ಕನ್ನಡಪ್ರಭ ವಾರ್ತೆ ಬೀರೂರು
ಸಮೀಪದ ಮುಂಡ್ರೆ ಗ್ರಾಮದಲ್ಲಿ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾನವನ ತಾನೊಂದು ಬಗೆದರೆ ವಿಧಿ ಇನ್ನೊಂದು ಎಣಿಸಿರುತ್ತದೆ ಎಂಬ ಅರಿವಿನೊಂದಿಗೆ ಬದುಕನ್ನು ಎದುರಿಸಬೇಕು ಎಂದರು.
ಪರಮಾತ್ಮನಿಂದ ಭಿನ್ನವಾಗಿ ಬಂದ ಜೀವಾತ್ಮ ಮತ್ತೆ ಪರಮಾತ್ಮನಲ್ಲಿ ಲೀನವಾಗುವುದು ಸಹಜ ಪ್ರಕ್ರಿಯೆ. ಪಂಚಭೂತ ಹಾಗೂ ಪಂಚತತ್ವಗಳಿಲ್ಲದೆ ಮನುಷ್ಯನ ಅಸ್ತಿತ್ವ ಸಾಧ್ಯವಿಲ್ಲ. ಭಗವಂತನು ಹುಟ್ಟು ಮತ್ತು ಸಾವಿನ ಪುಟಗಳನ್ನು ಬರೆದು ನಮ್ಮನ್ನು ಕಳುಹಿಸುತ್ತಾನೆ. ಆದರೆ ನಡುವಿನ ಬದುಕಿನ ಪುಟಗಳನ್ನ ಅರ್ಥಪೂರ್ಣಗೊಳಿಸುವ ಜವಾಬ್ದಾರಿ ನಮ್ಮದೇ ಆಗಿದೆ ಎಂದು ಹೇಳಿದರು.ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿದರೆ ಜೀವನ ಕ್ರಿಯಾಶೀಲವಾಗುತ್ತದೆ. ಪಾರಮಾರ್ಥಿಕ ದೃಷ್ಟಿಕೋನ ಬೆಳೆಸಿಕೊಂಡರೆ ದುಃಖದ ಸೋಂಕು ಇರುವುದಿಲ್ಲ. ಜೀವನ ನಶ್ವರ, ಸಾವು ಅನಿವಾರ್ಯ. ಈ ತತ್ವದ ಆಧಾರದಲ್ಲಿಯೇ ವೀರಶೈವ ಧರ್ಮವು ಮರಣವೇ ಮಹಾನವಮಿ ಎಂದು ಅರ್ಥೈಸಿದೆ ಎಂದು ತಿಳಿಸಿದರು.
ಡಿ.ವಿ.ಜಿ. ಅವರ ಕಗ್ಗ ಉಲ್ಲೇಖಿಸಿದ ಅವರು, `ಸ್ವರ್ಗ ನರಕದ ಕಲ್ಪನೆಗಳ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ,ಅಲ್ಲಿಗೆ ಹೋಗಿ ಮರಳಿ ಬಂದವರೂ ಇಲ್ಲ. ವರದಿ ತಂದವರೂ ಇಲ್ಲ. ಆದ್ದರಿಂದ ದ್ವೇಷ. ಅಸೂಯೆಯಿಂದ ಬದುಕನ್ನು ನರಕವಾಗಿಸಿಕೊಳ್ಳದೆ, ಇತರರಿಗೆ ನೆರವಾಗಿ ಬದುಕನ್ನು ಸ್ವರ್ಗವನ್ನಾಗಿಸಿಕೊಳ್ಳುವುದೇ ಸಾರ್ಥಕತೆ'''''''' ಎಂದು ಹೇಳಿದರು.
ಬಾಳೆಹೊನ್ನೂರು ಶಾಖಾಮಠದ ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮವು ಆಚಾರ-ವಿಚಾರ ಹಾಗೂ ಪರಂಪರೆಯ ನೆಲೆಯಲ್ಲಿ ಬೆಳೆದಿದೆ. ಗುರು-ಲಿಂಗ-ಜಂಗಮ ಆರಾಧನೆ, ವಿಭೂತಿ ಹಾಗೂ ರುದ್ರಾಕ್ಷಿ ಧಾರಣೆಯಂತಹ ಸಂಪ್ರದಾಯಗಳನ್ನು ನಿರ್ಲಕ್ಷಿಸಬಾರದು. ಕುಟುಂಬದ ಹಿರಿಯರ ನೆನಪಿನಲ್ಲಿ ವರ್ಷಕ್ಕೊಮ್ಮೆಯಾದರೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ನವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಸಲಹೆ ನೀಡಿದರು.