ಮಳೆ ಹಾನಿಗೆ ನ್ಯಾಯಸಮ್ಮತ ಪರಿಹಾರ

KannadaprabhaNewsNetwork |  
Published : Sep 24, 2025, 01:04 AM IST
ಬೀಳಗಿ ಪಟ್ಟಣದ ಅಂಬೇಡ್ಕರ್‌ ನಗರ ಕಾಲೋನಿಯಲ್ಲಿ ಭಾನುವಾರ ದಿನ ಮಳೆಯಾಗಿದ್ದರ ಪರಿಣಾಮ ರಾತ್ರಿ ವೇಳೆಯಲ್ಲಿ ಮನೆಗಳಿಗೆ ನೀರು ನುಗ್ಗಿದ ಸ್ಥಳಗಳನ್ನು ಶಾಸಕ ಜೆ.ಟಿ.ಪಾಟೀಲ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಅಪಾರ ಮಳೆಯಾಗಿದ್ದರಿಂದ ಸಾಕಷ್ಟು ಮನೆಗಳಿಗೆ ಮತ್ತು ಜಮೀನುಗಳಿಗೆ ನೀರು ಹರಿದ ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಬೀಳಗಿ

ಈ ಬಾರಿ ಸುಮಾರು 20 ವರ್ಷಗಳಲ್ಲಿ ಕಂಡ ಅರಿಯದಂತ ಮಳೆಯಾಗಿದೆ. ಕಳೆದೆರಡು ದಿನಗಳ ಹಿಂದೆ ತಾಲೂಕಿನ ಎಲ್ಲಡೇ ಸಾಕಷ್ಟು ಪ್ರಮಾಣದಲ್ಲಿ ಅಪಾರ ಮಳೆಯಾಗಿದ್ದರಿಂದ ಸಾಕಷ್ಟು ಮನೆಗಳಿಗೆ ಮತ್ತು ಜಮೀನುಗಳಿಗೆ ನೀರು ಹರಿದ ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾಗಿದೆ. ಸರ್ಕಾರದಿಂದ ಸಿಗುವ ನ್ಯಾಯಸಮ್ಮತವಾದ ಪರಿಹಾರ ದೊರಕಿಸುವುದಾಗಿ ಶಾಸಕ ಜೆ.ಟಿ.ಪಾಟೀಲ ಭರವಸೇ ನೀಡಿದರಲ್ಲದೇ ಹಾನಿಗೊಳಗಾದ ಬೆಳೆ ಮತ್ತು ಮನೆಗಳ ಹಾನಿ ಸಮಗ್ರ ಮಾಹಿತಿ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕೆಂದು ಹೇಳಿದರು.

ಭಾರೀ ಸುರಿದ ಮಳೆಗೆ ಧರೆಗುಳಿದ ಮನೆಗಳನ್ನು ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನಾದ್ಯಾಂತ 7.3ಮೀ.ಮೀ ಮಳೆಯಾಗಬೇಕಾಗಿತ್ತು. ಆದರೆ ಭಾನುವಾರ ರಾತ್ರಿ ಸುಮಾರು 90.4 ಮೀ.ಮೀ ಮಳೆಯಾಗಿದೆ. ಇದರಿಂದ ಕೃಷಿಕರ ಬೆಳೆಗಳು ಅಪಾರ ಹಾನಿಯಾಗಿವೆ. ಪಟ್ಟಣದಲ್ಲಿ 50 ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ರಾತ್ರಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಬೀಳಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿನ ಮನೆಗಳ ಮಾಹಿತಿ ಮತ್ತು ಜಮೀನುಗಳ ಹಾನಿಯನ್ನು ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಮಾಹಿತಿ ಪಡೆದುಕೊಳ್ಳಬೇಕು. ಇನ್ನೂ ಹೆಚ್ಚು ಮಳೆಯಾಗುವ ಸಂಭವ ಇದೆ. ಇದರಿಂದ ಅಪಾರ ಪ್ರಮಾಣದ ಸಣ್ಣಸಣ್ಣ ಬೆಳೆಗಳು ಹಾನಿಯಾಗಿವೆ ಸರ್ಕಾರ ನಿಗದಿ ಮಾಡಿದ ಪರಿಹಾರ ಒದಗಿಸಲಾಗುವುದು.

ಬೀಳಗಿ ಪಟ್ಟಣ ಅಂಬೇಡ್ಕರ್‌ ನಗರ ಸ್ಲಂ ಏರಿಯಾದ ಕೆಲವು ಮನೆಗಳು ಹಾಗೂ ತೋಳಮಟ್ಟಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದಲ್ಲದೇ ಮತ್ತು ಸುನಗ ರೈತರ ರಾಶಿ ಮಾಡಿದ 40ಕ್ಕಿಂತ ಹೆಚ್ಚು ಚೀಲ ಸಜ್ಜೆ ಹಾಳಾಗಿದೆ ಎಂದರು.

ಬೀಳಗಿ ಪಪಂ ಮುಂಭಾಗದಲ್ಲಿರುವ ಚರಂಡಿಯಲ್ಲಿ ನೀರು ಹರಿಯುತ್ತಿದೆ. ಇದು ಅಂಬೇಡ್ಕರ್‌ ನಗರದ ಚರಂಡಿ ಮೂಲಕ ಹೊರಗಡೆ ಹೊಗುತ್ತಿದ್ದು. ಭಾನುವಾರ ದಿನ ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಅಲ್ಲಿಯ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ರಾತ್ರಿ ನೀರು ನುಗ್ಗಿದೆ. ಪಪಂನಿಂದ ಜಮಖಂಡಿ ಮಾರ್ಗವಾಗಿ ಹೋಗುವ ರಸ್ತೆಯ ಪಕ್ಕದ ಚರಂಡಿ ಸಣ್ಣ ಪ್ರಮಾಣದಲ್ಲಿ ಇರುವುದರಿಂದ ನೀರು ಹರಿಯಲು ತೊಂದರೆಯಾಗುತ್ತದೆ. ಇದರಿಂದ ಅಲ್ಲಿಯೇ ಸಮಸ್ಯೆಗೆ ಪರಿಹಾರ ನೀಡಲಿಕ್ಕೆ ರಾಜ್ಯ ಕಾಲುವೆ ನಿರ್ಮಿಸಿದರೆ ಮಾತ್ರ ಇಂತಹ ಸಮಸ್ಯೆಯಿಂದ ಹೊರಬರಲು ಸಾಧ್ಯ. ಇದಕ್ಕೆ ಸುಮಾರು ₹6.5 ಕೋಟಿಯಷ್ಟು ಹಣ ಬೇಕಾಗಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ತಹಸೀಲ್ದಾರ್‌ ವಿನೋದ ಹತ್ತಳ್ಳಿ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಅಜ್ಜು ಬಾಯಿಸರ್ಕಾರ, ಮಹಾದೇವ ಹಾದಿಮನಿ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಸಂಗಪ್ಪ ಕಂದಗಲ್ಲ. ಬಸವರಾಜ ಹಳ್ಳದಮನಿ, ಸಿದ್ದು ಸಾರವರಿ, ಸಂಗಪ್ಪ ಕಂದಗಲ್ಲ ಇತರರು ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ