ಸೂಲಿಬೆಲೆ: ಸರ್ಕಾರ ಜಾರಿಗೊಳಿಸಿರುವ ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು. ಹೋಬಳಿಯ ಭೀಮಕನಹಳ್ಳಿ ರಾಧಮ್ಮ ಅವರ ಭೂಮಿಯಲ್ಲಿ ಗಂಗಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರಸಿದ್ದು, ಇದರಿಂದ ಅವರ ಜೀವನ ಸುಧಾರಣೆ ಕಾಣಲಿದೆ ಎಂದರು. ಶಾಸಕ ಶರತ್ ಬಚ್ಚೇಗೌಡರ ಶಿಪಾರಸ್ಸಿನ ಮೇರೆಗೆ ಯೋಜನೆ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗೆ ಯೋಜನೆ ತಲುಪಿಸಲಾಗಿದೆ ಎಂದರು. ಯುವ ಮುಖಂಡ ವಿಜಯಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ರಾಮೇಗೌಡ, ಮಧು, ನಾಗೇಶ್, ರಾಮಯ್ಯ, ಸುಬ್ರಮಣಿ, ರಾಧಮ್ಮ ಇತರರಿದ್ದರು.
ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲ
ಸೂಲಿಬೆಲೆ: ಸರ್ಕಾರ ಜಾರಿಗೊಳಿಸಿರುವ ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.