ಪರಿಹಾರದ ಹಣ ನಿರಾಕರಿಸಿದ ಮೃತ ವಿದ್ಯಾರ್ಥಿನಿ ಕುಟುಂಬಸ್ಥರು

KannadaprabhaNewsNetwork |  
Published : Jul 06, 2025, 01:49 AM IST
ಸುದ್ಧಿಗೋಷ್ಠಿ | Kannada Prabha

ಸಾರಾಂಶ

ಕೊಪ್ಪ , ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾರದ ಹಿಂದೆ ೯ನೇ ತರಗತಿ ವಿದ್ಯಾರ್ಥಿನಿ ಶಮಿತಾ ಸಾವಿಗೀಡಾಗಿರುವುದು ದುಃಖಕರ ವಿಷಯ. ಆ ಸಮಯದಲ್ಲಿ ನಾನು ಗುಜರಾತ್‌ನಲ್ಲಿ ಅಧ್ಯಯನ ಪ್ರವಾಸದಲ್ಲಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಗುಜರಾತ್ ನಿಂದ ಬಂದವನೇ ನೇರವಾಗಿ ಬೋಳಾಪುರದ ಹಸೂಡಿಯಲ್ಲಿರುವ ವಿದ್ಯಾರ್ಥಿನಿ ಮನೆಗೆ ಹೋಗಿ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಪ್ಪ

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾರದ ಹಿಂದೆ ೯ನೇ ತರಗತಿ ವಿದ್ಯಾರ್ಥಿನಿ ಶಮಿತಾ ಸಾವಿಗೀಡಾಗಿರುವುದು ದುಃಖಕರ ವಿಷಯ. ಆ ಸಮಯದಲ್ಲಿ ನಾನು ಗುಜರಾತ್‌ನಲ್ಲಿ ಅಧ್ಯಯನ ಪ್ರವಾಸದಲ್ಲಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಗುಜರಾತ್ ನಿಂದ ಬಂದವನೇ ನೇರವಾಗಿ ಬೋಳಾಪುರದ ಹಸೂಡಿಯಲ್ಲಿರುವ ವಿದ್ಯಾರ್ಥಿನಿ ಮನೆಗೆ ಹೋಗಿ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು. ಸಂಜೆ ೭ರ ಸಮಯದಲ್ಲಿ ಶಾಸಕರ ಕಚೇರಿ ಸಮರ್ಪಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೃತ ಬಾಲಕಿಗೆ ಸರ್ಕಾರದಿಂದ ನೀಡಿದ ₹೪ ಲಕ್ಷ ರೂ.ಪರಿಹಾರದ ಚೆಕ್ ಅನ್ನು ಮೃತಳ ತಂದೆ ತಾಯಿ ಮತ್ತು ಕುಟುಂಬಸ್ಥರು ಸ್ವೀಕರಿಸಲು ನಿರಾಕರಿಸಿದ್ದಾರೆ. ೨೦೨೩ರಲ್ಲಿ ನಾರ್ವೆ ಭಾಗದ ಅಮೂಲ್ಯ ಎಂಬ ೯ನೇ ತರಗತಿ ವಿದ್ಯಾರ್ಥಿನಿ ಸಾವಿಗೀಡಾಗಿದ್ದಳು. ವಾರದ ಹಿಂದೆ ಹಸೂಡಿಯ ಶಮಿತ ಕೂಡ ಅದೇ ರೀತಿಯಾಗಿ ಸಾವಿಗೀಡಾಗಿರುವುದು ಸಾರ್ವಜನಿಕರಂತೆ ನಮ್ಮಲ್ಲೂ ಅನುಮಾನ ಮೂಡಿಸಿದೆ. ಹಣಕ್ಕಿಂತಲೂ ನಮ್ಮ ಮಗಳ ಸಾವಿನ ನ್ಯಾಯಯುತ ತನಿಖೆಯಾಗಬೇಕೆಂದು ಮನವಿ ಮಾಡಿದ್ದಾರೆ.ಬಾಲಕಿಯ ಸಾವಿನ ಸಮಗ್ರ ತನಿಖೆಯಾಗಬೇಕೆಂಬ ಉದ್ದೇಶದಿಂದಲೇ ವಿದ್ಯಾರ್ಥಿನಿ ವಿಚಾರ ತಿಳಿದ ಕೂಡಲೇ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಎಲ್ಲಾ ವಿಚಾರ ತಿಳಿದುಕೊಂಡು ಕೊಪ್ಪ ಸರ್ಕಾರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಬಂದ ವಿದ್ಯಾರ್ಥಿನಿ ಶವವನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಕೂಡಲೇ ಪ್ರಾಮಾಣಿಕ ತನಿಖೆ ಮಾಡಿಸಲಾಗುವುದು ಎಂದ ಅವರು ಮೊರಾರ್ಜಿ ಶಾಲಾ ದುರಸ್ತಿಗೆ ಹಣ ಮಂಜೂರು ಮಾಡಲಾಗಿದೆ.

ಸುಣ್ಣಬಣ್ಣ ನಿರ್ವಹಣೆಗಾಗಿಯೂ ಹಣವನ್ನು ಮಂಜೂರುಗೊಳಿಸಲಾಗಿದೆ. ಮಳೆ ಕಡಿಮೆಯಾದ ಕೂಡಲೇ ಕೆಲಸ ಆರಂಭಿಸ ಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ವಸತಿ ಶಾಲೆ ಎಲ್ಲಾ ಅಧಿಕಾರಿ, ಪೋಷಕರನ್ನು ಕರೆಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ