ಹುಬ್ಬಳ್ಳಿ:
ದಾಖಲೆ ಪರಿಶೀಲನೆ ಹಾಗೂ ವೃತ್ತಿ ಪರೀಕ್ಷೆ ಪೂರ್ಣಗೊಂಡು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಆದರೆ, ಕೇವಲ 2,000 ಹುದ್ದೆ ನೇಮಕಾತಿಗೆ ಮಾತ್ರ ಆದೇಶ ಹೊರಡಿಸಲಾಗಿದ್ದು, ಉಳಿದ 814 ಹುದ್ದೆ ಭರ್ತಿ ಮಾಡದಿರುವುದು ಅನ್ಯಾಯವಾಗಿದೆ. ಈ ನಿರ್ಧಾರದಿಂದ ವಯೋಮಿತಿ ಮೀರಿರುವ ಅಭ್ಯರ್ಥಿಗಳು ಹಾಗೂ ಆಯ್ಕೆ ಪಟ್ಟಿಯಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಗಿದೆ. ಆದ್ದರಿಂದ ಉಳಿದ 814 ಹುದ್ದೆಗಳಿಗೂ ಕೂಡಲೇ ನೇಮಕಾತಿ ಆದೇಶ ಹೊರಡಿಸಲು ಪ್ರತಿಪಕ್ಷದಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ರವಿಕುಮಾರ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಈ ವೇಳೆ ರಫೀಕ, ಶಿವು, ಬಸವರಾಜ, ಸುರೇಶ ಸೇರಿದಂತೆ ಹಲವರಿದ್ದರು.