ಸಂಗೀತ ವಿವಿ ಬಗ್ಗೆ ಮಿಥ್ಯಾರೋಪ: ಕ್ರಿಮಿನಲ್‌ ಕೇಸ್‌ ಎಚ್ಚರಿಕೆ

KannadaprabhaNewsNetwork |  
Published : Mar 16, 2025, 01:47 AM IST
ಗಂಗೂಬಾಯಿ ಸಂಗೀತ ವಿವಿ ಲೋಗೋ | Kannada Prabha

ಸಾರಾಂಶ

ವಿಶೇಷ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಗಳು 2024 ರ ಅಕ್ಟೋಬರ್‌ನಲ್ಲಿ ಮುಗಿದಿದ್ದು ಡಿಸೆಂಬರ್ 4 ರಿಂದ ಎಲ್ಲ ಪರೀಕ್ಷೆಗಳ ಫಲಿತಾಂಶವನ್ನು ಹಂತ ಹಂತವಾಗಿ ಪ್ರಕಟಿಸಲಾಗಿದೆ. 2025ರ ಜನವರಿ 4 ರಂದು ಪತ್ರಿಕಾಗೋಷ್ಠಿಯನ್ನು ಕರೆಯುವ ಮೂಲಕ ಎಲ್ಲ ವಿಭಾಗಗಳ ರ್‍ಯಾಂಕ್‌ ಮೆರಿಟ್ ಲಿಸ್ಟ್ ಪ್ರಕಟಿಸಲಾಗಿದೆ. ಪರೀಕ್ಷಕರಿಗೆ ಗೌರವಧನ, ಪ್ರಯಾಣ ಭತ್ಯೆ, ಪರೀಕ್ಷಾ ಕೇಂದ್ರಗಳ ನಿರ್ವಹಣಾ ವಚ್ಚವನ್ನು ಪಾವತಿಸಿಲ್ಲ ಎಂಬುದಾಗಿ ಮಾಡಿರುವ ಆಪಾದನೆಯೂ ಸಂಪೂರ್ಣ ಸುಳ್ಳು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಂಗಳೂರು ಮೂಲದ ಸಂಘಟನೆಯೊಂದರ ಹೆಸರಿನಲ್ಲಿ ಮಾಡಲಾಗಿರುವ ಆಪಾದನೆಗಳು ಸತ್ಯಕ್ಕೆ ದೂರವಾಗಿದ್ದು, ದುರುದ್ದೇಶ ಮತ್ತು ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿವೆ. ಕೆಲವರು ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಮತ್ತು ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಲಾಗಿದ್ದು, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ತಿಳಿಸಿದೆ.

ವಿಶೇಷ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಗಳು 2024 ರ ಅಕ್ಟೋಬರ್‌ನಲ್ಲಿ ಮುಗಿದಿದ್ದು ಡಿಸೆಂಬರ್ 4 ರಿಂದ ಎಲ್ಲ ಪರೀಕ್ಷೆಗಳ ಫಲಿತಾಂಶವನ್ನು ಹಂತ ಹಂತವಾಗಿ ಪ್ರಕಟಿಸಲಾಗಿದೆ. 2025ರ ಜನವರಿ 4 ರಂದು ಪತ್ರಿಕಾಗೋಷ್ಠಿಯನ್ನು ಕರೆಯುವ ಮೂಲಕ ಎಲ್ಲ ವಿಭಾಗಗಳ ರ್‍ಯಾಂಕ್‌ ಮೆರಿಟ್ ಲಿಸ್ಟ್ ಪ್ರಕಟಿಸಲಾಗಿದೆ. ಪರೀಕ್ಷಕರಿಗೆ ಗೌರವಧನ, ಪ್ರಯಾಣ ಭತ್ಯೆ, ಪರೀಕ್ಷಾ ಕೇಂದ್ರಗಳ ನಿರ್ವಹಣಾ ವಚ್ಚವನ್ನು ಪಾವತಿಸಿಲ್ಲ ಎಂಬುದಾಗಿ ಮಾಡಿರುವ ಆಪಾದನೆಯೂ ಸಂಪೂರ್ಣ ಸುಳ್ಳು. ಕಲಾ ಸಂಯೋಜಕರ ಭತ್ಯೆಯನ್ನು ಫೆಬ್ರವರಿ 15 ರಂದು ಪಾವತಿಸಲಾಗಿದೆ.

ವಿನಾ ಕಾರಣ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದುರುದ್ದೇಶಪೂರಿತವಾಗಿ ಹೇಳಿಕೆ ನೀಡುವವರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸುವುದಾಗಿ ವಿವಿಯ ಕುಲಸಚಿವರ ಪ್ರಕಟಣೆ ತಿಳಿಸಿದೆ.

----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು