ಕನ್ನಡಪ್ರಭ ವಾರ್ತೆ ಮಾಲೂರು
ಅವರು ಪಟ್ಟಣದ ಮಾರುತಿ ಬಡಾವಣೆಯ ಭೋವಿ ಸಮುದಾಯದ ಭವನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಆಸೋಷಿಯೇಷನ್ ವತಿಯಿಂದ ಮಾಲೂರು ತಾಲೂಕಿನ ನೂತನ ಸಮಿತಿಗೆ ಚಾಲನೆ ನೀಡಿ ಮಾತನಾಡಿದರು.
ಟೈಲರ್ಗಳಿಗೆ ಅಗತ್ಯ ಸೌಲಭ್ಯಈ ಹಿಂದೆ ಟೈಲರ್ಸ್ ಹೊಲಿಯುವ ಬಟ್ಟೆಗಳಿಗೆ ಬಹಳ ಬೇಡಿಕೆ ಇತ್ತು. ಆದರೆ ಈಗ ರೆಡಿಮೇಡ್ ಬಟ್ಟೆಗಳಿಂದ ಟೈಲರ್ಸ್ ವೃತ್ತಿಗೆ ಕುತ್ತು ಬಂದಿದೆ. ಅತಿ ಹೆಚ್ಚು ಬಡವ ಅಥವಾ ಮಧ್ಯಮ ವರ್ಗದವರಿರುವ ಟೈಲರ್ಸ್ ಇದರಿಂದ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸಬೇಕಾಗಿ ಬಂದಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಮುಖಾಂತರ ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ಟೈಲರ್ಸ್ ಗಳಿಗೆ ವಿವಿಧ ರೀತಿಯ ಸೌಲಭ್ಯ ಸವಲತ್ತು ಗಳನ್ನು ಒದಗಿಸಲು ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಟೈಲರ್ಸ್ ಆಸೋಷಿಯೇಷನ್ ರಾಜ್ಯಾಧ್ಯಕ್ಷ ಬಿ.ಎ.ನಾರಾಯಣ್ ಮಾತನಾಡಿ, 40 ವರ್ಷ ಮೇಲ್ಪಟ್ಟ ವೃತ್ತಿಪರ ಟೈಲರ್ಸ್ ಗಳಿಗೆ ನಿರತವಾಗಿ ಆರೋಗ್ಯ ಸಮಸ್ಯೆ ಎದುರಿಸವಂತಾಗಿದೆ ಎಂದ ರಾಜ್ಯಾಧ್ಯಕ್ಷರು ರಾಜ್ಯಸರ್ಕಾರವು ನಿರ್ಲಕ್ಷಕ್ಕೆ ಒಳಗಾಗಿರುವ ಟೈಲರ್ಸ್ ಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಸಮಿತಿ ನೂತನ ವರ್ಷದ ಕ್ಯಾಲೆಂಟರ್ ಅನ್ನು ಗಣ್ಯರು ಬಿಡುಗಡೆ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಪುರಸಭೆ ಸದಸ್ಯ ಆರ್.ವೆಂಕಟೇಶ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ್ ,ಕೆ.ಪಿ.ಸಿ.ಸಿ.ಸದಸ್ಯ ಪ್ರದೀಪ್ ರೆಡ್ಡಿ , ರಾಜ್ಯ ಟೈಲರ್ಸ್ ಆಸೋಷಿಯೇಷನ್ ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ , ಕೋಶಾಧಿಕಾರಿ ರಾಮಚಂದ್ರ, ತಾಲೂಕು ಘಟಕದ ಅಧ್ಯಕ್ಷ ಉಪೇಂದ್ರ ಇನ್ನಿತರರು ಇದ್ದರು.