ಗೋವಾಕ್ಕೆ ಸಾಗಿಸುತ್ತಿದ್ದ 50 ಸಾವಿರ ಲೀಟರ್ ಸ್ಪಿರಿಟ್ ವಶಕನ್ನಡಪ್ರಭ ವಾರ್ತೆ ಕಾರವಾರ
ಸೋಮವಾರ ಅಬಕಾರಿ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೋಯಿಡಾ ತಾಲೂಕಿನ ರಾಮನಗರ ಸಮೀಪದ ಅನಮೋಡ್ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದ್ದು, ವಶಪಡಿಸಿಕೊಂಡ ಸ್ಪಿರಿಟ್ ಮೌಲ್ಯ ಸುಮಾರು 35ರಿಂದ ₹40 ಲಕ್ಷ ಎಂದು ಅಂದಾಜಿಸಲಾಗಿದೆ. ಟ್ಯಾಂಕರ್ ಲಾರಿಗಳು ಸೇರಿದಂತೆ ಒಟ್ಟು ₹90 ಲಕ್ಷ ಮೌಲ್ಯದ ಸೊತ್ತನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಕೈಗಾರಿಕಾ ಉದ್ದೇಶದ (ಡಿನೇಚರ್ಡ್ ಸ್ಪಿರಿಟ್) ನೆಪದಲ್ಲಿ ದಾವಣಗೆರೆಯ ಡಿಸ್ಟಿಲರಿಯಿಂದ ಗೋವಾಕ್ಕೆ ಸಾಗಿಸಲಾಗುತ್ತಿದ್ದ ಈ ಸ್ಪಿರಿಟ್ ಬಳಸಿ, ನಕಲಿ ಮದ್ಯ ತಯಾರಿಸುವ ಬೃಹತ್ ಜಾಲವೊಂದು ಕಾರ್ಯಾಚರಿಸುತ್ತಿತ್ತು ಎನ್ನುವುದು ತನಿಖೆಯಿಂದ ಬಯಲಾಗಿದೆ. ಕೇವಲ ₹50 ಲಕ್ಷ ಬಂಡವಾಳದಲ್ಲಿ ಈ ಸ್ಪಿರಿಟ್ ಬಳಸಿ, ಕೆರಮೆಲ್ ಹಾಗೂ ಇತರ ರಾಸಾಯನಿಕಗಳನ್ನು ಬೆರೆಸಿ ಸುಮಾರು 2 ಲಕ್ಷದ 40 ಸಾವಿರ ನಕಲಿ ಮದ್ಯದ ಬಾಟಲಿಗಳನ್ನು ತಯಾರಿಸಬಹುದಾಗಿದೆ. ಗೋವಾದಲ್ಲಿ ತಯಾರಾಗುವ ಈ ಅಕ್ರಮ ಮದ್ಯವನ್ನು ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಸರಬರಾಜು ಮಾಡಿ ಬರೋಬ್ಬರಿ ₹40 ರಿಂದ 48 ಕೋಟಿಗಳಷ್ಟು ಅಕ್ರಮ ಲಾಭ ಗಳಿಸುವ ದೊಡ್ಡ ಹುನ್ನಾರ ಇದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಅಬಕಾರಿ ಇಲಾಖೆ ಇತಿಹಾಸದಲ್ಲೇ ಇದೊಂದು ಪ್ರಥಮ ಹಾಗೂ ಅತಿ ದೊಡ್ಡ ಕಾರ್ಯಾಚರಣೆ ಎನ್ನಲಾಗಿದೆ.ಗೋವಾ ಮದ್ಯದ ಅಕ್ರಮ ಸಾಗಾಣಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ಅಬಕಾರಿ ಆಯುಕ್ತರಾದ ವೆಂಕಟೇಶ್ ಕುಮಾರ್ ಅವರ ನಿರ್ದೇಶನದಂತೆ ಗೋವಾ ಕರ್ಬಿಂಗ್ ಲಿಕ್ಕರ್ ಟೀಮ್ ಹೆಸರಿನಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಈ ಕಾರ್ಯಾಚರಣೆ ಅದರ ಭಾಗವಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತರು ಮಾಹಿತಿ ನೀಡಿದರು. ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ದೊಡ್ಡ ಕುಳಗಳನ್ನು ಬಯಲಿಗೆಳೆಯಲು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಉತ್ತರಕನ್ನಡ ಅಬಕಾರಿ ಉಪಆಯುಕ್ತ ಅಮಾನುಲ್ಲಾ ಖಾನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.ಪೊಲೀಸ್ ಮಾದರಿಯಲ್ಲಿ ಅಬಕಾರಿ ಇಲಾಖೆ ಮೇಲ್ದರ್ಜೆಗೆ