ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕೆ.ಆರ್. ನಗರ ತಾಲೂಕಿನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ ಕಡೂರಿಗೆ ವರ್ಗಾವಣೆಗೊಂಡ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರಿಗೆ ಸಹೊದ್ಯೋಗಿಗಳು ಮತ್ತು ಕಚೇರಿ ಕಚೇರಿ ಸಿಬ್ಬಂದಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಪ್ರಾಮಾಣಿಕರಾಗಿ ಕರ್ತವ್ಯ ಮಾಡಿದರೆ ಸರ್ಕಾರದ ಸವಲತ್ತುಗಳು ಅರ್ಹ ಜನರ ಮನೆ ಬಾಗಿಲಿಗೆ ತಲುಪಿ ಇದರಿಂದ ಸರ್ಕಾರದ ಮೂಲ ಉದ್ದೇಶ ಮತ್ತು ಆಶಯ ಈಡೇರಲಿದ್ದು ಇದನ್ನು ಅರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಒಂದು ವರ್ಷದ ಸೇವಾ ಅವಧಿಯಲ್ಲಿ ಸಿ.ಎಸ್. ಪೂರ್ಣಿಮಾ ಅವರು ಜನಪರವಾದ ಕೆಲಸಗಳನ್ನು ಮಾಡಿ ಸಾರ್ವಜನಿಕರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯ ಮನ ಗೆದ್ದಿದ್ದು, ಇದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೆ.ಆರ್. ನಗರ ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಶಿರಸ್ತೇದಾರ್ ಅಸ್ಲಾಂಬಾಷಾ, ನಿವೃತ್ತ ಗ್ರೇಡ್-2 ತಹಸೀಲ್ದಾರ್ ಕೆ.ಎಸ್. ಬಾಲಸುಬ್ರಹ್ಮಣ್ಯಂ, ಎಡಿಎಲ್.ಆರ್. ಶ್ರೀಕಂಠಶರ್ಮ, ಉಪತಹಸೀಲ್ದಾರ್ ಕೃಷ್ಣಮೂರ್ತಿ, ಮಾತನಾಡಿ, ಸಿ.ಎಸ್. ಪೂರ್ಣಿಮಾ ಅವರ ಕೆಲಸದ ಶೈಲಿಯ ಬಗೆ ಗುಣಗಾನ ಮಾಡಿದರು.