ನಕಲಿ ಬಿತ್ತನೆ ಬೀಜ: ಕೃಷಿ ಅಧಿಕಾರಿಗಳ ತಂಡ ಪರಿಶೀಲನೆ

KannadaprabhaNewsNetwork |  
Published : May 15, 2025, 01:35 AM IST
ರಾಣಿಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದ ಸಿ.ಸಿ. ಪಾಟೀಲ ಆಗ್ರೋ ಸೆಂಟರ್ ಗೋದಾಮಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಪರಿಶೀಲನೆ ವೇಳೆ ಎಲ್ಲಿಯೂ ನಕಲಿ ಬೀಜ ಪತ್ತೆಯಾಗಿಲ್ಲ ಹಾಗೂ ಸಾರ್ವಜನಿಕರನ್ನು ವಿಚಾರಿಸಲಾಗಿ ಎಲ್ಲಿಯೂ ನಕಲಿ ಬೀಜದ ದಾಸ್ತಾನು ಇಲ್ಲವೆಂದು ತಿಳಿಸಿದ್ದಾರೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಣಿಬೆನ್ನೂರು: ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಹಾವೇರಿ ವಿಚಕ್ಷಣ ದಳ ಮತ್ತು ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳ ಅಧಿಕಾರಿಗಳ ತಂಡ ಮಂಗಳವಾರ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಬೀಜ ಮಾರಾಟ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷಿ ಇಲಾಖೆ ಅಧಿಕಾರಿಗಳಾದ ಶಿವಲಿಂಗಪ್ಪ ವಿ.ಕೆ., ಶಿವಾನಂದ ಹಾವೇರಿ, ಅರವಿಂದ ಎಂ., ಕರಿಯಲ್ಲಪ್ಪ ಡಿ.ಕೆ., ಮಾರುತಿ ಅಂಗರಗಟ್ಟಿ, ಜಿ.ಎಂ. ಬತ್ತಿಕೊಪ್ಪ, ಬಸವರಾಜ ಮರಗಣ್ಣನವರ, ಜಗದೀಶ ಬಣಕಾರ, ನಾಗರಾಜ ಚಳಗೇರಿ, ವೀರೇಶ ಜೆ.ಎಂ. ಅವರು ನಾಲ್ಕು ತಂಡಗಳಾಗಿ ನಗರ ಹಾಗೂ ಗ್ರಾಮೀಣ ಭಾಗದ ಕಮದೋಡ, ಹೂಲಿಹಳ್ಳಿ, ಕೂನಬೇವು, ಅಂತರವಳ್ಳಿ, ಮಾಗೋಡ, ಚಳಗೇರಿ, ಕರೂರ, ಐರಣಿ, ನದಿಹರಳಹಳ್ಳಿ, ಹುಲಿಕಟ್ಟಿ, ಮಾಕನೂರ, ಗಂಗಾಪುರ, ಕುದರಿಹಾಳ ಮತ್ತು ಹರನಗಿರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಎಲ್ಲಿಯೂ ನಕಲಿ ಬೀಜ ಪತ್ತೆಯಾಗಿಲ್ಲ ಹಾಗೂ ಸಾರ್ವಜನಿಕರನ್ನು ವಿಚಾರಿಸಲಾಗಿ ಎಲ್ಲಿಯೂ ನಕಲಿ ಬೀಜದ ದಾಸ್ತಾನು ಇಲ್ಲವೆಂದು ತಿಳಿಸಿದ್ದಾರೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇಂದಿನಿಂದ ಬೀರೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ

ಬ್ಯಾಡಗಿ: ಪಟ್ಟಣದ ಶಿಡೇನೂರು ರಸ್ತೆಯಲ್ಲಿ ಮೇ 15 ಹಾಗೂ 16ರಂದು ಬೀರದೇವರ(ಹೊರಗುಡಿ) ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ಜರುಗಲಿದೆ.ಮೇ 15ರಂದು ಬೆಳಗ್ಗೆ 9 ಗಂಟೆಗೆ ಕಾಕೋಳ ರಸ್ತೆಯಿಂದ ಬೀರ ದೇವರ ಪಾಲಿಕೆ ಮೆರವಣಿಗೆ ಹೊರಗುಡಿ ಬೀರೇಶ್ವರ ದೇವಸ್ಥಾನದವರೆಗೂ ನಡೆಯಲಿದೆ. ಮೇ 16ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ಜರುಗಲಿದೆ. ಕಾಗಿನೆಲೆಯ ನಿರಂಜನಾನಂದ ಶ್ರೀ ಹಾಗೂ ಬಂಕಾಪುರದ ರೇವಣಸಿದ್ದೇಶ್ವರ ಶ್ರೀ ಸಾನ್ನಿಧ್ಯ ವಹಿಸುವರು.

ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸುವರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ನೂತನ ದೇವಸ್ಥಾನ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯ ಬಿ.ಎಂ. ಛತ್ರದ ಇತರರು ಪಾಲ್ಗೊಳ್ಳುವರು ಎಂದು ಬೀರೇಶ್ವರ ಪಂಚ ಸಮಿತಿ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ