ರೈತರ ಸಾಲಕ್ಕೆ ಫ್ರೂಟ್ ತಂತ್ರಾಂಶದಿಂದ ವಿನಾಯಿತಿ: ಆಗ್ರಹ

KannadaprabhaNewsNetwork |  
Published : May 16, 2024, 12:48 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಕೆಸಿಸಿ ಫಸಲು ಸಾಲಕ್ಕೆ ಫ್ರೂಟ್ ತಂತ್ರಾಂಶದಿಂದ ವಿನಾಯಿತಿ ನೀಡಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಕೆಸಿಸಿ ಫಸಲು ಸಾಲಕ್ಕೆ ಫ್ರೂಟ್ ತಂತ್ರಾಂಶದಿಂದ ವಿನಾಯಿತಿ ನೀಡಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2024-25ನೇ ಸಾಲಿಗೆ ರೈತರಿಗೆ ಕೆಸಿಸಿ ಫಸಲು ಸಾಲ ವಿತರಿಸಲಾಗುತ್ತಿದೆ.

ಆದರೆ ಸಂಘದ ಕಾರ್ಯವ್ಯಾಪ್ತಿಗೆ ಬರುವ ಶೇ.40 ರಷ್ಟು ಸದಸ್ಯರು ಜಂಟಿ ಪಹಣಿ ಹೊಂದಿರುವುದರಿಂದ ಇವರು ಹೊಂದಿರುವ ನೈಜ ಆಸ್ತಿಯು ಫ್ರೂಟ್‌ ತಂತ್ರಾಂಶದಲ್ಲಿ ನಮೂದಾಗಿಲ್ಲ. ಇದರಿಂದ ಸಂಘದಿಂದ ನೀಡಲಾಗುತ್ತಿರುವ ಕೆಸಿಸಿ ಫಸಲು ಸಾಲದಿಂದ ಇವರು ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಂಟಿ ಪಹಣಿಯಿಂದ ಫ್ರೂಟ್ ತಂತ್ರಾಂಶದಲ್ಲಿ ಆಸ್ತಿ ನಮೂದಾಗದ ಕಾರಣ ಕೃಷಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಶೂನ್ಯ ಬಡ್ಡಿ ದರದ ಸಾಲ ಕೂಡ

ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಫ್ರೂಟ್‌ ತಂತ್ರಾಂಶ ಪ್ರಕ್ರಿಯೆ ವಿಳಂಬವಾಗುತ್ತಿದೆ. ದಲ್ಲಾಳಿಗಳು ಎಕರೆಗೆ 35-50 ಸಾವಿರದವರೆಗೆ ಹಣ ಪಡೆದು ಕಡತ ವಿಲೇವಾರಿ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಕೊಡಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾಲ ಪಡೆದು ರೈತರಿಗೆ ಕೆಸಿಸಿ ಫಸಲು ಸಾಲವನ್ನು ನೀಡುತ್ತಿತ್ತು. ಆದರೆ ಸಂಘದ ಶೇ.40 ರಷ್ಟು ಸದಸ್ಯರು ಆಸ್ತಿ ಫ್ರೂಟ್‌ ತಂತ್ರಾಂಶದಲ್ಲಿ ನಮೂದಾಗದೆ ಇರುವುದರಿಂದ ಇಷ್ಟು ಮೊತ್ತದ ಹಣ ಡಿಸಿಸಿ ಬ್ಯಾಂಕ್ ನಿಂದ ಸಂಘಕ್ಕೆ ಬಿಡುಗಡೆಯಾಗುವುದಿಲ್ಲ. ಇದರಿಂದ ಡಿಸಿಸಿ ಬ್ಯಾಂಕ್ ಗೂ ನಷ್ಟವಾಗಲಿದೆ. ರೈತರನ್ನು ಬರಿಗೈಯಲ್ಲಿ ಕಳುಹಿಸಬಾರದು ಎನ್ನುವ ಕಾರಣಕ್ಕಾಗಿ ಸಂಘದಲ್ಲಿರುವ ಹಣವನ್ನೇ ಕೆಸಿಸಿ ಫಸಲು ಸಾಲವನ್ನು ನೀಡಲು ಬಳಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮಣಿ ಉತ್ತಪ್ಪ ವಿವರಿಸಿದರು.

ಸಂಘದ ಉಪಾಧ್ಯಕ್ಷ ಪೇರಿಯನ ಪೂಣಚ್ಚ, ನಿರ್ದೇಶಕರಾದ ಬಿ.ಎಂ.ಕಾಶಿ, ಬಟ್ಟರ ಶರಿನ್, ಕರ್ಣಯ್ಯನ ಪ್ರಜ್ವಲ್ ಹಾಗೂ ಪುತ್ತರಿರ ಶಿವು ನಂಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''