ಕೊಲ್ಲೂರು ದೇವಳ ಹೆಸರಿನ ನಕಲಿ ವೆಬ್‌ಸೈಟ್‌: ಭಕ್ತರಿಗೆ ವಂಚನೆ

KannadaprabhaNewsNetwork |  
Published : Nov 06, 2025, 03:00 AM IST
32 | Kannada Prabha

ಸಾರಾಂಶ

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಆರಂಭಿಸಿ ಭಕ್ತರನ್ನು ವಂಚಿಸಿದ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೊಲ್ಲೂರು: ಇಲ್ಲಿನ ಪ್ರಸಿದ್ಧ ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಆರಂಭಿಸಿ ಭಕ್ತರನ್ನು ವಂಚಿಸಿದ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೇವಳದ ಅಧಿಕೃತ ವೆಬ್‌ಸೈಟ್‌ http://karnatakatemplesaccommodation.com ಬದಲಿಗೆ karnataka temple accommodation ಎಂಬ ಹೆಸರಿನ ಅನಧಿಕೃತ ನಕಲಿ ವೆಬ್‌ಸೈಟನ್ನು ದುಷ್ಕರ್ಮಿಗಳು ರಚಿಸಿದ್ದು, ಅದರ ಮೂಲಕ ಹಲವಾರು ಜನರಿಗೆ ವಂಚಿಸಿದ್ದು ಬೆಳಕಿಗೆ ಬಂದಿದೆ. ದೇವಾಲಯದ ಲಲಿತಾಂಬಿಕಾ ಅತಿಥಿ ಗೃಹದಲ್ಲಿ ಕೊಠಡಿಗಳನ್ನು ಕಾದಿರಿಸಲು ಈ ಅಧಿಕೃತ ವೆಬ್‌ಸೈಟ್‌ ಆರಂಭಿಸಲಾಗಿದೆ. ಅಗತ್ಯವುಳ್ಳವರು ಈ ವೆಬ್‌ಸೈಟ್‌ನಲ್ಲಿ ಕ್ಯೂಆರ್ ಕೋಡ್‌‌‌‌‌‌‌‌‌‌‌‌‌‌ ಮೂಲವಕ ಹಣ ಪಾವತಿಸಿ ಕೋಠಡಿ ಕಾಯ್ದಿರಿಸುವ ವ್ಯವಸ್ಥೆ ಇದೆ.

ಆದರೆ, ಈ ನಕಲಿ ವೆಬ್‌ಸೈಟಿನಲ್ಲಿ ದುಷ್ಕರ್ಮಿಗಳು ಬೇರೆಯೇ ಕ್ಯೂಆರ್ ಕೋಡ್‌ ನೀಡಿದ್ದು, ಅದನ್ನು ನಂಬಿದ ಭಕ್ತರು ಅದಕ್ಕೆ ಹಣ ಪಾವತಿಸುತಿದ್ದರು. ಈ ಹಣ ದೇವಾಲಯದ ಖಾತೆಗೆ ಬಾರದೇ ದುಷ್ಕರ್ಮಿಗಳ ಜೇಬು ಸೇರುತ್ತಿತ್ತು, ಅತ್ತ ಕೊಠಡಿ ಕೂಡ ಸಿಗುತ್ತಿರಲಿಲ್ಲ.

ಈ ಬಗ್ಗೆ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ದೂರು ನೀಡಿದ್ದಾರೆ. ಎಷ್ಟು ಮಂದಿಗೆ ಈ ರೀತಿ ಮೋಸವಾಗಿದೆ ಎಂಬುದು ಖಚಿತವಾಗಿಲ್ಲದಿದ್ದರೂ ವರ್ಷದಿಂದ ಲಕ್ಷಕ್ಕೂಅಧಿಕ ರು. ಮೊತ್ತ ದುಷ್ಕರ್ಮಿಗಳ ಪಾಲಾಗಿರುವುದಾಗಿ ಹೇಳಲಾಗಿದೆ.

ಹಿಂದೆಯೂ ಆಗಿತ್ತು ಮೋಸ:

ಕೊಲ್ಲೂರಿನಲ್ಲಿ ಈ ನಕಲಿ ವೆಬ್‌ಸೈಟ್ ಹಾವಳಿ ಹೊಸತೇನಲ್ಲ, 2019ರಲ್ಲಿ ದೇವಾಲಯದ ಅಧಿಕೃತ ವೆಬ್‌ಸೈಟ್‌ನ್ನು ದುಷ್ಕರ್ಮಿಗಳು ನಕಲಿ ಮಾಡಿ, ದೇವಿಗೆ ಪೂಜೆ ಸೇವೆಯ ಹೆಸರಿನಲ್ಲಿ, ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದ ಪ್ರಕರಣ ಸೆನ್ ಠಾಣೆಗೆ ದಾಖಲಾಗಿತ್ತು. ನಂತರ ಈ ನಕಲಿ ವೆಬ್‌ಸೈಟ್‌ ಸ್ಥಗಿತಗೊಳಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾರಣ ತಾಣಗಳು ಇಂದು ದುಬಾರಿ ಆಗುತ್ತಿವೆ: ಡಾ.ಶ್ರೀಧರ್‌
5 ವರ್ಷದಲ್ಲಿ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ದ್ವಿಗುಣಕ್ಕೆ ನಿರ್ಧಾರ