ಕನ್ನಡಪ್ರಭ ವಾರ್ತೆ ಸಕಲೇಶಪುರ
ಭಾನುವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ದಿ ಹಾಗೂ ವಾಣಿಜ್ಯ ವಿಷಯಗಳ ಪ್ರಯೋಗಿಕತೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಾನವನಲ್ಲೂ ಒಂದಲ್ಲ ಒಂದು ವಿಭಿನ್ನ ಕೌಶಲ್ಯ ಸುಪ್ತವಾಗಿ ಅಡಕವಾಗಿರುತ್ತದೆ. ಇದನ್ನು ಹೊರತೆಗೆಯುವ ಉದ್ದೇಶದಿಂದ ಇಂತಹ ಮೇಳಗಳನ್ನು ಆಯೋಜಿಸಲಾಗುತ್ತದೆ. ಇಂದು ಯಾವುದೇ ವೃತ್ತಿಯು ಕೀಳು ಮೇಲಲ್ಲ. ತಾವು ಮಾಡುವ ಕಾಯಕದ ಬಗ್ಗೆ ನಿಷ್ಠೆ ಹಾಗೂ ಪ್ರಮಾಣಿಕತೆ ಹೊಂದಿದ್ದರೆ ತಮ್ಮ ಭವಿಷ್ಯ ಉಜ್ವಲಗೊಳ್ಳಲಿದೆ. ಮಾಡುವ ಕೆಲಸವನ್ನೆ ವಿಭಿನ್ನವಾಗಿ ಮಾಡಬೇಕು ಎಂದರು. ಇದರಿಂದ ಮಾತ್ರ ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಆರ್ಥಿಕವಾಗಿಯು ಸದೃಢಗೊಳ್ಳಬಹುದು. ಇದಕ್ಕೆ ಉದಾಹರಣೆ ಎಂದರೆ ಅಮೆರಿಕದ ಕೆಎಫ್‌ಸಿ ಚಿಕನ್ ಮಾಲೀಕರಾದ ಹಾರ್ಲ್ಯಾಂಡ್ ಸ್ಯಾಂಡರ್ಸ್ ತಮ್ಮ ೬೯ನೇ ವಯಸ್ಸಿನಲ್ಲಿ ಅತ್ಯಂತ ರುಚಿಕರವಾಗಿ ಚಿಕನ್ ಖಾದ್ಯ ಸಿದ್ಧಪಡಿಸಿ ಮನೆಮನೆ ಮಾತಾಗಿದ್ದಲ್ಲದೆ. ಪ್ರಪಂಚದಾದ್ಯಂತ ತಮ್ಮ ಶಾಖೆಗಳನ್ನು ತೆರೆದು ಬೃಹತ್ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಆದ್ದರಿಂದ ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದರು.
ಆಹಾರ ಮೇಳದಲ್ಲಿ ವಿದ್ಯಾರ್ಥಿಗಳೇ ಸಿದ್ಧಪಡಿಸಿ ತಂದಿದ್ದ ಸುಮಾರು ೬೦ಕ್ಕೂ ಬಗೆಬಗೆಯ ಖಾದ್ಯಗಳನ್ನು ಜನರು ಕೊಂಡು ತಿಂದು ಆನಂದಿಸಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ರಮೇಶ್ ಉಪಸ್ಥಿತರಿದ್ದರು.