ಖೋಟಾ ನೋಟು ಜಾಲ ಪತ್ತೆ: ಇಬ್ಬರ ಬಂಧನ, ಓರ್ವ ಪರಾರಿ

KannadaprabhaNewsNetwork |  
Published : Sep 07, 2026, 01:15 AM IST
ಶಿವರಾಜ ತಂಗಡಗಿ | Kannada Prabha

ಸಾರಾಂಶ

Fake note network detected: Two arrested, one absconding

ಕಲಬುರಗಿ: ಖೋಟಾ ನೋಟು ತಯಾರಿಕೆ ಜಾಲ ಪತ್ತೆಯಾಗಿದೆ. ಕಲರ್ ಪ್ರಿಂಟಿಂಗ್ ಮಷಿನ್ ನಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದ ಖದೀಮರಿಬ್ಬರನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದಶರಥ್ ರಾಠೋಡ್, ಸಿದ್ರಾಮ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.ಒಂದು ಲಕ್ಷ ನೀಡಿದರೆ ಎರಡು ಲಕ್ಷ ವಾಪಸ್ ಕೊಡುವ ಆಫರ್ ಕೊಡುತ್ತಿದ್ದ, ಖದೀಮರು ಕಳೆದ ಮಾರ್ಚ್ ನಲ್ಲೇ ಮಷೀನ್ ಖರೀದಿಸಿ ನೋಟು ಮುದ್ರಿಸುವಲ್ಲಿ ತೊಡಗಿದ್ದರೆನ್ನಲಾಗಿದೆ. ಮುದ್ರಿಸಿದ ನೋಟು ಚಲಾವಣೆ ಮಾಡುವಲ್ಲಿ ವಿಫಲರಾಗಿದ್ದರು. ನಕಲಿ ನೋಟು ಸುಟ್ಟು ಹಾಕಿರುವ ಮಾಹಿತಿಯೂ ತನಿಖೆಯಲ್ಲಿ ದೊರಕಿದೆ. ರಾಜರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಈ ದಂಧೆ ನಡೆದಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ, ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬಆರೋಪಿ ಅಶ್ವಿನ್ ಕುಮಾರ್ ಪರಾರಿಯಾಗಿದ್ದಾನೆ. ₹500 ಮುಖ ಬೆಲೆಯ 28 ನೋಟು 14 ಸಾವಿರ ಮೌಲ್ಯದ ಖೋಟಾ ನೋಟು ಜಪ್ತಿಯಾಗಿವೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲ ತೀರಿಸಲು ನಕಲಿ ನೋಟು ಮುದ್ರಣಕ್ಕೆ ಮುಂದಾಗಿದ್ದಾಗಿ ಬಂಧಿತರು ಬಾಯಿಬಿಟ್ಟಿದ್ದಾರೆಂದು ಮೂಲಗಳು ಹೇಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರು ಪೂರೈಸಲು ಒತ್ತಾಯಿಸಿ ರಸ್ತೆ ತಡೆ ಚಳುವಳಿ
ಹೋರಾಟದ ಹಾದಿ ಹಿಡಿದಾದರು ಬರ ಪರಿಹಾರ ಪಡೆಯುತ್ತೇವೆ: ಸಚಿವ ಯತೀಂದ್ರ ಸಿದ್ದರಾಮಯ್ಯ