ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಿಗೆ ಕಾರ್ಯಾಗಾರ ಕಾರ್ಯಕ್ರಮ
ನ್ಯಾಯಬೆಲೆ ಅಂಗಡಿ, ಆರೋಗ್ಯ ಕೇಂದ್ರಗಳ ಬಗ್ಗೆ ಗಮನವಿಟ್ಟು ಕೆಲಸ ಮಾಡಬೇಕು. ಆ ಸೇವೆಗಳು ಅಭಿವೃದ್ಧಿ ಜತೆಗೆ ಬಡ ಕುಟುಂಬಗಳನ್ನು ತಲುಪಬೇಕು ಎಂದು ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್ ಚಿಕ್ಕಮಗಳೂರು ಜಿಲ್ಲೆ ಸಂಯೋಜಕ ಶ್ರೀನಿವಾಸ್ ಹೇಳಿದರು.ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್, ತಾಲೂಕು ಚುನಾಯಿತ ಗ್ರಾಪಂ ಮಹಿಳಾ ಸದಸ್ಯರು ಸುಗ್ರಾಮ ಒಕ್ಕೂಟ, ತಾಪಂ ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಇದು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಕರ್ತವ್ಯವೂ ಹೌದು. ವರ್ಷದ ಯೋಜನೆ ರೂಪಿಸಿ ಅದರಂತೆ ಕೆಲಸ ಮಾಡಬೇಕು. ಡಿ. 2025 ತನಕ ಉತ್ಸುಕರಾಗಿ ಕೆಲಸ ಮಾಡಿ, ಎಲ್ಲಾ ಇಲಾಖೆ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಮಾಡುವ ಜೊತೆಗೆ ಮತ್ತು ಪಂಚಾಯಿತಿ ಒಳಗಡೆ ಅತ್ಯುತ್ತಮವಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಅಜ್ಜಂಪುರ ತಾಲೂಕಿನ ಸುಗ್ರಾಮ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ರವರು ಮಾತನಾಡಿ, ಉಳಿದ ಒಂದು ವರ್ಷದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ವಿಶ್ರಮಿಸದೆ ಗ್ರಾಮದ ಪ್ರಧಾನ ಸೇವಕರಾಗಿ ಕೆಲಸ ಮಾಡಿ, ಏನೇ ಸವಾಲುಗಳು ಬಂದರೂ ಅದನ್ನು ಎದುರಿಸಿ ಒಂದು ವರ್ಷವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರುಸಂಪನ್ಮೂಲ ವ್ಯಕ್ತಿ ಸುಧಾ ಮಾತನಾಡಿ ಪ್ರತಿಯೊಂದು ಇಲಾಖೆ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಇಲಾಖೆಗಳಿಂದ ಸಿಗುವ ಸೌಲಭ್ಯ ಮತ್ತು ಪಂಚಾಯಿತಿ ಯೋಜನೆಯಂತೆ ಕೆಲಸ ಮಾಡಲು ಸೂಚಿಸಿದರು.ಹಾದಿಕೆರೆ ಗ್ರಾಪಂ ಅಧ್ಯಕ್ಷೆ ರೇಖಾ ಮಾತನಾಡಿ ನನಗೆ ಈ ದಿನ ತುಂಬಾ ಸಂತೋಷವಾಗಿದೆ. ನನ್ನ ಸಹಪಾಠಿಗಳಾದ ಗ್ರಾಪಂ ಚುನಾಯಿತ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ನನ್ನ ಗ್ರಾಮ ಪಂಚಾಯಿತಿನ ಭೇಟಿ ಮಾಡುವುದಕ್ಕೆ ಬಂದಿರುವುದು ತುಂಬಾ ಸಂತೋಷ. ನಮ್ಮ ಗ್ರಾಪಂನಲ್ಲಿ ಬಹಳ ಮುಖ್ಯವಾಗಿ ಸಾಮಾನ್ಯ ಸಭೆ, ಕೆಡಿಪಿ ಸಭೆ ಮತ್ತು ಆಡಳಿತ ವರ್ಗದವರೊಂದಿಗೆ ಸೇರಿ ಸಮಾಜ ಸೇವೆಯಲ್ಲಿ ತೊಡಗಿ ಅಂಗನವಾಡಿ ಶಾಲೆ ನ್ಯಾಯ ಬೆಲೆ ಅಂಗಡಿ ಆರೋಗ್ಯ ಕೇಂದ್ರಗಳನ್ನ ಅಭಿವೃದ್ಧಿಪಡಿಸಿ ಇದರ ಜೊತೆಗೆ ಕೆರೆ ಮತ್ತು ಸ್ಮಶಾನ ಭೂಮಿಗಳ ಅಭಿವೃದ್ಧಿ, ಕಸ ನಿರ್ವಹಣೆಯನ್ನು ಚೆನ್ನಾಗಿ ಮಾಡುತ್ತಿದ್ದೇವೆ ಎಂದುತಿಳಿಸಿದರು.
ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್ ಚಿಕ್ಕಮಗಳೂರು ಜಿಲ್ಲಾ ಸಂಯೋಜಕ ಶ್ರೀನಿವಾಸ್ ಮಾತನಾ ಡಿದರು. ದೋರನಾಳು ಗ್ರಾ.ಪಂ.ಅಧ್ಯಕ್ಷ ಮಲ್ಲಪ್ಪ, ಪಿ.ಡಿ.ಒ.ಸುರೇಶ್ ಮತ್ತಿತರರು ಇದ್ದರು.