ಹೋಬಳಿ ಕೇಂದ್ರದ ಶ್ರೀ ಸಂತೆಕಾಳೇಶ್ವರಿ ದೇವಾಲಯ ಜೀರ್ಣೋದ್ಧಾರ ಸೇರಿ ₹2 ಕೋಟಿ ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಜೊತೆಗೆ ಹೋಬಳಿ ಕೇಂದ್ರ ಸಂಪರ್ಕಿಸುವ ಪ್ರಮುಖ 4 ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪ್ರಸ್ತುತ ಸಾಲಿನಿಂದಲೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಗೊಳಿಸಲಾಗಿದೆ, ಅಭಿವೃದ್ಧಿಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಸೇರಿ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೂ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬಾಗೂರು (ನುಗ್ಗೇಹಳ್ಳಿ )
ದೇಶದ ಬೆನ್ನೆಲುಬು ರೈತನ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರಬೇಕು. ಉತ್ತಮ ಮಳೆ ಬೆಳೆಯಾದರೆ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ಹೋಬಳಿ ಕೇಂದ್ರದ ಗ್ರಾಮ ದೇವತೆ ಶ್ರೀ ಸಂತೆ ಕಾಳೇಶ್ವರಿ ಹಾಗೂ ಶ್ರೀ ಚಿಕ್ಕಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸಮಾಜ ಸೇವಕ ಅಣತಿ ಯೋಗೇಶ್ ರವರ 43ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಈ ಭಾಗದ ಅಣತಿ ಯೋಗೇಶ್ ಅವರು ದೇವಾಲಯಗಳ ಜೀರ್ಣೋದ್ಧಾರ, ನೀರಾವರಿ, ವಿದ್ಯಾರ್ಥಿಗಳಿಗೆ ನೆರವು ಸೇರಿ ಈ ಭಾಗದ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಹಾಯ ಮಾಡುವ ಮೂಲಕ ಎಲ್ಲರ ಪ್ರೀತಿ ಪಾತ್ರಕ್ಕೆ ಸನಿಹರಾಗಿದ್ದಾರೆ. ಅವರ ಸಮಾಜ ಸೇವೆ ನಿರಂತರವಾಗಿ ಹೇಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಹೋಬಳಿ ಕೇಂದ್ರದ ಶ್ರೀ ಸಂತೆಕಾಳೇಶ್ವರಿ ದೇವಾಲಯ ಜೀರ್ಣೋದ್ಧಾರ ಸೇರಿ ₹2 ಕೋಟಿ ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಜೊತೆಗೆ ಹೋಬಳಿ ಕೇಂದ್ರ ಸಂಪರ್ಕಿಸುವ ಪ್ರಮುಖ 4 ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪ್ರಸ್ತುತ ಸಾಲಿನಿಂದಲೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಗೊಳಿಸಲಾಗಿದೆ, ಅಭಿವೃದ್ಧಿಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಸೇರಿ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೂ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.
ಬಾಗೂರು ಏತ ನೀರಾವರಿ ಯೋಜನೆಯ ಮೂಲಕ ಈ ಭಾಗದ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿ ರೈತರಿಗೆ ನೆರವಾಗಿದ್ದೇವೆ. ಈ ವರ್ಷ ಜೂನ್ ತಿಂಗಳು ಕಳೆದರೂ ಮಳೆಯಾಗಿಲ್ಲ, ಪ್ರಸ್ತುತ 40ರಷ್ಟು ಮಳೆ ಕೊರತೆ ಉಂಟಾಗಿದ್ದು ಜುಲೈ ತಿಂಗಳಲ್ಲಾದರೂ ದೇವರ ದಯೆಯಿಂದ ಉತ್ತಮ ಮಳೆಯಾಗಿ ಹೇಮಾವತಿ ಜಲಾಶಯ ತುಂಬಲಿ ಎಂದು ದೇವರನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.ಸಮಾಜ ಸೇವಕ ಅಣತಿ ಯೋಗೇಶ್ ಮಾತನಾಡಿ, ತಾಲೂಕಿನ ಶಾಸಕ ಸಿ.ಎನ್. ಬಾಲಕೃಷ್ಣ ಮಾರ್ಗದರ್ಶನದಲ್ಲಿ ಈ ಭಾಗದ ದೇವಾಲಯ, ನೀರಾವರಿ ಸೇರಿ ಅನೇಕ ಕೆಲಸಗಳಿಗೆ ವೈಯಕ್ತಿಕವಾಗಿ ಸಹಕಾರ ನೀಡಿದ್ದೇನೆ. ಸದಾ ತಾಲೂಕಿನ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಶಾಸಕರ ಕಾರ್ಯವೈಖರಿ ಎಲ್ಲರೂ ಮೆಚ್ಚುವಂಥದ್ದು, ಮುಂಬರುವ ದಿನಗಳಲ್ಲೂ ಅವರ ಜೊತೆಗೂಡಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಸಂತೆ ಕಾಳೇಶ್ವರಿ ದೇವಾಲಯದಲ್ಲಿ ಶಾಸಕ ಬಾಲಕೃಷ್ಣ ಹಾಗೂ ಸಮಾಜ ಸೇವಕ ಅಣತಿ ಯೋಗೇಶ್ ವಿಶೇಷ ಪೂಜೆ ಸಲ್ಲಿಸಿದರು.ಅಭಿಮಾನಿಗಳು, ಕಾರ್ಯಕರ್ತರು ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ, ಮೂಡನಹಳ್ಳಿ ಚಂದ್ರೇಗೌಡ, ವಿ.ಎನ್. ಮಂಜುನಾಥ್, ಟಿಎಪಿಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಉದ್ಯಮಿ ಮರವನಹಳ್ಳಿ ದೇವರಾಜ್, ಪುರಸಭಾ ಮಾಜಿ ಅಧ್ಯಕ್ಷ ಕೋಟೆ ಮೋಹನ್, ಮುಖಂಡರಾದ ಮರಿ ದೇವೇಗೌಡ, ರಾಮಚಂದ್ರು, ಶಿವಶಂಕರ ಕುಂಟೆ, ಓಬಳಾಪುರ ಬಸವರಾಜ್, ಅಣ್ಣೇಗೌಡ, ಬಾಗೂರು ಮನು, ನಿವೃತ್ತ ಸೈನಿಕ ಮಧು, ಚಂದ್ರೇಗೌಡ, ಇಂದ್ರೇಶ್, ಮುರಗೂರು ಅನಿಲ್ ಕುಮಾರ್, ಹುಲಿಕೆರೆ ಸಂಪತ್ ಕುಮಾರ್, ಲಕ್ಷ್ಮಣ್, ಮಲ್ಲೇಶ್, ಕಾಳೇಶ್, ಪ್ರಮೋದ್, ಮಹೇಶ್, ದೊಡಗನ್ನಿ ಸತೀಶ್, ಸೇರಿ ಗ್ರಾಮಸ್ಥರು ಹಾಜರಿದ್ದರು.