ನರಸಿಂಹರಾಜಪುರ: ಭಾರತ ವಿವಿಧತೆಯಲ್ಲಿ ವೈವಿಧ್ಯತೆ ದೇಶವಾಗಿದ್ದು ಪ್ರತಿಯೊಬ್ಬ ಮಕ್ಕಳೂ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.
ಲಯನ್ಸ್ ಕ್ಲಬ್ ರೀಸನ್ 15 ರ ರೀಜನಲ್ ಛೇರ್ಮನ್ ಸಿಜು ಮಾತನಾಡಿ, ಲಯನ್ಸ್ ಕ್ಲಬ್ ಇಂದು 200 ದೇಶಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮಕ್ಕಳ ಪ್ರತಿಭೆ ಹೊರ ತರಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಒಂದು ವಿಷಯದ ಥೀಮ್ ನೀಡಲಾಗುತ್ತದೆ. ಈ ವರ್ಷ ನಾವೆಲ್ಲರೂ ಒಗ್ಗೂಡಿ ಬಾಳೋಣ ಎಂಬ ವಿಷಯ ನೀಡಲಾಗಿದೆ.
ಈ ವಿಷಯ ಇಟ್ಟುಕೊಂಡು ಮಕ್ಕಳು ಚಿತ್ರ ಬರೆಯಬೇಕಾಗಿದೆ. ಆಯಾ ದೇಶದ ಲಯನ್ಸ್ ಕ್ಲಬ್ ಗಳು ಸ್ಥಳೀಯ ಶಾಲೆಗಳ 5,6,7 ನೇ ತರಗತಿ ಮಕ್ಕಳಿಗೆ ಚಿತ್ರ ಕಲೆಸ್ಪರ್ಧೆ ನಡೆಸುತ್ತದೆ. ನಮ್ಮ ದೇಶ, ರಾಜ್ಯ, ನಾವೆಲ್ಲರೂ ಒಂದು ಎಂಬುದು ಪೀಸ್ ಪೋಸ್ಟರ್ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.ಸಭೆಯಲ್ಲಿ ಲಯನ್ಸ್ ಕ್ಲಬ್ ನ ರೀಜನ್- 15 ರ ಪ್ರಾಂತೀಯ ರಾಯಬಾರಿ ಎಂಪಿ ಸನ್ನಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಟಿ.ಎಲ್ದೋ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಭಾರಿ ಪ್ರಾಂಶುಪಾಲ ವಿಶ್ವನಾಥ್, ಡ್ರಾಯಿಂಗ್ ಟೀಚರ್ ಜ್ಯೋತಿ ಇದ್ದರು. ಸಹ ಶಿಕ್ಷಕಿ ಸುಹಾಸಿನಿ ಸ್ವಾಗತಿಸಿದರು. ಸಹ ಶಿಕ್ಷಕಿ ಭಾನು ವಂದಿಸಿದರು.