ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ರಂಗನಾಥಪುರ ಕ್ರಾಸ್‌ನಲ್ಲಿ ನಡೆದ ಹೋಬಳಿ ಮಟ್ಟದ ಒಕ್ಕಲಿಗರ ವೇದಿಕೆ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಒಕ್ಕಲಿಗರ ಸಮುದಾಯವನ್ನು ಅತ್ಯಂತ ಹಿಂದುಳಿದ ಸಮುದಾಯ ಎಂದು ಪರಿಗಣಿಸಿ ಪರಿಶಿಷ್ಟ ಜಾತಿ ವರ್ಗಗಳಿಗೆ ನೀಡುತ್ತಿರುವ ಮಾದರಿಯಲ್ಲಿಯೇ ವಿಶೇಷ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.
ಒಕ್ಕಲಿಗರು ಶೇ.100ರಷ್ಟು ಕೃಷಿಕರು. ಭೂಮಿ ನಂಬಿ ನಾಡಿಗೆ ಅನ್ನ ಬೆಳೆಯುತ್ತಿರುವ ಒಕ್ಕಲಿಗರು ಇಂದು ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಕ್ಕಲಿಗರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲ. ಪ್ರಾಕೃತಿಕ ವಿಕೋಪಗಳು ಮತ್ತಿತರ ಕಾರಣಗಳಿಂದ ಬೆಳೆ ನಷ್ಟಕ್ಕೊಳಗಾದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ವೈಜ್ಞಾನಿಕ ಪರಿಹಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸರ್ಕಾರದ ಯೋಜನೆಗಳಿಗಾಗಿ ಭೂ ಸ್ವಾಧೀನ ಮಾಡಿಕೊಂಡರೆ ಭೂಮಿ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುತ್ತಿಲ್ಲ. ರಾಜ್ಯದ ಶೇ.70ರಷ್ಟು ಒಕ್ಕಲಿಗರು ಸಣ್ಣ ಸಣ್ಣ ಹಿಡುವಳಿದಾರರಾಗಿದ್ದು ಇಂದು ಭೂಮಿಯನ್ನೆ ನಂಬಿ ಬದುಕಲಾರದ ಪರಿಸ್ಥಿತಿಯಲ್ಲಿ ಒಕ್ಕಲಿಗ ಜನಾಂಗವಿದೆ ಎಂದರು.
ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್ ಮಾತನಾಡಿದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಮುಖಂಡರಾದ ಲೋಕೇಶ್, ಮಹದೇವೇಗೌಡ, ಕಿರಣ್‌ಕುಮಾರ್, ಮಹದೇವೇಗೌಡ, ಬಿಜೆಪಿ ಮುಖಂಡ ಭಾರತೀಪುರ ಪುಟ್ಟಣ್ಣ, ದಿವಾಕರ್, ಸ್ವಾಮೀಗೌಡ, ಕೋಟಹಳ್ಳಿ ಶ್ರೀನಿವಾಸ್ ಹಲವರಿದ್ದರು.