಂಭ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಅಭಿವೃದ್ಧಿಗೆ ಮೊದಲಾದ್ಯತೆ ನೀಡಲಾಗಿದ್ದು, ನಗರಾಭಿವೃದ್ಧಿಗಾಗಿ ನಗರಸಭೆ ಎಲ್ಲ ಸದಸ್ಯರು ಒಂದುಗೂಡಿ ಕೆಲಸ ಮಾಡಬೇಕೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನಗರಸಭೆಗೆ ಅನುದಾನ ಸೇರಿದಂತೆ ವಿವಿಧ ಯೋಜನೆಗಳ ಜಾರಿಗೊಳಿಸಲು ಬೇಕಾದ ಅನುಕೂಲ ಪಡೆಯಲು ಸಿಎಂ ಸಿದ್ಧರಾಮಯ್ಯ ಅವರಿಗೆ ನಗರಸಭೆ ಅಧ್ಯಕ್ಷರ ನೇತ್ವತೃದಲ್ಲಿ ಒಂದು ನಿಯೋಗ ಬೆಂಗಳೂರಿಗೆ ಬನ್ನಿ, ನಾನು, ಅವರ ಸಮಯ ನಿಗದಿಪಡಿಸಿ ಭೇಟಿಯಾಗೊಣ ಎಂದರು.

ಆಶ್ರಯ ಸಮಿತಿಯಿಂದ ಮನೆಗಳಿಗೆ ಬಂದ ಅರ್ಜಿಗಳು ಎಷ್ಟು, ಎಷ್ಟು ಜಾಗ ಬೇಕೆಂಬ ಬಗ್ಗೆ ತಿಳಿಸಿದರೆ, ಅಧ್ಯಕ್ಷರ ಜೊತೆ ಚರ್ಚಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಳೋಣ ಎಂದರು. ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ನಗರದಲ್ಲಿ ಈಗಾಗಲೇ ಇರುವ ಆಶ್ರಯ ಸಮಿತಿ ಸ್ಥಳಗಳ ತಿಳಿಸಿ, ಹೊಸ ಅರ್ಜಿಗಳಿಗೆ ಮನೆ ನೀಡಲು ನಲವತ್ತು ಎಕರೆ ಜಾಗ ಬೇಕಾಗುವುದೆಂದು ಹೇಳಿದರು.

ಪೌರಾಯುಕ್ತ ಉಮೇಶ ಚವ್ಹಾಣ ಸ್ವಾಗತಿಸಿ, ನಿರೂಪಿಸಿದರು. ಎಂಜಿನೀಯರ್‌ ರಜನೀಕಾಂತ ಆಶ್ರಯ ಸಮಿತಿ ಸ್ಥಳ ಮತ್ತು ಕೆಲಸದ ಬಗ್ಗೆ ವಿವರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ್ ಮಾಲಿ ಪಾಟೀಲ್, ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ, ವೆಂಕಟರೆಡ್ಡಿ ವನಿಕೇರಿ, ಚೆನ್ನಕೇಶವ ಬಾಣತಿಹಾಳ, ಹಣಮಂತ ನಾಯಕ್, ಪ್ರಭಾವತಿ ಕಲಾಲ, ಆಶ್ರಯ ಸಮಿತಿ ನೂತನ ಸದಸ್ಯರಾದ ಪ್ರಭಾಕರ್ ಜಿ., ಆರತಿ ಅಮರೇಶ ಜಾಕಾ, ಶಿವರಾಜ ಕರದಳ್ಳಿ, ಇಮ್ಯಾನುವೆಲ್‌ ಕ್ರಿಸ್ಟೋಫರ್‌ ಸೇರಿದಂತೆ ನಗರಸಭೆ ಅಧಿಕಾರಿಗಳು ಇದ್ದರು.

------

ಫೋಟೋ: ಯಾದಗಿರಿ ನಗರಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಮಾತನಾಡಿದರು.

1ವೈಡಿಆರ್4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ