ಕನ್ನಡಪ್ರಭ ವಾರ್ತೆ ಯರಗಟ್ಟಿ
ಸಮೀಪದ ಸುಕ್ಷೇತ್ರ ಜಾಲಿಕಟ್ಟಿ ಜೀವಾಪೂರ ಗ್ರಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಅಂಗವಾಗಿ ಜರುಗಿದ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿರಂತರವಾಗಿ ಜಾತ್ರೆಗಳು ನಡೆಯಬೇಕು. ಅವಾಗ ಧರ್ಮ ಜಾಗೃತವಾಗುತ್ತದೆ ಎಂದರು.
ಬೆಳಗ್ಗೆಯಿಂದ ಭಕ್ತರ ದಂಡು ಮೋಟಾರ್ ಸೈಕಲ್, ಎತ್ತಿನ ಬಂಡಿ, ರೀಕ್ಷಾ, ಟೆಂಪೊ, ಟ್ರ್ಯಾಕ್ಟರ್ ಹಾಗೂ ಪಾದಯಾತ್ರೆ ಮೂಲಕ ಆಗಮಿಸಿ ನೈವೇದ್ಯ, ಭಕ್ತಿಯ ಕಾಣಿಕೆ ಸಮರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಆಶೀರ್ವಾದ ಪಡೆದರು.ಸಂಜೆ ಬಸವೇಶ್ವರ ರಥೋತ್ಸವವು ಅಪಾರ ಭಕ್ತರ ಮಧ್ಯೆ ಹರ ಹರ ಮಹಾದೇವ ಎಂಬ ಘೋಷಣೆ ಮೊಳಗಿತು. ಅನೇಕ ಭಕ್ತರು ಕಾಯಿ, ಉತ್ತತ್ತಿ ಹಾಗೂ ಬಾಳೆಹಣ್ಣು ತಥೋತ್ಸವಕ್ಕೆ ಹಾರಿಸಿ ತಮ್ಮ ಭಕ್ತಿ ಮೆರೆದರು.