ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗುಂಡ್ಲುಪೇಟೆಯಿಂದ ಮೈಸೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ ಷಟಲ್ ಬಸ್‌ನಂತೆ ಹೆದ್ದಾರಿಯಲ್ಲಿ ಸಿಗುವ ಬಹುತೇಕ ಎಲ್ಲಾ ಹಳ್ಳಿಗಳ ಗೇಟ್ ಬಳಿ ನಿಲ್ಲುತ್ತಿದೆ. ಇದೇನು ಎಕ್ಸ್‌ಪ್ರೆಸ್ ಸೇವೆಯೇ ಅಥವಾ ಷಟಲ್ ಬಸ್ಸೇ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.ಕೆಲ ವರ್ಷದ ಹಿಂದೆ ಗುಂಡ್ಲುಪೇಟೆಯಿಂದ ಹೊರಡುವ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ಸು ಗುಂಡ್ಲುಪೇಟೆ ಬಿಟ್ಟರೆ, ಗರಗನಹಳ್ಳಿ, ಬೇಗೂರು, ಹಿರೀಕಾಟಿ ಬಿಟ್ಟರೆ ನಂಜನಗೂಡು, ಕಡಕೊಳ ನಂತರ ಮೈಸೂರಿನಲ್ಲಿ ಮಾತ್ರ ನಿಲ್ಲಿಸುತ್ತಿತ್ತು.
ಸಾರಿಗೆ ನಿಗಮ ಬೇಕಿದ್ದರೆ ಎಕ್ಸ್‌ಪ್ರೆಸ್ ಬಸ್ಸಿಗೂ ಷಟಲ್ ದರವೇ ಪಡೆಯಲಿ, ಅದುಬಿಟ್ಟು ಎಕ್ಸ್‌ಪ್ರೆಸ್ ದರ ಪಡೆದು ಷಟಲ್ ಸೇವೆ ಕೊಟ್ಟರೆ ಹೆಚ್ಚುವರಿ ಹಣ ಏಕೆ ಪಡೆಯಬೇಕೆಂದು ಜನರು ಪ್ರಶ್ನಿಸುತ್ತಿದ್ದಾರೆ.ಷಟಲ್ ಬಸ್ ಬಿಡಿ:
ಗುಂಡ್ಲುಪೇಟೆ-ಮೈಸೂರು ಮಧ್ಯೆ ಎಲ್ಲ ಗೇಟ್‌ಗಳಲ್ಲಿ ನಿಲ್ಲಿಸಲು ಎಕ್ಸ್‌ಪ್ರೆಸ್ ಬದಲಿಗೆ ಸಾರಿಗೆ ನಿಗಮವು ಷಟಲ್ ಬಸ್ ಬಿಡಲಿ ಎಂದು ಪ್ರಯಾಣಿಕರು ಆಗ್ರಹಿಸಿದ್ದು, ಎಕ್ಸ್‌ಪ್ರೆಸ್ ಹಣ ಪಡೆದು ಷಟಲ್ ಸೇವೆ ಕೊಡುವುದು ಹಗಲು ದರೋಡೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಮೈಸೂರು ಮಾರ್ಗದಲ್ಲಿ 25ಕ್ಕೂ ಹೆಚ್ಚು ನಿಲುಗಡೆಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ಎಕ್ಸ್‌ಪ್ರೆಸ್ ಬಸ್ ಹೊರಟರೆ, ಪಟ್ಟಣದ ಸುರಬಿ, ಮಾಡ್ರಹಳ್ಳಿ, ಮಳವಳ್ಳಿ, ಗರಗನಹಳ್ಳಿ, ರಾಘವಾಪುರ, ಬೇಗೂರು ಐಟಿಐ, ನಾಡ ಕಚೇರಿ, ಬೇಗೂರು ಬಸ್ ನಿಲ್ದಾಣ, ಬೇಗೂರು ಟಿಬಿ, ತೊಂಡವಾಡಿ, ಹಿರೀಕಾಟಿ, ಸಿಂಧುವಳ್ಳಿಪುರ, ಮುದ್ದಹಳ್ಳಿ, ದೇವಿರಮ್ಮನಹಳ್ಳಿ, ಪೊಲೀಸ್ ಸ್ಟೇಷನ್, ಹಲ್ಲಹಳ್ಳಿ ಸರ್ಕಲ್, ಹಳೇ ಬಿಡಿಒ ಕಚೇರಿ, ನಂಜನಗೂಡು ಸೇತುವೆ, ಪೇಪರ್ ಮಿಲ್, ತಾಂಡವಾಪುರ, ಕಡಕೊಳ, ಆರ್‌ಎಂಸಿ, ಎಲೆತೋಟ, ಗನ್ ಹೌಸ್, ಆರ್ ಗೇಟ್ ಸೇರಿದರೆ 25ಕ್ಕೂ ಹೆಚ್ಚು ನಿಲುಗಡೆಯಿದೆ.