ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಶ್ರೀಗಂಧ ಬಳಗ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮಿಲನ ಮಹೋತ್ಸವದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಭದ್ರತೆ ಹಾಗೂ ಆರ್ಥಿಕ ಭದ್ರತೆ ಅಗತ್ಯವಿದ್ದು, ಕುಟುಂಬಗಳು ಆರೋಗ್ಯ ವಿಮೆ ಸೇರಿದಂತೆ ವಿವಿಧ ಭದ್ರತಾ ಯೋಜನೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಶ್ರೀಗಂಧ ಬಳಗದ ಸದಸ್ಯರು ಸರ್ಕಾರದ ವಿವಿಧ ಸಬ್ಸಿಡಿ ಸಾಲಗಳ ಸದುಪಯೋಗ ಪಡೆದುಕೊಂಡು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಹಾಗೂ ಹೊಸ ಉದ್ಯಮ ಆರಂಭಿಸಲು ಅವಕಾಶಗಳಿವೆ ಎಂದು ತಿಳಿಸಿದರು.ಮನರಂಜನೆಯ ಜೊತೆಗೆ ಮನೋವಿಕಾಸ ಹಾಗೂ ಕುಟುಂಬದ ಭದ್ರತೆಯನ್ನು ಬಲಪಡಿಸುವಲ್ಲಿ ಇಂತಹ ಸಮ್ಮಿಲನ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಸಣ್ಣ ವ್ಯಾಪಾರಿಗಳು ಮತ್ತು ವೃತ್ತಿದಾರರು ಸೇರಿ ಶ್ರೀಗಂಧ ಬಳಗದ ಮೂಲಕ ಸಂಘಟಿತರಾಗಿದ್ದು, ಸದಸ್ಯರಿಗೆ ತೊಂದರೆ ಉಂಟಾದಲ್ಲಿ ಎಲ್ಲರೂ ಕುಟುಂಬ ಸದಸ್ಯರ ರೀತಿ ನೆರವಾಗುತ್ತಿರುವುದು ಸಂಘದ ವಿಶೇಷ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಏಕಾಂತ ಎಸ್.ಎಂ., ಕಾರ್ಯದರ್ಶಿ ಶ್ರವಣಕುಮಾರ್, ಮಾಜಿ ಅಧ್ಯಕ್ಷ ಕೆ.ರುದ್ರೇಶ್, ಹರೀಶ್ ಜಿ.ಸಿ., ಷಡಕ್ಷರಿ ಎಂ.ಬಿ., ಬಸವರಾಜ್, ವೀರೇಶ್ ಎಂ.ಎಚ್, ಮಂಜುನಾಥ್ ಪೂಜಾರ್, ಶಿವಕುಮಾರ ಸ್ವಾಮಿ, ಚನ್ನಬಸಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗೀತಾ ರುದ್ರೇಶ್ ಪ್ರಾರ್ಥಿಸಿ, ಪ್ರಭು ನೆಲೋಗಲ್ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ಶರತ್ ನಿರೂಪಿಸಿ ವಂದಿಸಿದರು.