ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಸ್ತು ಪ್ರದರ್ಶನ

KannadaprabhaNewsNetwork |  
Published : Mar 09, 2026, 02:30 AM IST
ಫೋಟೋವಿವರ- (8ಎಚ್‌ಪಿಟಿ1)  ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ನಡೆಸಿಕೊಟ್ಟರು | Kannada Prabha

ಸಾರಾಂಶ

ಇವತ್ತಿನ ದಿನಗಳಲ್ಲಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಕಾಣದ ಗೋಡೆಗಳು.

ಮರಿಯಮ್ಮನಹಳ್ಳಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ವಸ್ತು ಪ್ರದರ್ಶನವು ಖಾಸಗಿ ಶಾಲೆಯವರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಸೇರಿದಂತೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವು ನೋಡುಗರನ್ನು ಆಶ್ಚರ್ಯ ಮೂಡಿಸುವಂತೆ ಪ್ರದರ್ಶನ ನಡೆಯಿತು.

ಇವತ್ತಿನ ದಿನಗಳಲ್ಲಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಕಾಣದ ಗೋಡೆಗಳು. ಎಲ್ಲೆಂದರಲ್ಲಿ ಬಿರುಕು ಬಿಟ್ಟ ಕಟ್ಟಡ, ಮಳೆ ಬಂದರೆ ಸೋರುವ ಮಾಳಿಗೆ, ಕಿಟಿಕಿ ಇದ್ದರೆ ಬಾಗಿಲೇ ಇಲ್ಲ. ಬಾಗಿಲಿದ್ದರೆ ಕಿಟಕಿ ಇಲ್ಲ. ಇವೆರಡು ಇದ್ದರೆ ಚಿಲಕವೇ ಇಲ್ಲ ಎನ್ನುವಂತಹ ದಿನಗಳಲ್ಲಿ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯನ್ನು ಸ್ಥಳೀಯ ಬಿಎಂಎಂ ಕಾರ್ಖಾನೆಯವರು ನಿರ್ಮಿಸುತ್ತಿರುವ ಸರ್ಕಾರಿ ಪ್ರೌಢಶಾಲೆ ಹೊಸ ಕಟ್ಟಡವು ಮಾದರಿ ಕಟ್ಟಡವಾಗಿ ರೂಪುಗೊಳ್ಳುತ್ತಿದೆ.

ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳ ಪಾಲಕ, ಪೋಷಕರಿಗೆ, ವಿದ್ಯಾರ್ಥಿಗಳು ಸೌರ ಮಂಡಲದ ಕೌತುಕಗಳನ್ನು ವಿವರಿಸಿದರು. ಗ್ರಹಗಳ ಚಲನೆ ಕುರಿತು ತಿಳಿಸಿದರು. ಮಾನವ ಶರೀರದ ರಚನೆ, ಅಂಗಾಂಗಗಳ ಕಾರ್ಯಚಟುವಟಿಕೆ, ರಸ್ತೆ ನಿಯಮ ಕುರಿತು ತಾವು ತಯಾರಿಸಿದ ಮಾದರಿಗಳನ್ನು ಪ್ರದರ್ಶಿಸಿ ತಿಳಿಸಿದರು.

ಶಾಲೆಯಲ್ಲಿ ವಿಜ್ಞಾನ, ಗಣಿತ ಸೇರಿದಂತೆ ವಿವಿಧ ವಿಷಯಗಳ ವಸ್ತುಪ್ರದರ್ಶನ ಏರ್ಪಡಿಸಿದ್ದರು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಆಕರ್ಷಕ ಮಾದರಿಗಳು ಬೇಟಿ ನೀಡಿದ ಪೋಷಕರು, ನೆರೆಯ ಶಾಲೆಗಳ ವಿದ್ಯಾರ್ಥಿಗಳ ಮನಸೂರೆಗೊಂಡವು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನ್ಯೂಟನ್ ಚಲನೆ, ಸೌರವ್ಯೂಹ, ಕಾಂತನಕ್ಷತ್ರ, ನಕ್ಷತ್ರಪುಂಜಗಳು, ಜಲವಿದ್ಯುತ್, ಸೋಲಾರ್ ರೋಬೋಟ್, ಪರಮಾಣುವಿನ ರಚನೆ, ಮಾನವನ ಜೀರ್ಣಕ್ರಿಯೇ, ಸ್ವಯಂನಿಯಂತ್ರಕ ಹೈಡ್ರಾಲಿಕ್ ಯಂತ್ರ, ಬೀಜಬಿತ್ತನೆ ಯಂತ್ರ, ನೀರು ಮತ್ತು ಗಾಳಿ ಯಂತ್ರದ ಮೂಲಕ ವಿದ್ಯುತ್‌ ಉತ್ಪಾದನೆ, ಸ್ವಯಂ ಚಾಲಿತ ವಾಹನ, ಮಾನವನಶ್ವಾಸ ಕೋಶರಚನೆ, ಮಾನವನ ಕಿಡ್ನಿಮಾದರಿ ತಯಾರಿಸಿ ನೆರೆದಿದ್ದವರ ಗಮನ ಸೆಳೆದರು.

ಭಾರತೀಯ ಹಬ್ಬಗಳು, ಸಮಾನಾರ್ಥಕ ಶಬ್ದಗಳು, ನಾಮಪದಗಳು, ಸ್ವರಗಳು, ಸ್ವರಚಕ್ರಗಳನ್ನು ಮಾದರಿಗಳ ಮೂಲಕ ನೋಡುಗರಿಗೆ ಹಿಂದಿ ಭಾಷೆಯಲ್ಲಿ ತಿಳಿಸಿದರು. ಇಂಗ್ಲಿಷ್ ವಿಷಯದಲ್ಲೂ ಕೂಡ ಪಾರ್ಟ್ ಆಫ್ ಸ್ಪೀಚ್, ಕೊರ್ಮಡಿ ಫಿಷರ್ಸ, ಮನೆಯ ಚಿತ್ರಣದ ಮೂಲಕ ಕತೆಕಟ್ಟುವುದು, ಇಂಗ್ಲಿಷ್ ವ್ಯಾಕರಣದ‌ ಮಾದರಿಗಳ ಮೂಲಕ ಕಠಿಣ ಪದಗಳನ್ನು ಸರಳೀಕರಿಸುವ ಮಾದರಿಗಳು ಗಮನಸೆಳೆದವು.

ಸಮಾಜ ವಿಜ್ಞಾನದ ಪ್ರದರ್ಶನದಲ್ಲೂ ಪ್ರಜಾಪ್ರಭುತ್ವ, ನ್ಯಾಯಾಂಗ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಮತ್ತು ರಾಷ್ಟ್ರೀಯ ಬೆಳೆಗಳು, ಇಂಡಿಯಾಗೇಟ್, ವಾಯುಮಂಡಲ ಮತ್ತು ಭೂಮಿಯ ರಚನೆಯಂತಹ ಪ್ರಮುಖ ಮಾದರಿಗಳು ಗಮನಸೆಳೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆ ಬಂತು ಕುಡಿವ ನೀರಿನ ದಾಹ ಹೆಚ್ಚಾಯ್ತು
ಸಮಾಜದಲ್ಲಿ ಮಹಿಳೆಗೆ ಬೇಕಿರೋದು ಅವಕಾಶ: ಪದ್ಮಾವತಿ