ನಾಟಕ ಪಠ್ಯ-ರಂಗಪಠ್ಯಗಳ ಓದು: ತಾತ್ವಿಕ ಸ್ವರೂಪ; ಒಂದು ದಿನದ ವಿಚಾರ ಸಂಕಿರಣ
ಮಕ್ಕಳನ್ನು ಟಿವಿ, ಮೊಬೈಲ್ ಗೀಳಿನಿಂದ ಹೊರತರಲು ಮತ್ತು ಅವರನ್ನು ಓದುವ ಪ್ರವೃತ್ತಿಗೆ ಇಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರಬೇಕು. ಈ ಭಾಗದ ಖನಿಜ ಸಂಪತ್ತು ದೇಶದಲ್ಲಿ ಪ್ರಮುಖವಾಗಿದ್ದು, ಇಂತಹ ಸ್ಥಳದಲ್ಲಿ ಸಾಂಸ್ಕೃತಿಕ ಕೇಂದ್ರ ಆರಂಭವಾದರೆ, ನಾಟಕ, ಸಂಗೀತ ಹಾಗೂ ಕಲೆ ಸಮೃದ್ಧಿಗೊಳ್ಳಲಿದೆ. ಇಲ್ಲಿ ನಾಟಕ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದರೆ, ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಕೇಂದ್ರದಲ್ಲಿ ಸ್ಕೂಲ್ ಆಫ್ ಮಿನರಲ್ ಸೈನ್ಸ್, ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸುವ ಹಾಗೂ ಹೊಸ ಕೋರ್ಸಗಳನ್ನು ತರುವ ಪ್ರಯತ್ನದಲ್ಲಿದ್ದೇನೆ. ಈ ಕೇಂದ್ರವನ್ನು ಒಂದು ಒಳ್ಳೆಯ ವಸತಿಯುತ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಮತ್ತು ನಂದಿಹಳ್ಳಿಯ ಕ್ಯಾಂಪಸ್ ಅನ್ನು ನಂಬರ್ ಒನ್ ಕ್ಯಾಂಪಸ್ ಆಗಿ ರೂಪಿಸುವ ಆಸೆ ಇಟ್ಟುಕೊಂಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ಪ್ರೊ. ಶಾಂತನಾಯ್ಕ ಶಿರಗಾನಹಳ್ಳಿ ಮಾತನಾಡಿ, ಭಾರತೀಯರು ನಾಟಕಕ್ಕೆ ಕೊಟ್ಟ ಕೊಡುಗೆಯನ್ನು ಬೇರೆ ಯಾವ ಪಾಶ್ಚಾತ್ಯರೂ ಕೊಟ್ಟಿಲ್ಲ. ರಂಗದ ಮೇಲಿನ ನಾಟಕಕ್ಕೆ ತುಂಬಾ ಮಹತ್ವವಿದೆ. ನಾಟಕಗಳು ಸಮಾಜಕ್ಕೆ ಹಿಡಿದ ಕೈಗನ್ನಡಿ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಚಾರ ಸಂಕಿರಣದ ಸಂಚಾಲಕ ಡಾ. ಮಲ್ಲಯ್ಯ ಸಂಡೂರು ಸ್ವಾಗತಿಸಿ ನಿರೂಪಿಸಿದರು. ಕನ್ನಡ ವಿಷಯದ ಅಧ್ಯಾಪಕ ಗುಡ್ಡಪ್ಪ ವಂದಿಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ ರಾಬರ್ಟ್ ಜೋಸ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ರವಿ ಬಿ., ವಿಶ್ವವಿದ್ಯಾಲಯ ಮುಖ್ಯ ಆವರಣದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಸಂತೋಷ್ ಕುಮಾರ ಜಿ.ಕೆ., ಹಿರಿಯ ಚಿತ್ರಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಮರಿಯಮ್ಮನಹಳ್ಳಿಯ ಡಾ. ಕೆ. ನಾಗರತ್ನಮ್ಮ, ಕೇಂದ್ರದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.