ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ, ಬಿಯರ್ ನಾಶ

KannadaprabhaNewsNetwork |  
Published : Mar 09, 2024, 01:40 AM IST
೮ ಟಿವಿಕೆ ೩ -  ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯವನ್ನು ತುರುವೇಕೆರೆಯ ಅಬಕಾರಿ ಉಪಅಧೀಕ್ಷಕ ಹೆಚ್.ಎಂ. ರಘು ಮತ್ತು ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಅಬಕಾರಿ ನಿರೀಕ್ಷಕ ದಿಲೀಪ್‌ಕುಮಾರ್ ಮತ್ತು ಸಿಬ್ಬಂದಿವರ್ಗದ ಸಮ್ಮುಖದಲ್ಲಿ ನಾಶ ಮಾಡಲಾಯಿತು. | Kannada Prabha

ಸಾರಾಂಶ

ತುರುವೇಕೆರೆ ವಲಯ ವ್ಯಾಪ್ತಿಯಲ್ಲಿ ೨೦೨೨-೨೦೨೩ನೇ ಸಾಲಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯ ಮತ್ತು ಬಿಯರನ್ನು ವಶಪಡಿಸಿಕೊಂಡಿದ್ದ ಅಬಕಾರಿ ಇಲಾಖೆ ಅವುಗಳನ್ನು ನಾಶ ಮಾಡಿದೆ ಎಂದು ಅಬಕಾರಿ ಉಪಅಧೀಕ್ಷಕ ಎಂ.ಎಚ್. ರಘು ತಿಳಿಸಿದರು.

ತುರುವೇಕೆರೆ: ತುರುವೇಕೆರೆ ವಲಯ ವ್ಯಾಪ್ತಿಯಲ್ಲಿ ೨೦೨೨-೨೦೨೩ನೇ ಸಾಲಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯ ಮತ್ತು ಬಿಯರನ್ನು ವಶಪಡಿಸಿಕೊಂಡಿದ್ದ ಅಬಕಾರಿ ಇಲಾಖೆ ಅವುಗಳನ್ನು ನಾಶ ಮಾಡಿದೆ ಎಂದು ಅಬಕಾರಿ ಉಪಅಧೀಕ್ಷಕ ಎಂ.ಎಚ್. ರಘು ತಿಳಿಸಿದರು.

ಅಬಕಾರಿ ಇಲಾಖೆ ಆವರಣದಲ್ಲಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆಯ ೧೫(ಎ) ಅಡಿಯಲ್ಲಿ ೪೨ ಪ್ರಕರಣ, ೧೭ ಘೋರ ಪ್ರಕರಣ, ಪೊಲೀಸ್ ಇಲಾಖೆಯ ೮ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ೬೫೦ ಲೀಟರ್ ಮದ್ಯ ಹಾಗೂ ೨೦.೩ ಲೀಟರ್ ಬಿಯರನ್ನು ನಾಶ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ ಉಪಸ್ಥಿತಿಯಲ್ಲಿ ಅಬಕಾರಿ ನಿರೀಕ್ಷಕ ದಿಲೀಪ್‌ಕುಮಾರ್, ಕೆಎಸ್‌ಬಿಸಿಎಲ್ ನ ಡಿಪೋ ಮ್ಯಾನೇಜರ್ ಸಿದ್ದಲಿಂಗಸ್ವಾಮಿ, ಅಬಕಾರಿ ಸಿಬ್ಬಂದಿಗಳಾದ ಕೇಶವ್ ಅಗಡಿ, ನರಸಿಂಹಮೂರ್ತಿ ಹಾಗೂ ರಮೇಶ್‌ ನೇತೃತ್ವದಲ್ಲಿ ಈ ಮದ್ಯವನ್ನು ನಾಶ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!