ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ಸಾರ್ವಜನಿಕರ ಆಸ್ತಿಗಳು ಸುಮಾರು ೩೪ ಸಾವಿರದಷ್ಟಿವೆ. ಈವರೆಗೆ ೧೨ ಸಾವಿರ ಆಸ್ತಿಗಳಿಗೆ ಇ ಖಾತಾ ಮಾಡಿಕೊಡಲಾಗಿದೆ. ಬಾಕಿ ಇರುವ ಖಾತೆಗಳ ಕಂದಾಯ ತೆರಿಗೆ ಶುಲ್ಕ ಆಗಸ್ಟ್ ಅಂತ್ಯದವರೆಗೆ ಶೇ.೫ರಷ್ಟು ರಿಯಾಯಿತಿ ನೀಡುವುದನ್ನು ವಿಸ್ತರಿಸಲಾಗಿದ್ದು ಸಾರ್ವಜನಿಕರು ಅವಕಾಶ ಸದ್ಬಳಕೆ ಮಾಡಿಕೊಳ್ಳುವಂತೆ ನಗರಸಭೆ ಆಯುಕ್ತ ನವೀನ್‌ಚಂದ್ರ ತಿಳಿಸಿದರು.
ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ೫೩ ವಾರ್ಡಿನಲ್ಲೂ ವ್ಯಾಪಕವಾದ ಪ್ರಚಾರ ಕೈಗೊಂಡಿದ್ದು, ಪ್ರತಿ ವಾರ್ಡಿನಲ್ಲೂ ಕ್ಯಾಂಪ್‌ಗಳನ್ನು ಮಾಡಲಾಗುತ್ತಿದೆ, ಪ್ರಸ್ತುತ ವಾರ್ಡ್ ಸಂಖ್ಯೆ ೧ ರಲ್ಲಿ ಕೆ.ಯು.ಡಿ.ಎ ಲೇಔಟ್‌ಲ್ಲಿ ಎರಡು ದಿನದಿಂದ ಸುಮಾರು ೮ ಲಕ್ಷ ರೂ.ಗಳಿಗೂ ಹೆಚ್ಚಿನ ಕಂದಾಯ ಸಾರ್ವಜನಿಕರು ಪಾವತಿಸಿದ್ದಾರೆ. ಆದರೆ ಈ ಭಾಗದಲ್ಲಿ ಸರ್ವರ್ ಸಮಸ್ಯೆ ಇರುವುದರಿಂದ ಕಂದಾಯ ಪಾವತಿಯಾಗುತ್ತಿಲ್ಲ ಎಂದರು.ಕಂದಾಯ ಪಾವತಿಸಲು ಮನವಿ
ನಗರದ ಎಲ್ಲಾ ವಾರ್ಡಗಳ ಜನಪ್ರತಿನಿಧಿಗಳು ಸಾರ್ವಜನಿಕರ ಆಸ್ತಿಗಳ ಬಾಕಿ ಕಂದಾಯಗಳನ್ನು ನಗರಸಭೆಗೆ ಪಾವತಿಸುವಲ್ಲಿ ಸಹಕಾರಿಸಬೇಕು ಹಾಗೂ ಆಯಾಯಾ ವಾರ್ಡಿನ ಮುಖಂಡರು ನಗರದ ಅಭಿವೃದ್ದಿಯಾಗಬೇಕಾದರೆ ಎಲ್ಲರೂ ಕಂದಾಯ ಪಾವತಿಸಿದಾಗ ಮಾತ್ರ ಆರ್ಥಿಕವಾಗಿ ಸದೃಢವಾಗಿದ್ದು ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.ಪಿಒಪಿ ಗಣೇಶ ಸ್ಥಾಪಿಸಬೇಡಿ
ಸಾರ್ವಜನಿಕರು ಪರಿಸರ ಗಣೇಶ ಮೂರ್ತಿಗಳನ್ನು ಮಾತ್ರ ಖರೀದಿಸಬೇಕು. ಪಿ.ಓ.ಪಿ. ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಧಕ್ಕೆಯುಂಟಾಗಲಿದೆ. ಸಾರ್ವಜನಕ ಗಣೇಶ ಮೂರ್ತಿಗಳ ಸ್ಥಾಪಿಸುವಲ್ಲಿ ಎಲ್ಲರೂ ಕಡ್ಡಾಯವಾಗಿ ನಗರಸಭೆಯ ಅನುಮತಿ ಪಡೆಯಬೇಕು, ಗಣೇಶ ಮೂರ್ತಿಗಳ ಮಾರಾಟ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಮಾತ್ರ ಮರಾಟ ಮಾಡಲು ಅವಕಾಶವಿದೆ. ಬೇರೆ ಕಡೆ ಗಣೇಶಮೂರ್ತಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ ಎಂದರು.ಗಣೇಶ ಮೂರ್ತಿಗಳ ವಿಸರ್ಜನೆಗೆ ಕೋಲಾರಮ್ಮ ಕೆರೆಯಂಗಳದಲ್ಲಿ ಇ.ಟಿ.ಸಿ.ಎಂ. ವೃತ್ತದ ಸಮೀಪ ಹೊಂಡದಲ್ಲಿ ವಿಸರ್ಜಿಸಲು ಪ್ರತಿ ವರ್ಷದಂತೆ ಈ ವರ್ಷವು ಅವಕಾಶ ಕಲ್ಪಿಸಿದೆ. ಕ್ರೇನ್ ವ್ಯವಸ್ಥೆ ಮಾಡಿ ಬೋಟ್ ಮತ್ತು ಗಣೇಶಗಳನ್ನು ಬಿಡಲು ಕೆಲವರನ್ನು ನೇಮಿಸಲಾಗುವುದು ಇದಕ್ಕೆ ಸಂಬಂಧಪಟ್ಟಂತೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು. ಪಾದಚಾರಿ ರಸ್ತೆ ಒತ್ತುವರಿಆ.೧೫ರ ನಂತರ ನಗರಸಭೆ ಮತ್ತು ಸಂಚಾರಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಜನದಟ್ಟನೆಯ ರಸ್ತೆಗಳಲ್ಲಿ ಪಾದಚಾರಿ ರಸ್ತೆಗಳನ್ನು ಒತ್ತವರಿ ಮಾಡಿರುವ ವಿರುದ್ದ ತೆರವು ಕಾರ್ಯಚರಣೆ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.. ನಗರದ ಗಾಂಧಿವನದಿಂದ ಎಂ.ಜಿ.ರಸ್ತೆ ಅಮ್ಮವಾರಿಪೇಟೆ, ಬಂಬೂ ಬಜಾರ್ ಮೂಲಕ ಶ್ರೀನಿವಾಸಪುರ ರಸ್ತೆಯ ವೃತ್ತದವರೆಗೂ ಹಾಗೂ ಪ್ರಭಾತ್ ಟಾಕೀಸ್‌ನಿಂದ ಕ್ಲಾಕ್ ಟವರ್‌ವರೆಗೆ, ಕಾಳಿಂಕಾಂಬ ರಸ್ತೆಯಿಂದ ಬಸ್ ನಿಲ್ದಾಣದ ವರೆಗೆ, ಕ್ಲಾಕ್ ಟವರ್ ನಿಂದ ಮೆಕ್ಕೆ ವೃತ್ತದವರೆಗೆ ಸೇರಿದಂತೆ ಪಾದಚಾರಿ ರಸ್ತೆಗಳ ಒತ್ತುವರಿ ತೆರವು ಮಾಡಿಸಲಾಗುವುದುಎಂದರು.