)
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ಟಿಂಗ್ ಆಪರೇಷನ್ ಮಾಡಲು ದೆಹಲಿ ಮತ್ತು ಕೋಲ್ಕತ್ತ ಮೂಲದ ಏಜೆನ್ಸಿಯವರಿಗೆ ಸುಪಾರಿ ನೀಡಿದ್ದಾರೆ. ಬೆಂಗಳೂರಿನ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಹಣ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಸಚಿವರೊಬ್ಬರು ಮತ್ತು ರಾಜ್ಯ ಬಿಜೆಪಿ ನಾಯಕರೊಬ್ಬರು ಈ ಕುತಂತ್ರದ ಹಿಂದೆ ಇದ್ದಾರೆ. ಅವರೇ ಸುಪಾರಿಯನ್ನೂ ಕೊಟ್ಟಿದ್ದಾರೆ. ಸಂಪುಟದ ಹತ್ತು ಮಂದಿ ಸಚಿವರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಆದರೆ ನಮ್ಮ ಸಚಿವರು ಕ್ಲೀನ್ ಇದ್ದಾರೆ, ಅವರ ಬಲೆಗೆ ಬಿದ್ದಿಲ್ಲ. ಸ್ಟಿಂಗ್ ಮಾಡಿಸಲು ಸುಪಾರಿ ಕೊಟ್ಟಿರುವ ಬಗ್ಗೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ವಿಷಯ ತಿಳಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದನ್ನು ಕೆಲವರು ಸಹಿಸುತ್ತಿಲ್ಲ. ಸರ್ಕಾರಕ್ಕೆ ಮಸಿ ಬಳಿಯುವುದಕ್ಕೆ ಸ್ಟಿಂಗ್ ಆಪರೇಷನ್ ತಂತ್ರ ಹೂಡಿದ್ದಾರೆ. ಸಚಿವರನ್ನು ಸ್ಟಿಂಗ್ ಆಪರೇಷನ್‌ಗೆ ಒಳಪಡಿಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವುದು ಇವರ ಪ್ಲಾನ್ ಆಗಿದೆ. ಈ ಸ್ಟಿಂಗ್ ಆಪರೇಷನ್‌ಗೆ ಸುಪಾರಿ ಪಡೆದಿರುವ ಏಜೆನ್ಸಿಗಳು ಯಾವುವು, ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ, ಎಷ್ಟು ಹಣ ಕೊಟ್ಟಿದ್ದಾರೆ, ಯಾವ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದರು, ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ. ಯಾವ್ಯಾವ ನಾಯಕರ ಪಿಎಗಳು ಇದ್ದರು ಎಂಬುದಕ್ಕೆಲ್ಲಾ ದಾಖಲೆಗಳಿವೆ. ಸಿಸಿ ಟೀವಿ, ಆಡಿಯೋ, ವಿಡಿಯೋ ಸಮೇತ ದಾಖಲೆಗಳಿವೆ. ಎಲ್ಲಾ ದಾಖಲೆಗಳು ಇರುವುದರಿಂದಲೇ ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಒಂದು ವಾರದೊಳಗೆ ದೂರು ಕೊಟ್ಟು ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಇಡುವುದಾಗಿ ದೃಢವಾಗಿ ಹೇಳಿದರು.ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಾವು ಹಿಟ್ ಆ್ಯಂಡ್ ರನ್ ಮಾಡುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳೆದುರೇ ಬಿಡುಗಡೆ ಮಾಡುತ್ತೇನೆ. ಏಜೆನ್ಸಿಗಳು ನಾನಾ ರೀತಿಯ ಆಮಿಷಗಳನ್ನು ಒಡ್ಡಿದ್ದರೂ ನಮ್ಮ ಸಚಿವರು ಬಲಿಯಾಗಿಲ್ಲ. ಆದರೂ ಇದು ಎಐ ಯುಗವಾಗಿರುವುದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹೀಗಾಗಿಯೇ ಸಚಿವರಿಗೆ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.
ಸ್ಟಿಂಗ್ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಆಪರೇಷನ್ ಕಮಲ ಆರಂಭಿಸಿದ್ದೇ ಅವರಲ್ಲವೇ. ಅದೇ ರೀತಿ ಅವರದೇ ಪಕ್ಷದವರನ್ನು ಗೋವಾ, ಮುಂಬೈಗೆ ಕರೆದುಕೊಂಡು ಹೋಗಿ ಸೀಡಿ ಮಾಡಿಸಿದವರೂ ಅವರೇ. ರಮೇಶ್ ಜಾರಕಿಹೊಳಿ ಸೀಡಿ ಮಾಡಿಸಿದ್ದೂ ಬಿಜೆಪಿಯವರೇ ಎಂದು ಗಂಭೀರವಾಗಿ ಆರೋಪಿಸಿದರು.