ಎಕ್ಸಲೆಂಟ್‌ನಲ್ಲಿ ನವರಾತ್ರಿ ನವಶಕ್ತಿ ವೈಭವ

KannadaprabhaNewsNetwork |  
Published : Oct 18, 2026, 03:30 AM IST
ಎಕ್ಸಲೆಂಟ್‌ನಲ್ಲಿ ನವರಾತ್ರಿ ನವಶಕ್ತಿ ವೈಭವ | Kannada Prabha

ಸಾರಾಂಶ

: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನವರಾತ್ರಿ ಪ್ರಯುಕ್ತ ‘ನವರಾತ್ರಿ ನವಶಕ್ತಿ ವೈಭವ’ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನವನಾರಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನವರಾತ್ರಿ ಪ್ರಯುಕ್ತ ‘ನವರಾತ್ರಿ ನವಶಕ್ತಿ ವೈಭವ’ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನವನಾರಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಲತಿ ಅವರು ಉದ್ಘಾಟಿಸಿದರು. ಬಳಿಕ ಶ್ರೀ ಶಾರದಾದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಸ್ವಾಗತಿಸಿ, ನವರಾತ್ರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ನಾರಿಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಸಾಧನೆಗಳನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ ಎಂದರು.

ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರ ಮಾತೃಶ್ರೀ ಮಾಲತಿ ಅವರನ್ನು ಸಂಸ್ಥೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ನವರಾತ್ರಿಯ ನವಶಕ್ತಿಯ ಪ್ರತೀಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಚನಾ ಶೆಟ್ಟಿ, ಶ್ವೇತಾ ಎಸ್. ಜೈನ್, ಡಾ. ಸೀಮಾ ಸುದೀಪ್, ಡಾ. ವಿನೋದ.ಪಿ.ಶೆಟ್ಟಿ, ಹರಿಣಾಕ್ಷಿ ಶೆಟ್ಟಿ, ವಸಂತಿ, ಅರುಣ, ರಮಾದೇವಿ ಹಾಗೂ ಉಷಾ ಬೋರ್ಕರ್ ಇವರೆಲ್ಲರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಎಕ್ಸಲೆಂಟ್ ಶಾಲೆಯ ಕಲಾ ಶಿಕ್ಷಕಿ ಚೇತನ ಶೆಟ್ಟಿ ಅವರ ಕಲಾಪ್ರತಿಭೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಅವರನ್ನು ಗೌರವಿಸಲಾಯಿತು.

ಸನ್ಮಾನಿತರಾದ ಡಾ. ಸೀಮಾ ಸುದೀಪ್, ಉಷಾ ಬೋರ್ಕರ್ ಹಾಗೂ ಹರಿಣಾಕ್ಷಿ ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಶ್ರೀ ಪ್ರಸಾದ್, ಎಕ್ಸಲೆಂಟ್ ಸಂಸ್ಥೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಿಬಿಎಸ್‌ಇ ಸಂಯೋಜಕಿ ವಿಮಲ ಶೆಟ್ಟಿ, ಅಪೇಕ್ಷಾ ಇತರ ಗಣ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕರಾದ ಅರ್ಚನಾ ಮತ್ತು ಹರ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಪ್ರಸಾದ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಸ್ತಿಗಾಗಿ ಸೊಸೆ, ಮೊಮ್ಮಕ್ಕಳೊಂದಿಗೆ ಪುತ್ರನನ್ನೇ ಕೊಂದ
ಜೆನ್‌ ಝೀಗಳ ದಾರಿತಪ್ಪಿಸುತ್ತಿರುವ ಸಿಜೆಪಿ: ಬಿ.ವೈ. ರಾಘವೇಂದ್ರ