ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025- 26ನೇ ಸಾಲಿನ ಪಠ್ಯೇತರ ಚಟುವಟಿಕೆಗಳು, ಕೆಎಸ್ಒಯು ದೂರು ಶಿಕ್ಷಣ ಕಲಿಕಾ ಕೇಂದ್ರ ಮತ್ತು ಕ್ಯಾಂಟಿನ್ ಕಟ್ಟಡ ಉದ್ಘಾಟನೆ ಹಾಗೂ ಕನ್ನಡ ನಾಡು ನುಡಿ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದು ಸುಭಲವಾಗಿ ಸಿಗುತ್ತದೆ ಅದು ಶಾಶ್ವತವಲ್ಲ ಶ್ರಮದಿಂದ ಪಡೆದಿದ್ದ ಮಾತ್ರ ಶಾಶ್ವತವಾದ್ದರಿಂದ ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಣದ ಮಹತ್ವ ಅರಿತು ಅದನ್ನು ಸಾಕಾರ ಮಾಡಿಕೊಳ್ಳಲು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.ಪದವಿ ಘಟ್ಟದಲ್ಲಿ ವಿದ್ಯಾರ್ಥಿಗಳು ಬೇರೆಡೆಗೆ ಆಕರ್ಷಿತರಾಗುವ ಬದಲು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದ ಅವರು ಮನುಷ್ಯ ತನ್ನ ಬದಲಾವಣೆಯ ಘಟ್ಟದಲ್ಲಿ ಸರ್ವವನ್ನು ಸಾಧಿಸಲು ಸಮರ್ಥನಾಗುತ್ತಾನೆ ಎಂದರು.
ವಿದ್ಯಾರ್ಥಿಗಳಿಗೆ ಅನುಕೂಲಕಲ್ಪಿಸುವ ದೃಷ್ಟಿಯಿಂದ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ಕಟ್ಟಡವನ್ನು ಕೆಡವಿ ಹೊಸ 4 ಅಂತಸ್ತಿನ ಕಟ್ಟಡ ನಿರ್ಮಣಕ್ಕೆ 15 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಎಚ್.ಪಿ. ಪ್ರಶಾಂತ್, ಪ್ರಾಂಶುಪಾಲ ಬಿ.ಎಸ್. ಜಯ, ಉಪನ್ಯಾಸಕ ಡಾ. ಚಿಕ್ಕಮಗಳೂರು ಗಣೇಶ್ ಮಾತನಾಡಿದರು.
ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ನಟರಾಜು, ರಾಜಯ್ಯ, ಎಸ್. ಪ್ರಸಾದ್, ಕೆ.ಎಲ್. ರಾಜೇಶ್, ಜಯರಾಮೇಗೌಡ, ಜಿ.ಆರ್. ರಾಮೇಗೌಡ, ಒಬಿಸಿ ಘಟಕದ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್, ಮುಖಂಡರಾದ ಜೆ. ಶಿವಣ್ಣ, ನವೀದ್, ಕೆ. ವಿನಯ್, ಗೌರೀಶ್, ಬಿ.ಎಂ.ಗಿರೀಶ್, ಸುರೇಶ್ ಮೊದಲಾದವರು ಇದ್ದರು.