ಧಾರವಾಡ: ಇಲ್ಲಿಯ ನರೇಂದ್ರ ಬೈಪಾಸ್ ಬಳಿ ಇರುವ ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಂಭ್ರಮ ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಜರುಗಿತು.
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಉಂಟಾಗುವ ಸಮಸ್ಯೆಗಳಿಗೆ ಕೇವಲ ಕುಟುಂಬದ ಮಟ್ಟದಲ್ಲಷ್ಟೇ ಅಲ್ಲದೆ, ಶಾಲಾ, ಜಿಲ್ಲಾ ಹಾಗೂ ರಾಜ್ಯ/ಸರ್ಕಾರಿ ಮಟ್ಟದಲ್ಲಿಯೂ ಸೂಕ್ತ ಕ್ರಮಗಳು ಮತ್ತು ಪರಿಹಾರಗಳನ್ನು ರೂಪಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ವಿಶೇಷ ದೇವರ ದರ್ಶನ, ಕೀರ್ತನೆ-ಭಜನೆ, ಅಭಿಷೇಕ, ಆಧ್ಯಾತ್ಮಿಕ ಪ್ರವಚನಗಳು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೃಷ್ಣ ಪ್ರಸಾದ ವಿತರಣೆ ನಡೆಯಿತು. ಜಿಲ್ಲೆಯ 22 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಈ ಮಹೋತ್ಸವದಲ್ಲಿ ಸುಮಾರು 5,000 ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಮಕ್ಕಳಲ್ಲಿ ಉತ್ತಮ ಮೌಲ್ಯಗಳು, ಸಂಸ್ಕಾರ, ಶಿಸ್ತು, ಸದಾಚಾರ ಹಾಗೂ ಭಗವದ್ಗೀತೆಯ ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಇಸ್ಕಾನ್ ಧಾರವಾಡ ಅಧ್ಯಕ್ಷ ಸದಯೋಗಿ ದಾಸ ಪ್ರಭು, ಭಾಗವತ ಶ್ರವಣ ಪ್ರಭು ಹೇಳಿದರು.ಇಸ್ಕಾನ್‌ನ ಭಕ್ತರು, ವಿವಿಧ ಸೇವಾ ವಿಭಾಗಗಳ ಮುಖ್ಯಸ್ಥರು ಹಾಗೂ ಸ್ವಯಂಸೇವಕರು ಇದ್ದರು.