ಕನ್ನಡಪ್ರಭ ವಾರ್ತೆ ಕಡೂರು
ಕಡೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಜನರಿಗೆ ಬಸ್ ಸಂಚಾರಕ್ಕಾಗಿ ಗ್ರಾಮೀಣ ಭಾಗದ 12 ಮಾರ್ಗಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.ಈ ಬಗ್ಗೆ ಕಡೂರಿನ ಶಾಸಕರ ಕಚೇರಿಯಲ್ಲಿ ನಡೆದ ರಾಜ್ಯ ರಸ್ಥೆ ಸಾರಿಗೆ ಸಂಸ್ಥೆ ಕಡೂರು ಉಪ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಬಸ್ ಸಂಪರ್ಕ ಇಲ್ಲದ ಗ್ರಾಮಗಳು ಇರಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಅನೇಕ ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳು ಮುಖ್ಯ ರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸುತ್ತವೆಯಾದರೂ, ಪ್ರಯಾಣಿಕರು ಹಾಗು ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಅಲ್ಲಿಂದ ತಮ್ಮ ಊರಿಗೆ ನಡೆದೇ ಹೋಗಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಇದನ್ನು ತಪ್ಪಿಸುವ ಆಶಯ ತಮ್ಮದು. ಕೂಡಲೇ ಅಂತಹ ಮಾರ್ಗ ಗುರುತಿಸಿ 12 ಮಾರ್ಗಗಳಲ್ಲಿನ ಗ್ರಾಮಗಳಿಗೂ ಬಸ್ ಸಂಚಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಪ್ರಯಾಣಿಕರ ಸೌಲಭ್ಯಕ್ಕಾಗಿ ಸಾರಿಗೆ ಇಲಾಖೆ ಹೊಸದಾಗಿ ಬಸ್ ಖರೀದಿಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಮಾಡಿದ್ದರ ಫಲವಾಗಿ ನಮ್ಮ ತಾಲೂಕಿಗೂ 4 ಬಸ್ ನೀಡಲಾಗಿದೆ. ಮತ್ತಷ್ಟು ಬಸ್‌ಗಳಿಗಾಗಿ ಮನವಿ ಮಾಡಲಾಗಿದೆ. ಶೀಘ್ರದಲ್ಲೆ ಹೆಚ್ಚಿನ ಸಂಖ್ಯೆ ಬಸ್ ತಾಲೂಕಿಗೆ ಬರಲಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗಾಗಿ ಸಾರ್ವಜನಿಕರಿಂದ ಯಾವುದೇ ದೂರುಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು. ಕಡೂರು ಮತ್ತು ಬೀರೂರಿನಲ್ಲಿ ಹೊಸ ಬಸ್ ಸ್ಟಾಂಡ್ ನಿರ್ಮಾಣಕ್ಕೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆ ಕಾರ್ಯವೂ ಶೀಘ್ರದಲ್ಲಿ ಅನುಷ್ಟಾನಗೊಳ್ಳಲಿದೆ. ಇದಕ್ಕೆ ಎಲ್ಲ ರೀತಿ ಸಿದ್ಧತೆ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್, ಕಾರ್ಮಿಕ ಕಲ್ಯಾಣಾಧಿಕಾರಿ ಚೆನ್ನಬಸಪ್ಪ, ಕಡೂರು ಬಸ್ ಡಿಪೋ ಪ್ರಭಾರ ಮ್ಯಾನೇಜರ್ ಪುಟ್ಟಸ್ವಾಮಿ ಇದ್ದರು.
ಹೊಸಾಗಿ ಗುರುತಿಸಿರುವ ಮಾರ್ಗಗಳುಕಡೂರು-ಚೌಳ ಹಿರಿಯೂರು, ತುರುವನಹಳ್ಳಿ ಮಾರ್ಗ
ಕಡೂರು-ಎಮ್ಮೆದೊಡ್ಡಿಕಡೂರು-ಚಿಕ್ಕಂಗಳ
ಕಡೂರು-ಕೆರೆಸಂತೆಕಡೂರು-ಹುಲೆಗೊಂದಿ