ಸಾಲ ಕಟ್ಟದ ಮನೆ ಮಾಲೀಕ: ಬಾಡಿಗೆದಾರರ ಸಾಮಗ್ರಿ ತೆರವು

KannadaprabhaNewsNetwork |  
Published : Feb 19, 2026, 01:45 AM IST
ಪೊಟೊ: 18ಎಸ್‌ಎಂಜಿಕೆಪಿ06ಶಿವಮೊಗ ನಗರದ ಬೊಮ್ಮನಕಟ್ಟೆ ಸಿ-ಬ್ಲಾಕ್ ಬಡಾವಣೆಯಲ್ಲಿ ಮನೆ ಮಾಲೀಕ ಸಾಲ ಕಟ್ಟಡ ಪರಿಣಾಮ ಮನೆಯಲ್ಲಿ ಭೋಗ್ಯಕ್ಕೆ ಇದ್ದ ಮಹಿಳೆಯ ಮನೆಯ ಸಾಮಗ್ರಿಗಳನ್ನು ತೆರವು ಮಾಡಲಾಯಿತು.     | Kannada Prabha

ಸಾರಾಂಶ

ಮನೆ ಮಾಲೀಕ ಮಾಡಿದ ಸಾಲಕ್ಕೆ ಅಮಾಯಕ ಬಾಡಿಗೆದಾರರು ಬೀದಿಗೆ ಬಿದ್ದಿರುವ ಘಟನೆ ನಗರದ ಬೊಮ್ಮನಕಟ್ಟೆ ಸಿ-ಬ್ಲಾಕ್ ಬಡಾವಣೆಯಲ್ಲಿ ನಡೆದಿದೆ.

ಶಿವಮೊಗ್ಗ: ಮನೆ ಮಾಲೀಕ ಮಾಡಿದ ಸಾಲಕ್ಕೆ ಅಮಾಯಕ ಬಾಡಿಗೆದಾರರು ಬೀದಿಗೆ ಬಿದ್ದಿರುವ ಘಟನೆ ನಗರದ ಬೊಮ್ಮನಕಟ್ಟೆ ಸಿ-ಬ್ಲಾಕ್ ಬಡಾವಣೆಯಲ್ಲಿ ನಡೆದಿದೆ.

ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ಪೊಲೀಸರ ನೆರವಿನೊಂದಿಗೆ ಭೋಗ್ಯಕ್ಕೆ ಇದ್ದ ಮಹಿಳೆಯ ಮನೆಯ ಸಾಮಗ್ರಿಗಳನ್ನು ತೆರವು ಮಾಡಿದ್ದಾರೆ. ಘಟನೆ ವಿವರ: ಮಮತಾ ಎಂಬ ಮಹಿಳೆ ಕುಮಾರ್ ಎಂಬುವವರ ಮನೆಯನ್ನು 4.50 ಲಕ್ಷ ರು.ಗೆ ಭೋಗ್ಯಕ್ಕೆ ಪಡೆದು ಮಗನೊಂದಿಗೆ ವಾಸವಾಗಿದ್ದರು. ಆದರೆ, ಮಾಲೀಕ ಮನೆಯ ಮೇಲೆ ಖಾಸಗಿ ಫೈನಾನ್ಸ್‌ನಲ್ಲಿ ಭಾರಿ ಸಾಲ ಮಾಡಿದ್ದು, ಕಳೆದ ಮೂರು ತಿಂಗಳ ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಬಂದ ಫೈನಾನ್ಸ್ ಸಿಬ್ಬಂದಿ, ಬಾಡಿಗೆದಾರರ ಸ್ಥಿತಿಯನ್ನು ಲೆಕ್ಕಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮಾಲೀಕ ತನಗೆ ಫೈನಾನ್ಸ್‌ನಿಂದ ನೋಟಿಸ್ ಬಂದಿದ್ದರೂ ಆ ವಿಷಯವನ್ನು ಭೋಗ್ಯಕ್ಕೆ ಇದ್ದ ಮಹಿಳೆಗೆ ತಿಳಿಸಿರಲಿಲ್ಲ. ಒಂದು ವೇಳೆ ಮುಂಚಿತವಾಗಿಯೇ ಮಾಹಿತಿ ನೀಡಿ ಹಣ ವಾಪಸ್ ನೀಡಿದ್ದರೆ ಅವರು ಮನೆ ಖಾಲಿ ಮಾಡುತ್ತಿದ್ದರು. ಆದರೆ, ಯಾವುದೂ ತಿಳಿಯದ ಮಮತಾ ಅವರು ಏಕಾಏಕಿ ನಡೆದ ಈ ಘಟನೆಯಿಂದ ಕಂಗಾಲಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯದಂಗಡಿಯಲ್ಲಿದ್ದ ಬಾಲಕಿ ರಕ್ಷಣೆ: ಮಾಲೀಕನ ವಿರುದ್ಧ ಕೇಸ್‌
ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ಜರುಗಿದ ಸವದತ್ತಿಶ್ರೀ ಎಲ್ಲಮ್ಮ ದೇವಿ ಜಾತ್ರೆ