ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರೂ ಒಂದಾಗಿ

KannadaprabhaNewsNetwork |  
Published : May 23, 2026, 01:15 AM IST
ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ಶ್ರೀ ಕೆಂಪಮ್ಮದೇವಿ ನೂತನ ದೇವಾಲಯದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್. | Kannada Prabha

ಸಾರಾಂಶ

ಗ್ರಾಮದ ಧಾರ್ಮಿಕ ಕಾರ್ಯಗಳು ಬಂದಾಗ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಗ್ರಾಮದ ಧಾರ್ಮಿಕ ಕಾರ್ಯಗಳು ಬಂದಾಗ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ಶ್ರೀ ಕೆಂಪಮ್ಮದೇವಿ ನೂತನ ದೇವಾಲಯದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದಲ್ಲಿ ನಡೆಯುವ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದಾಗಿ ಗ್ರಾಮದ ಒಳಿತಿಗೆ ಕೈ ಜೊಡಿಸಬೇಕು. ದೇವಾಲಯ ಗ್ರಾಮದಲ್ಲಿ ನೆಮ್ಮದಿ ಕಾಣುವ ಒಂದು ಸ್ಥಳ ಅದ್ದರಿಂದ ಎಲ್ಲರ ಸಹಕಾರದಿಂದ ದೇವಾಲಯವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ನಾನು ಸಹ ಈ ದೇವಾಲಯಕ್ಕೆ ನನ್ನ ಕೈಲಾದಷ್ಟು ಸಹ ಸಹಾಯ ನೀಡುತ್ತೇನೆ ಎಂದು ತಿಳಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮಣ್ಣ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಗ್ರಾಮದ ಪ್ರತಿಯೊಬ್ಬರು ಸಹಕರಿಸಬೇಕು. ಭಕ್ತರಿಂದ ಹಾಗೂ ಸಮಾಜದ ಮುಖಂಡರು ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿ. ಭಕ್ತರನ್ನು ಭೇಟಿ ಮಾಡಿ ಅವರಿಂದ ಹಣ ಸಂಗ್ರಹಿಸಿ ಈ ದೇವಾಲಯ ಎರಡು ವರ್ಷದೊಳಗೆ ಪೂರ್ಣಗೊಳಿಸಿದರೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಗೌಡ, ಪಟೇಲ್ ಶಿವರಾಜು, ವಿರೂಪಾಕ್ಷ, ಸಿದ್ದರಾಮಣ್ಣ, ಸಿದ್ದರಾಜು, ಯತೀಶ್, ವಿವೇಕ್, ರವಿ, ನಂದೀಶ್, ಹಾಗೂ ಅಮ್ಮನಘಟ್ಟ, ಅರಿವೆಸಂದ್ರ, ವರದೇನಹಳ್ಳಿ, ಹೊಸಹಟ್ಟಿ, ಕೋಡಿಹಟ್ಟಿ, ಗ್ರಾಮಸ್ಥರುಗಳು ಮತ್ತು ಶ್ರೀ ಕೆಂಪಮ್ಮದೇವಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮರಸ್ಯ ಮೂಡಿಸುವಲ್ಲಿ ಹಬ್ಬಗಳ ಪಾತ್ರ ಮಹತ್ವದ್ದು
ಪೌರ ಕಾರ್ಮಿಕರು ನಾಗರಿಕ ಸಮಾಜದ ಬೆನ್ನೆಲುಬು