ನಕಲಿ ಚಿನ್ನ ಅಡಮಾನ ಪ್ರಕರಣ: ಮಹಾ ವಂಚಕ ಬಂಧನ

KannadaprabhaNewsNetwork |  
Published : Jul 13, 2026, 12:15 AM IST
12ಎಚ್.ಎಲ್.ಐ2  ಪಟ್ಟಣದಲ್ಲಿ ರಾಜ್ಯರೈತಸಂಘ, ಹಸಿರುಸೇನೆಯವತಿಯಿಂದ ಬರಗಾಲ ಘೋಷಣೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ    ರಾಜ್ಯಅಧ್ಯಕ್ಷ  ಕರಿಬಸಪ್ಪ ಗೌಡ ಅವರು ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನವನ್ನು ಅಡಮಾನವಿಟ್ಟು ಲಕ್ಷಾಂತರ ರುಪಾಯಿ ಸಾಲ ಪಡೆದಿದ್ದ ಜಾಲವನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

-ಯಾವ್ಯಾವ ಬ್ಯಾಂಕಲ್ಲಿ ಎಷ್ಟೆಷ್ಟು ಸಾಲ?- ಶಿವಮೊಗ್ಗದ ಸವಾರ್ ಲೈನ್ ರಸ್ತೆ ಪಿಎನ್‌ಬಿಯಲ್ಲಿ 163.300 ಗ್ರಾಂ ಅಡವಿಟ್ಟು ₹7,62,557

- ತೀರ್ಥಹಳ್ಳಿ ವರ್ತಕರ ಸೌಹಾರ್ದ ಸಂಘದಲ್ಲಿ 75.844 ಗ್ರಾಂ ಚಿನ್ನ ಅಡವಿಟ್ಟು ₹9,33,000

- ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ 75.01 ಗ್ರಾಂ ಚಿನ್ನ ಅಡವಿಟ್ಟು₹7,43,000

- ಗೋಪಾಳದ ಡಿ.ಸಿ.ಸಿ ಬ್ಯಾಂಕ್‌ನಲ್ಲಿ 48.28 ಗ್ರಾಂ ಚಿನ್ನ ಅಡಇಟ್ಟು ₹ 1,79,000

- ಸವಾರ್‌ಲೈನ್ ರಸ್ತೆಯ ಇಂಡಿಯನ್ ಓವರ್ಸಿಸ್ ಬ್ಯಾಂಕ್‌ನಲ್ಲಿ 26.490 ಗ್ರಾಂ ಇಟ್ಟು ₹1,10,000

- ನೇತಾಜಿ ಸರ್ಕಲ್‌ನ ಗುಲಾಬಿ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ 30.90 ಗ್ರಾಂ ಇಟ್ಟು ₹ 1,90,000

- ಒಟ್ಟಾರೆಯಾಗಿ 419.824 ಗ್ರಾಂ ನಕಲಿ ಆಭರಣಗಳನ್ನು ಅಡವಿಟ್ಟು ಒಟ್ಟು ₹ 28,87,237 ಸಾಲ

------------ಶಿವಮೊಗ್ಗ: ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನವನ್ನು ಅಡಮಾನವಿಟ್ಟು ಲಕ್ಷಾಂತರ ರುಪಾಯಿ ಸಾಲ ಪಡೆದಿದ್ದ ಜಾಲವನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಬಿಳ್ಮನೆ ಅರೆಕಲ್ಲು ಗ್ರಾಮದ ನಿವಾಸಿ ಲೋಕೇಶ್(39)ಎಂಬಾತನನ್ನು ಬಂಧಿಸಿದ್ದು, ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಸವಾರ್ ಲೈನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಕ್ರಾಂತಿಕುಮಾರ್ ಅವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದ ಚಿನ್ನಾಭರಣದ ಮೇಲೆ ಸುಮಾರು 7.35 ಲಕ್ಷ ರು. ಸಾಲ ಪಡೆದಿರುವ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದಾಗ, ಇದೇ ರೀತಿಯ ಕೃತ್ಯಗಳು ಹಲವು ಬ್ಯಾಂಕ್‌ಗಳು ಮತ್ತು ಸಂಸ್ಥೆಗಳಲ್ಲಿ ನಡೆದಿರುವುದು ಬಹಿರಂಗವಾಗಿದೆ.

ಬಂಧಿತ ಆರೋಪಿಯು ಪೊಲೀಸರ ತನಿಖೆಯಲ್ಲಿ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದು, ಆತ ವಿವಿಧ ಬ್ಯಾಂಕುಗಳಲ್ಲಿ ಹಾಗೂ ಜ್ಯುವೆಲ್ಲರಿ ಶಾಪ್‌ಗಳಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿರುವುದು ಬಹಿರಂಗಗೊಂಡಿದೆ.

ಶಿವಮೊಗ್ಗದ ಸವಾರ್ ಲೈನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 163.300 ಗ್ರಾಂ ಅಡವಿಟ್ಟು 7,62,557 ರು. ಸಾಲ, ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘ ನಿಯಮಿತದಲ್ಲಿ 75.844 ಗ್ರಾಂ ಬಂಗಾರವನ್ನು ಅಡವಿಟ್ಟು 9,33,000 ರು. ಸಾಲ, ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘದಲ್ಲಿ 75.01 ಗ್ರಾಂ ಬಂಗಾರ ಅಡವಿಟ್ಟು 7,43,000 ರು. ಸಾಲ, ಇದೇ ರೀತಿ ಗೋಪಾಳದ ಡಿ.ಸಿ.ಸಿ ಬ್ಯಾಂಕ್‌ನಲ್ಲಿ 48.28 ಗ್ರಾಂ ಇಟ್ಟು 1,79,000 ರು. ಸಾಲ, ಸವಾರ್‌ಲೈನ್ ರಸ್ತೆಯ ಇಂಡಿಯನ್ ಓವರ್ಸಿಸ್ ಬ್ಯಾಂಕ್‌ನಲ್ಲಿ 26.490 ಗ್ರಾಂ ಇಟ್ಟು 1,10,000 ರು. ಸಾಲ, ನೇತಾಜಿ ಸರ್ಕಲ್‌ನ ಗುಲಾಬಿ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ 30.90 ಗ್ರಾಂ ಇಟ್ಟು 1,90,000 ರು. ಸಾಲ, ಒಟ್ಟಾರೆಯಾಗಿ 419.824 ಗ್ರಾಂ ನಕಲಿ ಆಭರಣಗಳನ್ನು ಅಡವಿಟ್ಟು ಒಟ್ಟು 28,87,237 ರು. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.

ಪಂಜಾಬ್ ನ್ಯಾಷನಲ್ ಕೇಸ್ ನಲ್ಲಿ ತೀರ್ಥಹಳ್ಳಿ ತಾಲೂಕಿನ ಲೋಕೇಶ ಬಿ.ಜೆ, ಶಿವಮೊಗ್ಗ ಮಲವಗೊಪ್ಪದ ಸುಧಾ ಪ್ರತಾಪ ನಾಯಕ್, ಶಿವಮೊಗ್ಗ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಚಿನ್ನದ ಮೌಲ್ಯಮಾಪಕ ಎಸ್.ವೈ ರವಿಶಂಕರ್, ತೀರ್ಥಹಳ್ಳಿ ತಾಲೂಕಿನ ರಾಹುಲ್ ಭಾಸ್ಕರ್ ಹಾಗೂ ತೀರ್ಥಹಳ್ಳಿ ತಾಲೂಕಿನ ಶರತ್ ನಾಗರಾಜ್ ಪ್ರಕರಣದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಗಿರವಿ ಇಟ್ಟಿದ್ದ 28,87,237 ರು. ಮೌಲ್ಯದ 419.824 ಗ್ರಾಂ ನಕಲಿ ಬಂಗಾರವನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಳ್ಳಲಾಗಿದೆ.

ಪ್ರಕರಣ ಸಂಬಂಧ ಲೋಕೇಶ್ ಬಂಧಿತನಾಗಿದ್ದು, ಉಳಿದ ಸುಧಾ, ರಾಹುಲ್ ಮತ್ತು ಶರತ್ ಅವರು ಸಹ ಇದೇ ರೀತಿಯಲ್ಲಿ ನಕಲಿ ಬಂಗಾರವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಗಿರವಿ ಇಟ್ಟು ಸಾಲ ಪಡೆದಿರುವ ಬಗ್ಗೆ ಅನುಮಾನವಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ದೊಡ್ಡಪೇಟೆ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ, ಪಿಎಸ್‌ಐ ನಾರಾಯಣ ಮಧುಗಿರಿ ಮತ್ತು ಎಎಸ್‌ಐ ಚೂಡಾಮಣಿ, ಸಿಬ್ಬಂದಿ ಮನು, ಪುನೀತ್, ಸಂದೀಪ್, ಗುರುನಾಯ್ಕ್, ರಾಜೇಶ್ ಗೌಡ ಪಾಟೀಲ್ ಹಾಗೂ ಎನ್.ಪುಟ್ಟಮ್ಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ಜಗಳೂರು ತಾಲೂಕಿನ ೨೪ ಕೆರೆಗಳಿಗೆ ಹರಿದ ತುಂಗಭದ್ರೆ
ಜೋಗ ಜಲಪಾತ ವೀಕ್ಷಣೆಗೆ ಮುಗಿಬಿದ್ದ ಜನ