ಹೊಸಕೋಟೆ: ದೇಶಕ್ಕೆ ಅನ್ನ ನೀಡುವ ರೈತರಿಗೆ ಮಹತ್ವವಿದ್ದರೂ, ಕೃಷಿ ಲಾಭದಾಯಕ ಆಗದಿರುವುದು ಬೇಸರದ ಸಂಗತಿ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ತಿಳಿಸಿದರು.
ಜನಸಂಖ್ಯೆ ಹೆಚ್ಚಾದಂತೆ ಅವಿಭಕ್ತ ಕುಟುಂಬಗಳು ಇಬ್ಬಾಗವಾಗಿ ದೊಡ್ಡ ರೈತರು ಅತಿ ಸಣ್ಣ ರೈತರಾಗಿ ಬದಲಾವಣೆ ಆಗುತ್ತಿದ್ದು, ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಖರ್ಚಾಗುತ್ತಿದೆ. ಬೆಳೆಯ ಮೌಲ್ಯಕ್ಕಿಂತ ೩ ಪಟ್ಟು ಹಣ ವ್ಯಯವಾಗುತ್ತಿದೆ. ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ರೈತರು ಸಮಗ್ರ ಕೃಷಿ, ಮೌಲ್ಯಧಾರಿತ ಸುಸ್ಥಿರ ಕೃಷಿಯಿಂದ ಲಾಭದತ್ತ ಮುನ್ನಡೆಯಲು ಸಾಧ್ಯ ಎಂದರು.
ಎಸ್‌ಎಫ್‌ಸಿಎಸ್ ನಿರ್ದೇಶಕ. ಎಚ್.ಕೆ.ನಾರಾಯಣಗೌಡ ಮಾತನಾಡಿ, ರೈತರು ಬೇಸಾಯದ ಪರಿಣತಿಯನ್ನು ಕೃಷಿ ವಿದ್ಯಾರ್ಥಿಗಳಿಗೆ ಕಲಿಯಲೆಂದು ೩ ತಿಂಗಳ ಕಾಲ ಗ್ರಾಮದಲ್ಲೆ ವಾಸ್ತವ್ಯ ಹೂಡಿದ್ದು, ರೈತರಿಗೆ ವೈಜ್ಞಾನಿಕ, ಸಮಗ್ರ ಹಾಗೂ ಮೌಲ್ಯಧಾರಿತ ಕೃಷಿ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಸರೋಜಮ್ಮ ಮಾತನಾಡಿ, ಜೀವನಕ್ಕೆ ಮೊದಲ ಅಗತ್ಯವೆಂದರೆ ಕೃಷಿಯಿಂದ ಸಿಗುವ ಆಹಾರ. ಇಂದು ಇಡೀ ಜಗತ್ತು ಕೃಷಿಯ ಮೇಲೆ ಅವಲಂಬಿತವಾಗಿದೆ. ಹಸಿರು ಕ್ರಾಂತಿಯಿಂದಾಗಿ ಭಾರತ ಕೃಷಿಯಲ್ಲಿ ಸ್ವಾವಲಂಬಿಯಾಗಿದೆ ಎಂದರು.
ಪೋಟೋ: 6 ಹೆಚ್‌ಎಸ್‌ಕೆ 2
ಹೊಸಕೋಟೆ ತಾಲೂಕಿನ ಹಿಂಡಿಗನಾಳದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಸಸ್ಯ ಸಂಸ್ಕೃತಿ ವಿಚಾರಗೋಷ್ಠಿ ಹಾಗೂ ಕೃಷಿ ಮೇಳ, ವಸ್ತು ಪ್ರದರ್ಶನವನ್ನು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಉದ್ಘಾಟಿಸಿದರು.