ರಾಮನಗರ: ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಿ, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರು ಹೊರಗೆ ದೌಡಾಯಿಸಿದರು. ಮಾಹಿತಿ ದೊರೆತ ತಕ್ಷಣ ಪೊಲೀಸರು ಬಾಂಬ್ ಪತ್ತೆ ದಳು ಮತ್ತು ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಇದನ್ನು ಗಮನಿಸಿದ ಸ್ಟೆನೋಗ್ರಾಫರ್ ಕೂಡಲೇ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ನ್ಯಾಯಮೂರ್ತಿಗಳು ನ್ಯಾಯಾಲಯದ ಕಾರ್ಯಕಲಾಪಗಳನ್ನು ಸ್ಥಗತಿಗೊಳಿಸಿ ಆಡಳಿತ ವ್ಯವಸ್ಥೆ ಮತ್ತು ಸಿಬ್ಬಂದಿಗಳಿಗೆ ವಿಷಯ ತಿಳಿಸಿ ಜಾಗ್ರತೆ ವಹಿಸಿದರು.
ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್ ಪತ್ತೆ ದಳ ಮತ್ತು ನಿಷ್ಕ್ರಿಯ ದಳದೊಂದಿಗೆ ಕೋರ್ಟ್ ಬಳಿ ಆಗಮಿಸಿ ಬಾಂಬ್ ಪತ್ತೆಗೆ ಕ್ರಮ ಕೈಗೊಂಡರು. ನ್ಯಾಯಾಲಯದ ಆವರಣ, ಹಾಲ್ ಗಳು, ಕೊಠಡಿಗಳು, ಹೊರ ಆವರಣ, ವಾಹನ ನಿಲುಗಡೆ ತಾಣಗಳಲ್ಲಿ ಪರಿಶೀಲನೆ ನಡೆಸಿದರು.ಮಧ್ಯಾಹ್ನ 1.30ರ ವೇಳೆಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ತನಿಖೆ ನಂತರವಷ್ಟೇ ಪೊಲೀಸರಿಂದ ಸ್ಪಷ್ಟನೆ ಬರಬೇಕಿದೆ.
ಹುಸಿ ಬಾಂಬ್ ಬೆದರಿಕೆ ಬೆನ್ನಲ್ಲೆ ಸುರಕ್ಷತೆ, ಜೀವ ರಕ್ಷಣೆಯ ಮುಂಜಾಗ್ರತೆ ದೃಷ್ಟಿಯಿಂದ ಇಂದಿನ ಎಲ್ಲ ನ್ಯಾಯಾಲಯದ ಕಲಾಪಗಳನ್ನು ಮೊಟಕುಗೊಳಿಸಲಾಗಿದೆ.
ನ್ಯಾಯಾಧೀಶರಿಗೆ ಇ - ಮೇಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಬಂದಿರುವುದನ್ನು ಸ್ಟೆನೋ ಗ್ರಾಫರ್ , ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯದಿಂದ ನಮಗೆ ಮಾಹಿತಿ ಬಂದಿತು. ಬಾಂಬ್ ಪತ್ತೆ , ನಿಷ್ಕ್ರಿಯ ದಳ ಹಾಗೂ ಶ್ವಾನದಳ ತನಿಖೆ ಕೈಗೊಂಡಿದ್ದು, ಯಾವುದೇ ಸಂಶಯಾತ್ಮಕ ವಸ್ತುಗಳು ಕಂಡುಬಂದಿಲ್ಲ.
16ಕೆಆರ್ ಎಂಎನ್ 2,3.ಜೆಪಿಜಿ
3.ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಪತ್ತೆಗಾಗಿ ಶ್ವಾನದಳ ತಪಾಸಣೆ ನಡೆಸುತ್ತಿರುವುದು.