ಕನ್ನಡಪ್ರಭ ವಾರ್ತೆ ಚಾಮರಾಜನಗರ ತಾಲೂಕು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ರುಪ್ಸ ಸಂಘಟನೆ ಸದೃಢವಾಗದಿದ್ದರೆ ಶೋಷಣೆ ತಪ್ಪಿದ್ದಲ್ಲ ಎಂದು ರಾಜ್ಯ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ಡಾ.ಹಾಲನೂರು ಎಸ್. ಲೇಪಾಕ್ಸ್ ಎಚ್ಚರಿಸಿದರು.
ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಪ್ರತ ಬಜೆಟ್‌ನಲ್ಲಿ ೩೬ ಸಾವಿರ ಕೋಟಿಗಳ ಅನುದಾನ ನೀಡುತ್ತಿದೆ, ಆದೇ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ನಿರ್ಬಂಧ ಹಾಕುತ್ತಿದೆ, ಇದರ ಜೊತೆ ಶಿಕ್ಷಣಾಧಿಕಾರಿಗಳ ಕಿರುಕುಳ, ಇವುಗಳ ವಿರುದ್ದ ಹೋರಾಡಬೇಕಾದರೆ ಸದೃಢ ಸಂಘಟನೆ ಅತ್ಯಂತ ಅವಶ್ಯಕವಾಗಿದೆ ಎಂದರು.
ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಸರಕಾರ ನಿರ್ವಹಿಸಬಹುದಾದ ಜವಾಬ್ದಾರಿಯನ್ನು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ವಹಿಸುತ್ತಿವೆ. ಸರಕಾರ ೧೯೯೫ ನೇ ಸಾಲಿನವರೆಗೆ ಪ್ರಾರಂಭವಾಗಿರುವ ಖಾಸಗಿ ಅನುದಾನ ರಹಿತ ಶಾಲಾ, ಕಾಲೇಜುಗಳಿಗೆ ಸಹಾಯ ಅನುದಾನ ನೀಡುವ ನೀತಿ ವಿಸ್ತರಿಸಬೇಕು. ಅನುದಾನಿತ ಶಾಲೆಗಳ ಮಕ್ಕಳಿಗೆ ನೀಡುವ ಎಲ್ಲ ರೀತಿಯ ಸೌಲಭ್ಯ ಅನುದಾನ ರಹಿತ ಶಾಲೆಯ ಮಕ್ಕಳಿಗೆ ವಿಸ್ತರಿಸಬೇಕು ಎಂದರು.ಆದೇಶ ಹಿಂಪಡೆಯಿರಿ:
ಸಂಘ ಸ್ಥಾಪನೆಯಾದ ನಂತರ ಸಂಘ ಹಲವಾರು ಸಮಸ್ಯೆಗಳನ್ನು ನಿವಾರಿಸುವತ್ತ ಸರ್ಕಾರದೊಡನೆ ಹೋರಾಡಿದೆ, ಇನ್ನೂ ಮುಂದೆಯು ನಮ್ಮೆಲ್ಲಾ ಸಮಸ್ಯೆಗಳ ಪರಿಹಾರವಾಗಬೇಕಾದರೆ ಸಂಘ ಮತ್ತಷ್ಟು ಸದೃಡವಾಗಬೇಕು, ಈ ನಿಟ್ಟಿನಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಮುಂದಿನ ರೂಪುರೇಷೆಗಳನ್ನು ರೂಪಿಸೋಣ ಎಂದರು. ಬಿಜೆಪಿ ಸರ್ಕಾರ ಇದ್ದಾಗಲೇ ಸಂಘ ಸಾಕ್ಷಿ ಸಮೇತ ಕೆಲ ಭ್ರಷ್ಟರ ಮುಖವಾಡ ಬಯಲಾಗಿತ್ತು. ಆ ಬಗ್ಗೆ ತನಿಖೆ ನಡೆಯುವ ಹಂತದಲ್ಲೇ ಈಗ ಮತ್ತೆ ಅವರಲ್ಲೇ ಕೆಲವರು ಹಳೆ ಚಾಳಿ ಮುಂದುವರಿಸಿದ್ದಾರ ಎಂದರು. ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲ:
ನೈತಿಕತೆ ಮತ್ತು ಆಧ್ಯಾತ್ಮಿಕತೆಗೆ ಶಿಕ್ಷಣದ ಅವಶ್ಯಕತೆ ಇದೆ, ಇದರ ಜೊತೆ ರಾಷ್ಟ್ರ ಪ್ರೇಮವನ್ನು ಮಕ್ಕಳಲ್ಲಿ ಬೆಳಸಿದರೆ ವಿಕೃತ ಘಟನೆಗಳನ್ನು ತಡೆಗಟ್ಟಿ ಸಮರ್ಥ ನಾಗರೀಕನ್ನಾಗಿ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಮಂಜುನಾಥ ರೇವಾಂಕರ್ ಡಾ.ಮುಖೇಶ್ ಮಾತನಾಡಿದರು.ಜಿಲ್ಲಾಧ್ಯಕ್ಷ ಎನ್.ನಂಜುಂಡಸ್ವಾಮಿ ಪ್ರಾಸ್ತಾವಿಸಿ, ಗೌರವಾಧ್ಯಕ್ಷ ರಮೇಶ್ ಸ್ವಾಗತಿಸಿದರು, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳು, ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.