ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ

KannadaprabhaNewsNetwork |  
Published : Jan 11, 2026, 03:15 AM IST
ರಸ್ತೆ ಸುರಕ್ಷತಾ ನಿಯಮ ಪಾಲಿಸುವುದು ಕಡ್ಡಾಯ : ಡಿಸಿ | Kannada Prabha

ಸಾರಾಂಶ

ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಕ್ರಮ ಬಾಂಗ್ಲಾದೇಶದವರನ್ನು, ರೋಹಿಂಗ್ಯಾಗಳನ್ನು ಹೊರ ಹಾಕಬೇಕು ಎಂದು ನಗರ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಕ್ರಮ ಬಾಂಗ್ಲಾದೇಶದವರನ್ನು, ರೋಹಿಂಗ್ಯಾಗಳನ್ನು ಹೊರ ಹಾಕಬೇಕು ಎಂದು ನಗರ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಇದೇ ಅಕ್ರಮಕೋರರ ವಿರುದ್ಧ, ಅಕ್ರಮ ವಾಸಿಗಳ ವಿರುದ್ಧ ಪಶ್ಚಿಮ ಬಂಗಾಳ ತಮಿಳುನಾಡಿನಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಪಾಕ್ ಬಾಂಗ್ಲಾ ಪರವಾಗಿ ಉಗ್ರ ಚಟುವಟಿಕೆಗಳನ್ನು ರೋಹಿಂಗ್ಯಾಗಳು ಮಾಡುತ್ತಾರೆ. ಕಾರಣ ಇವರೆಲ್ಲರನ್ನು ಹೊರ ಹಾಕಬೇಕು.

ಸಚಿವ ಜಮೀರಅಹ್ಮದ್‌ ಖಾನ್ ಕ್ಷೇತ್ರದಲ್ಲಿ ಬಾಂಗ್ಲಾ ದೇಶದವರು ಮತದಾರರಿದ್ದಾರೆ. ಅವರಿಂದಲೇ ಜಮೀರ ಗೆದ್ದು ಬರುತ್ತಾರೆ ಎಂದು ದೂರಿದರು.ಅಕ್ರಮ ವಾಸಿಗಳಿಗೆ ರೇಷನ್ ಕಾರ್ಡ್ ವೋಟರ್ ಕಾರ್ಡ್ ನೀಡಲಾಗಿದೆ. ರಾಜ್ಯದಿಂದ ಅಕ್ರಮವಾಸಿಗಳನ್ನು ಓಡಿಸಬೇಕಿದೆ. ನಗರದಲ್ಲೂ ಅಕ್ರಮ ವಾಸಿಗಳಿದ್ದಾರೆ. ಇವೆ ವಿರುದ್ಧ ಡಿಸಿ ಅವರಿಗೆ ದೂರು ನೀಡಿದ್ದೇನೆ. ನಗರದಲ್ಲಿ 16 ಸಾವಿರ ಅಕ್ರಮ ವಾಸಿಗಳ ಕುರಿತು ಮಾಹಿತಿ ನೀಡಿದ್ದೇನೆ. ಶೀಘ್ರವೇ ಎಫ್.ಐ.ಆರ್ ದಾಖಲಾಗುತ್ತದೆ. ಆಗ ಕ್ಲೀನ್‌ಪ್‌ ಆಗುತ್ತದೆ ಎಂದು ಡಿಸಿ ಭರವಸೆ ನೀಡಿದ್ದಾರೆ ಎಂದರು.ನಗರದಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ಕಂಡು ಬಂದರೇ ನನ್ನ ಕಚೇರಿಗೆ ಮಾಹಿತಿ ನೀಡಿ. ನಾವು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇವೆಂದು ಮನವಿ ಮಾಡಿದರು. ರೋಹಿಂಗ್ಯಾಗಳು ಅಕ್ರಮಕೋರರು ಹೊರ ಹೋಗದಿದ್ದರೆ ಭಾರತ ಭಾರತವಾಗಿ ಉಳಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವಿಚಾರದಲ್ಲಿ ಹಿಂದೂ ಜಾಗರಣಾ ವೇದಿಕೆಯವರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದು ಸರಿಯಲ್ಲ. ರಾಜ್ಯದಲ್ಲಿ ಪಾಕಿಸ್ತಾನ ಸರ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನವರಿಗೆ ಕೇವಲ ಅವರ ಮತ ಮಾತ್ರ ಬೇಕಿದೆ ಎಂದು ಪರೋಕ್ಷವಾಗಿ ಮುಸ್ಲಿಂ ಮತಗಳು ಮಾತ್ರ ಬೇಕೆಂದು ಕುಟುಕಿದರು. ಹೀಗಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಭಯವಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಈಗ ಹುಚ್ಚು ಹಿಡಿದಂತಾಗಿದೆ. ಮಮತಾ ಬ್ಯಾನರ್ಜಿ ಈಡಿ ಹಾಗೂ ಪೊಲೀಸರ ಮೇಲೆ ದಾಳಿ ಮಾಡುವುದು. ಕಡತಗಳನ್ನು ತೆಗೆದುಕೊಂಡು ಓಡಿ ಹೋಗುವುದು ಮಾಡುತ್ತಿದ್ದಾಳೆಂದು ಹೀಯಾಳಿಸಿದರು. ಮತಗಳ ಕಾರಣ ದೇಶದ ಜನರಿಗೆ ಇವರೆಲ್ಲ ಮೋಸ ಮಾಡುತ್ತಿದ್ದಾರೆ. ನಾವು ಜಾಗೃತಿ ಆಗದಿದ್ದರೇ ಪರಸ್ಥಿತಿ ಕೆಟ್ಟದಾಗುತ್ತದೆ. ಕಡಿಮೆ ಸಂಬಳಕ್ಕೆ ಸಿಗುತ್ತಾರೆಂದು ನಮ್ಮವರು ರೋಹಿಂಗ್ಯಾಗಳಿಗೆ ಕೆಲಸ ಕೊಡುತ್ತಾರೆ. ರಾಜ್ಯದ ಎಲ್ಲ ಕಾಫಿ ಎಸ್ಟೇಟ್‌ಗಳಲ್ಲಿ ಹೆಚ್ಚಿನ ಕಾರ್ಮಿಕರು ರೋಹಿಂಗ್ಯಾಗಳೇ ಇದ್ದಾರೆ. ಅವರಿಂದಲೇ ಆಪತ್ತು. ಇದಕ್ಕೆ ಕೆಜೆ ಹಳ್ಳಿ, ಡಿಕೆ ಹಳ್ಳಿ ಹಾಗೂ ಹುಬ್ಬಳ್ಳಿ ಪೊಲೀಸ್ ಠಾಣೆಯ ಪ್ರಕರಣ ಸಾಕ್ಷಿಯಾಗಿವೆ ಎಂದು ಉದಾಹರಣೆ ನೀಡಿದರು.ನೆರೆಯ ಕೇರಳ ರಾಜ್ಯದಲ್ಲಿರೋ ಕನ್ನಡ ಶಾಲೆಗಳಲ್ಲಿ ಮಳಿಯಾಳಂ ಭಾಷೆ ಕಡ್ಡಾ ವಿಚಾರದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಕರ್ನಾಟಕ -ಕೇರಳದ ಗಡಿ ಪ್ರದೇಶದಲ್ಲಿ ಈಗಲೂ ಅನೇಕ ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಒತ್ತಾಯ ಮಾಡಿದರು. ಇದೇ ರೀತಿ ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶದ ಅನೇಕ ಗ್ರಾಮಗಳು ಕರ್ನಾಟಕ ಸೇರಬೇಕಿದೆ. ಇಂತಹದ್ದರಲ್ಲಿ ಕನ್ನಡ ಶಾಲೆಗಳು ಬಂದ್ ಮಾಡುವಂತಹದು ಹಾಗೂ ಕನ್ನಡ ಬಿಟ್ಟು ಮಳಿಯಾಳಂ ಭಾಷೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಅನ್ನುವುದು ನಮ್ಮ ರಾಜಕೀಯ ವ್ಯವಸ್ಥೆಯ ವಿರೋಧವಾಗುತ್ತದೆ. ಕೇರಳದ ಕಾಸರಗೋಡನಲ್ಲಿ ಶೇ.100 ಜನರು ಕನ್ನಡ ಮಾತನಾಡುತ್ತಾರೆ. ಅವರಿಗೆ ಮಳಿಯಾಳಂ ಭಾಷೆನೇ ಬರಲ್ಲ, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬಂತಹ ಗಡಿ ವಿವಾದ ಈಗಲು ಇದೆ. ಎಲ್ಲಿಯವರೆಗೆ ಗಡಿ ವಿವಾದದ ಶಾಶ್ವತವಾದ ರೇಖೆ ಹಾಕುವುದಿಲ್ಲ. ಅಲ್ಲಿಯವರೆಗೆ ಕೇರಳ ಸರ್ಕಾರ ಮಾಡಿದ್ದು ತಪ್ಪು ತೀರ್ಮಾನ ಇದೆ. ಇದರ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟಿಸಬೇಕು. ಈ ರೀತಿ ಕೇರಳ ಸರ್ಕಾರದವರು ನಮ್ಮ‌ ಕನ್ನಡಿಗರಿಗೆ ತೊಂದರೆ ಕೊಟ್ಟರೇ ನಮ್ಮಲ್ಲೂ ಸಾಕಷ್ಟು ಜನ ಕೇರಳದವರಿದ್ದಾರೆ. ಅವರಿಗೂ ಇಲ್ಲಿ ತೊಂದರೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಭಾಷಾ ವಿಚಾರದಲ್ಲಿ ಯಾವುದೇ ಆಂತರಿಕ ಗಲಾಟೆಗೆ ಆಗುವುದಕ್ಕೆ ಅವಕಾಶ ಮಾಡಿಕೊಡಬಾರದು. ಈ ಕೂಡಲೇ ರಾಜ್ಯ ಸರ್ಕಾರ ಕೇರಳ ಸರ್ಕಾರಕ್ಕೆ ಇದರ ಬಗ್ಗೆ ತೀವ್ರವಾದ ವಿರೋಧ ವ್ಯಕ್ತಪಡಿಸಬೇಕು. ಸದ್ಯ ಇರುವಂತೆಯೇ ಮುಂದುವರೆಯುವಂತೆ ಒತ್ತಾಯಿಸಬೇಕು. ಗಡಿ ವಿವಾದ, ಭಾಷೆ ವಿವಾದದಿಂದ ಕಾನೂನು ಸುವ್ಯವಸ್ಥೆ ಹದಗಡೆಬಾರದು.

-ಬಸನಗೌಡ ಪಾಟೀಲ

ಯತ್ನಾಳ, ಶಾಸಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಇಂದಿನಿಂದ ಸಿದ್ಧೇಶ್ವರ ಜಾತ್ರಾ ಮಹೋತ್ಸವ