ಪ್ರಾಯೋಗಿಕ ಕಲಿಕೆಯಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ವೃದ್ಧಿ: ವಿ.ರಾಮಸ್ವಾಮಿ

KannadaprabhaNewsNetwork |  
Published : Nov 19, 2026, 01:30 AM IST
ಪೋಟೋ 4 : ಗೊಲ್ಲಹಳ್ಳಿ ಅಂಜನೇಯ ಸ್ವಾಮಿ ಆವರಣದಲ್ಲಿ ಹಿತಚಿಂತನ ಪಬ್ಲಿಕ್ ಶಾಲಾ ವತಿಯಿಂದ ಆಯೋಜಿಸಲಾಗಿದ್ದ ಜ್ಞಾನೋತ್ಸವ ವಿಜ್ಷಾನ ವಸ್ತು ಪ್ರದರ್ಶನಕ್ಕೆ ಹಿತಚಿಂತನ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವಿ.ರಾಮಸ್ವಾಮಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಗಮನ ಸೆಳೆದ ವಿದ್ಯಾರ್ಥಿಗಳ ಮಾದರಿಗಳು: ವಸ್ತು ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಗಳು ಪೋಷಕರು ಮತ್ತು ಶಿಕ್ಷಕರ ಕುತೂಹಲಕ್ಕೆ ಸಾಕ್ಷಿಯಾದವು. ಪ್ರಮುಖವಾಗಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಆಧುನಿಕ ಮನೆ ನಿರ್ಮಾಣ, ಮಾನವ ದೇಹದ ಕಾರ್ಯನಿರ್ವಹಣೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತಾದ ಮಾದರಿಗಳು ಎಲ್ಲರ ಮೆಚ್ಚುಗೆ ಗಳಿಸಿದವು.

ದಾಬಸ್‍ಪೇಟೆ: ಮಕ್ಕಳಲ್ಲಿ ಕೇವಲ ಪಠ್ಯಪುಸ್ತಕದ ಜ್ಞಾನದ ಜೊತೆಗೆ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಅವರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲತೆ ಬೆಳೆಯಲು ಸಾಧ್ಯ ಎಂದು ಹಿತಚಿಂತನ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.

ಗೊಲ್ಲಹಳ್ಳಿ ಶ್ರೀಆಂಜನೇಯಸ್ವಾಮಿ ಆವರಣದಲ್ಲಿ ಹಿತಚಿಂತನ ಪಬ್ಲಿಕ್ ಶಾಲಾ ವತಿಯಿಂದ ಆಯೋಜಿಸಲಾಗಿದ್ದ ಜ್ಞಾನೋತ್ಸವ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಳಿದ್ದನ್ನು ಮರೆಯುತ್ತೇವೆ, ನೋಡಿದ್ದನ್ನು ನೆನಪಿಟ್ಟುಕೊಳ್ಳುತ್ತೇವೆ, ಆದರೆ ಸ್ವತಃ ಮಾಡಿದ್ದನ್ನು ಶಾಶ್ವತವಾಗಿ ಕಲಿಯುತ್ತೇವೆ ಎಂಬ ತತ್ವದಂತೆ ಮಕ್ಕಳು ಕಲಿಯಬೇಕು. ವಿಜ್ಞಾನದ ಪರಿಕಲ್ಪನೆಗಳಲ್ಲಿ ಬರುವ ಏಕೆ ಮತ್ತು ಹೇಗೆ ಎಂಬ ಪ್ರಶ್ನೆಗಳಿಗೆ ನಿಖರ ಉತ್ತರ ಕಂಡುಕೊಳ್ಳಲು ಇಂತಹ ವಸ್ತು ಪ್ರದರ್ಶನಗಳು ಉತ್ತಮ ವೇದಿಕೆಯಾಗಿವೆ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಾತ್ಮಕ ಹಾಗೂ ವೃತ್ತಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಚಟುವಟಿಕೆಗಳು ಅತ್ಯಗತ್ಯ ಎಂದು ತಿಳಿಸಿದರು.

ಗಮನ ಸೆಳೆದ ವಿದ್ಯಾರ್ಥಿಗಳ ಮಾದರಿಗಳು: ವಸ್ತು ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಗಳು ಪೋಷಕರು ಮತ್ತು ಶಿಕ್ಷಕರ ಕುತೂಹಲಕ್ಕೆ ಸಾಕ್ಷಿಯಾದವು. ಪ್ರಮುಖವಾಗಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಆಧುನಿಕ ಮನೆ ನಿರ್ಮಾಣ, ಮಾನವ ದೇಹದ ಕಾರ್ಯನಿರ್ವಹಣೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತಾದ ಮಾದರಿಗಳು ಎಲ್ಲರ ಮೆಚ್ಚುಗೆ ಗಳಿಸಿದವು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಸುವರ್ಣರಾಮಸ್ವಾಮಿ, ಪ್ರಾಂಶುಪಾಲ ವಿಕ್ಟರ್ ಪುಷ್ಪರಾಜ್, ಕಾರ್ಯದರ್ಶಿ ರಮೇಶ್ ಸೇರಿ ಶಾಲೆಯ ಬೋಧಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ