3,52,958 ಕ್ಷಿಂಟಾಲ್‌ ರಾಗಿ ಬರುವ ನಿರೀಕ್ಷೆ: ಕೆ.ಎಸ್. ಆನಂದ್

KannadaprabhaNewsNetwork |  
Published : Feb 19, 2026, 01:45 AM IST
ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಶಿವ ಕಾವ್ಯದ ಕಣ್ಣು ಬಯಲ ಶಿವ ಕಾವ್ಯ ಜಾಗರ  ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕಡೂರುರಾಗಿ ಬೆಳೆವ ರೈತರಿಗೆ ರಾಗಿ ಒಕ್ಕಣಿಕೆಗೆ ಕಣಗಳು ಇಲ್ಲದಂತಾಗಿದೆ. ನಾನು ಸರ್ಕಾರದ ಗಮನ ಸೆಳೆದು ಅಗತ್ಯವಿರುವ ಕಡೆ ಗ್ರೇಡ್ 1 ಕಣಗಳ ನಿರ್ಮಾಣಕ್ಕೆ ಅನುದಾನ ತರಲು ಪ್ರಯತ್ನಿಸುವುದಾಗಿ ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ರಾಗಿ ಬೆಳೆವ ರೈತರಿಗೆ ರಾಗಿ ಒಕ್ಕಣಿಕೆಗೆ ಕಣಗಳು ಇಲ್ಲದಂತಾಗಿದೆ. ನಾನು ಸರ್ಕಾರದ ಗಮನ ಸೆಳೆದು ಅಗತ್ಯವಿರುವ ಕಡೆ ಗ್ರೇಡ್ 1 ಕಣಗಳ ನಿರ್ಮಾಣಕ್ಕೆ ಅನುದಾನ ತರಲು ಪ್ರಯತ್ನಿಸುವುದಾಗಿ ಶಾಸಕ ಕೆ.ಎಸ್. ಆನಂದ್ ಹೇಳಿದರು

ಬುಧವಾರ ಕಡೂರು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ, ಖರೀದಿಗೆ ಚಾಲನೆ ನೀಡಿ ಮಾತನಾಡಿ ರೈತರಿಗೆ ತೊಂದರೆ ಆಗದಂತೆ ಈ ಬಾರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ರಾಗಿ ಖರೀದಿ ಮಾಡಲಾಗುತ್ತಿದೆ. 13, 476 ರೈತರು ನೋಂದಣಿಯಿಂದ 3,52,958 ಕ್ಷಿಂಟಾಲ್‌ ರಾಗಿ ಬರುವ ನಿರೀಕ್ಷೆ ಇದೆ. ಕ್ವಿಂಟಾಲಿಗೆ ₹4886 ನೀಡಿ ಖರೀದಿ ಮಾಡಲಾಗುತ್ತಿದೆ. ಕಡೂರಲ್ಲಿ 2, ಪಂಚನಹಳ್ಳಿಯಲ್ಲಿ 2 ಹಾಗು ಬೀರೂರು 1 ಸೇರಿ 5 ಖರೀದಿ ಕೇಂದ್ರ ಮಾಡಲಾಗುತ್ತಿದೆ ಎಂದರು. ಬಿಜೆಪಿಯ ಓರ್ವರು ಸರ್ಕಾರದಲ್ಲಿ ಚೀಲ ಖರೀದಿಸಲು ಹಣವಿಲ್ಲ ಎಂದು ದೂರಿದ್ದಾರೆ. ಆದರೆ ಅವರ ಇಡೀ ಕುಟುಂಬವೇ ಕಾಂಗ್ರೆಸ್ ಸರ್ಕಾದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು. ಟೀಕಿಸುವುದಕ್ಕಿಂತ ಮೊದಲು ತಮ್ಮನ್ನು ತಾವು ಅರಿಯ ಬೇಕು. ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಫಲ ಪಡೆಯದೆ ಹಿಂದಿರುಗಿಸಲಿ ನೋಡೋಣ ಎಂದು ಟಾಂಗ್‌ ನೀಡಿದರು. ಗೃಹ ಲಕ್ಷ್ಮೀಯಡಿ ತಾಲೂಕಿಗೆ ₹132 ಕೋಟಿ ಪ್ರತಿ ತಿಂಗಳು ನೀಡುತ್ತಿದೆ. ಕೇವಲ 3 ತಿಂಗಳು ಮಾತ್ರ ತಡವಾಗಿದೆ ದುಡ್ಡು ಹಾಕಿ ಜನರ ಬಳಿಗೆ ಹೋಗುತ್ತೇವೆ ಎಂದರು. ಪ್ರಗತಿ ರೈತ ಕೇಂದ್ರದ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ, ಬೆವರು ಸುರಿಸಿ ದುಡಿವ ರೈತರ ಉತ್ಪಾದನೆಗಳು ಎಷ್ಟು ಮುಖ್ಯವೋ ಖರೀದಿ ಕೂಡ ಅಷ್ಟೇ ಮುಖ್ಯ. ಇದೀಗ ಯಂತ್ರಗಳಿಂದ ಸುಲಭವಾಗಿ ರಾಗಿ ಬೆಳೆ ಹೆಚ್ಚಿನ ಇಳುವರಿ ಸಿಗುತ್ತಿದೆ. ಅದನ್ನು ರೈತರು ದಲ್ಲಾಳಿಗಳಿಗೆ ನೀಡದೆ ಸರ್ಕಾರಕ್ಕೆ ರಾಗಿ ನೀಡಬೇಕು ಎಂದರು. ಆಹಾರ ನಿಗಮದ ಜಿಲ್ಲಾಧಿಕಾರಿ ಯೋಗಾನಂದ್ ಮಾತನಾಡಿ, 2025-26ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರಕಾರ ನೀಡುವ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ( ಎಂಎಸ್ ಪಿ ) ಜಿಲ್ಲೆಯಲ್ಲಿ ಸುಮಾರು 8 ಕೇಂದ್ರಗಳಲ್ಲಿ ಕಡೂರಲ್ಲಿ 5 ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ. 13 ಸಾವಿರ ರೈತರು ನೋಂದಾಯಿಸಿದ್ದಾರೆ. ರೈತರಿಗೆ10 ಕ್ವಿಂಟಾಲ್ ನಿಂದ 50 ಕ್ವಿಂಟಾಲ್ ನಿಗಧಿಗೊಳಿಸಲಾಗಿದೆ. ಬಯೋ ಮೆಟ್ರಿಕ್ ಮೂಲಕವೇ ದಿನಕ್ಕೆ ಕನಿಷ್ಠ 25 ರೈತರ ರಾಗಿ ಖರೀದಿಸುವ ಜೊತೆಗೆ ಮಾ.31ರತನಕ ಸಮಯವಿದೆ ಎಂದರು. ಚಿಕ್ಕಮಗಳೂರು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕಿ ಅನುರಾಧ , ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ರುದ್ರೇಗೌಡ, ಮಲಿಯಪ್ಪ, ಜಿ ಅಶೋಕ್, ಆಹಾರ ಇಲಾಖೆ ಶಿರಸ್ತೇದಾರರಾದ ಶ್ರೀನಿವಾಸ್ ಮತ್ತು ಶಿಲ್ಪಾ, ಕೃಷಿ ಸಹಾಯಕ ನಿರ್ದೇಶಕ ಆಶೋಕ್, ಎಪಿಎಂಸಿ ಕಾರ್ಯದರ್ಶಿ ಧರ್ಮಣ್ಣ, ನಿ. ಆಹಾರ ಇಲಾಖೆಯ ಶಿರಸ್ತೇದಾರ್ ತಿಮ್ಮಯ್ಯ,ಗುರುರಾಜ್ ಹಾಲ್ಮತ್, ರೈತರು ಸೇರಿದಂತೆ ಮತ್ತಿತರರು ಹಾಜರಿದ್ದರು. -- ಬಾಕ್ಸ್ ಸುದ್ದಿಗೆ-

ಸವಾಲು ಹಾಕಿದ ಶಾಸಕಸರ್ಕಾರದಲ್ಲಿ ದುಡ್ಡಿಲ್ಲ ಎಂದು ಟೀಕಿಸುವ ಬಿಜೆಪಿಗರು ಗ್ಯಾರಂಟಿಗಳನ್ನು ವಾಪಸ್ ನೀಡಲಿ ಎಂದು ಸವಾಲು ಹಾಕಿದ ಶಾಸಕ ಆನಂದ್, ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಕಳೆದ ಎರಡೂವರೆ ವರ್ಷದಲ್ಲಿ ಗ್ಯಾರಂಟಿಗಳ ಜೊತೆ ನಾನು ಎಷ್ಟು ಅಭಿವೃದ್ದಿಗೆ ಹಣ ತಂದಿದ್ದೇನೆ? ಬಿಜೆಪಿ ನಾಯಕರು ಎಷ್ಟು ತಂದಿದ್ದಾರೆ ಚರ್ಚೆಗೆ ಬರಲಿ ಎಂದರು.18ಕೆಕೆಡಿಯು1. ಕಡೂರು ಎಪಿಎಂಸಿಯಲ್ಲಿ ಆರಂಭಗೊಂಡ ರಾಗಿ ಖರೀದಿ ಕೇಂದ್ರವನ್ನು ಶಾಸಕ ಕೆ. ಎಸ್. ಆನಂದ್ ಉದ್ಘಾಟಿಸಿ ಖರೀದಿಗೆ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯದಂಗಡಿಯಲ್ಲಿದ್ದ ಬಾಲಕಿ ರಕ್ಷಣೆ: ಮಾಲೀಕನ ವಿರುದ್ಧ ಕೇಸ್‌
ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ಜರುಗಿದ ಸವದತ್ತಿಶ್ರೀ ಎಲ್ಲಮ್ಮ ದೇವಿ ಜಾತ್ರೆ